ಇಳಕಲ್: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಭಾರಿ ಗಾಳಿಯೊಂದಿಗೆ ಮಳೆ ಸುರಿಯಿತು.
ಬಿಸಿಲು ಬೇಗೆಯಿಂದ ತತ್ತರಿಸಿದ್ದ ಜನತೆ ಬಿರುಗಾಳಿ ಹಾಗೂ ಮಳೆ ತಂಪು ನೀಡಿತು. ದಿಢೀರ್ ಬಂದ ಮಳೆ ಹಾಗೂ ಬಿರುಗಾಳಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಂಗಡಿಕಾರರು ತೊಂದರೆ ಅನುಭವಿಸಿದರು. ತಿಂಡಿ, ತಿನಿಸು ಮಾರುತ್ತಿದ್ದ ಬೀದಿ ಬದಿಯ ಅಂಗಡಿಕಾರರ ಸಾಮಗ್ರಿ ರಸ್ತೆಯಲ್ಲಿ ಬಿದ್ದವು. ಜನರು ಆ ವಸ್ತುಗಳನ್ನು ರಕ್ಷಿಸಲು ವ್ಯಾಪಾರಿಗೆ ಸಹಕಾರ ಮಾಡಿದರು. ಬಟ್ಟೆ ವ್ಯಾಪಾರಿಗಳ ಬಟ್ಟೆಗಳೂ ಹಾರಿಹೋದವು.