ಆ್ಯಪ್ನಗರ

ವಾಲ್ಮೀಕಿ ಶಾಸಕರಿಗೆ ಡಿಸಿಎಂ ಸ್ಥಾನ ಕೊಡಿ

ಬಾಗಲಕೋಟೆ: 'ವಾಲ್ಮೀಕಿ ಸಮಾಜದ ಶಾಸಕರಿಗೆ ಡಿಸಿಎಂ ಸ್ಥಾನ ನೀಡಬೇಕು' ಎಂದು ಜಿಲ್ಲಾವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ರಾಜು ನಾಯ್ಕರ ಆಗ್ರಹಿಸಿದರು.

Vijaya Karnataka 30 Aug 2019, 5:00 am
ಬಾಗಲಕೋಟೆ: 'ವಾಲ್ಮೀಕಿ ಸಮಾಜದ ಶಾಸಕರಿಗೆ ಡಿಸಿಎಂ ಸ್ಥಾನ ನೀಡಬೇಕು' ಎಂದು ಜಿಲ್ಲಾವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ರಾಜು ನಾಯ್ಕರ ಆಗ್ರಹಿಸಿದರು.
Vijaya Karnataka Web give dcm a seat for valmiki legislators
ವಾಲ್ಮೀಕಿ ಶಾಸಕರಿಗೆ ಡಿಸಿಎಂ ಸ್ಥಾನ ಕೊಡಿ


ನಗರದಲ್ಲಿಗುರುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು '2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಆಗಿನ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಆಗಿ ನೇಮಕಗೊಳಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರ ದೊರೆತ 24 ಗಂಟೆಗಳಲ್ಲಿಜನಸಂಖ್ಯೆ ಆಧಾರದಂತೆ ವಾಲ್ಮೀಕಿ ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುತ್ತೇವೆ ಎಂದಿದ್ದರು. ನಾಯಕರ ಭರವಸೆಯಂತೆ ರಾಜ್ಯದಲ್ಲಿಶೇ.80 ರಷ್ಟು ಸಮಾಜ ಬಾಂಧವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಸರಕಾರ ಅಧಿಕಾರ ಪಡೆಯಲು ಕಾರಣರಾಗಿದ್ದಾರೆ' ಎಂದರು.

'ಇಂದಿನ ರಾಜಕೀಯ ಸ್ಥಿತಿಯಲ್ಲಿವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಿದೆ. ತಕ್ಷಣ ಸರಕಾರ ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಈ ಬಗ್ಗೆ ವಾಲ್ಮೀಕಿ ಪೀಠದಿಂದ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಸಿದರು. ಜಿಲ್ಲಾಪ್ರಧಾನ ಕಾರ್ಯದರ್ಶಿ ದ್ಯಾಮಣ್ಣ ಗಾಳಿ, ವೆಂಕಟೇಶ ಲೋಕಾಪುರ, ಯಲ್ಲಪ್ಪ ಕ್ಯಾದಿಗೇರಿ, ಬೆನ್ನಪ್ಪ ಬೀಳಗಿ, ಗೋವಿಂದ ಕೌಲಗಿ, ಟಿ.ವೈ.ಜಾನಮಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ