ಆ್ಯಪ್ನಗರ

ಕರದಂಟು ತಯಾರಿಕೆ ಕಂಡೀತೇ ಚೇತರಿಕೆ

ಲಾಕ್‌ಡೌನ್‌ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿದ್ದು ಕೆಲ ಚಟುವಟಿಕೆ ಲಾಕ್‌ಡೌನ್‌ನಿಂದ ರಿಯಾಯಿತಿ ಪಡೆದು ಶೀಘ್ರ ಚೇತರಿಸಿಕೊಂಡರೂ ಕೆಲ ಚಟುವಟಿಕೆಗಳು ಚೇತರಿಕೆ ಕಾಣುತ್ತಿಲ್ಲ, ಅದಕ್ಕೆ ಅರ್ಧ ವರ್ಷವೇ ಬೇಕು ಎನ್ನುವ ಆತಂಕ ಕಾಡುತ್ತಿದೆ.

Vijaya Karnataka Web 25 May 2020, 5:00 am
ಅಮೀನಗಡ : ಲಾಕ್‌ಡೌನ್‌ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿದ್ದು ಕೆಲ ಚಟುವಟಿಕೆ ಲಾಕ್‌ಡೌನ್‌ನಿಂದ ರಿಯಾಯಿತಿ ಪಡೆದು ಶೀಘ್ರ ಚೇತರಿಸಿಕೊಂಡರೂ ಕೆಲ ಚಟುವಟಿಕೆಗಳು ಚೇತರಿಕೆ ಕಾಣುತ್ತಿಲ್ಲ, ಅದಕ್ಕೆ ಅರ್ಧ ವರ್ಷವೇ ಬೇಕು ಎನ್ನುವ ಆತಂಕ ಕಾಡುತ್ತಿದೆ.
Vijaya Karnataka Web 190823AMD2_41


ವೈರಸ್‌ನಿಂದಾಗಿ ಮಾ.22ರಿಂದ ಬಹುತೇಕ ಚಟುವಟಿಕೆಗಳು ನಿಂತು ಹೋಗಿವೆ. ಇತ್ತೀಚೆಗೆ ಲಾಕ್‌ಡೌನ್‌ಗೆ ಕೊಂಚ ರಿಲೀಫ್‌ ನೀಡಿದ ಸರಕಾರ ಆರ್ಥಿಕ ಕುಸಿತ ಮೇಲೆತ್ತಲು ಹಲವು ಚಟುವಟಿಕೆಗೆ ಅವಕಾಶ ಕಲ್ಪಿಸಿದೆ. ಅಮೀನಗಡದ ಕರದಂಟು ಉದ್ಯಮ ಮಾತ್ರ ಮೇಲೆಳಲು 6-7 ತಿಂಗಳೇ ಬೇಕು ಎನ್ನುತ್ತಿದ್ದಾರೆ ಇಲ್ಲಿನ ಕರದಂಟು ತಯಾರಕರು.

ಪಟ್ಟಣದಲ್ಲಿನ 12-14 ಕರದಂಟು ಅಂಗಡಿ ಹಾಗೂ ಬೆಂಗಳೂರಿನಲ್ಲಿರುವ 2 ಮಳಿಗೆ ಸೇರಿ ದಿನಕ್ಕೆ 4ಲಕ್ಷ ರೂ.ಗೂ ಹೆಚ್ಚು ವ್ಯವಹಾರ ನಡೆಯುತ್ತಿದ್ದ ಕರದಂಟು ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಅಂದಾಜು 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ಮುಂಚೆ ಬೆಂಗಳೂರಿನಲ್ಲಿವಾರಕ್ಕೆ ನಾಲ್ಕೆತ್ರೖದು ಇವೆಂಟ್‌ಗಳಾದರೂ ಇರುತ್ತಿದ್ದು ಲಕ್ಷದವರೆಗೆ ವಹಿವಾಟು ನಡೆಯುತ್ತಿತ್ತು. ಸದ್ಯ ಅದೂ ಸಹ ಬಂದ್‌ ಆಗಿದ್ದರಿಂದ ಉದ್ಯಮವೇ ನಲುಗಿ ಹೋಗಿದೆ.

ಕರದಂಟು ಮನೆ ಮಾತು
ಮೊದಲು ಪಟ್ಟಣಕ್ಕೆ ಸೀಮಿತವಾದ ಕರದಂಟು ವ್ಯಾಪಾರ ಮೊದಲು ಜಿಲ್ಲೆ, ಉತ್ತರ ಕರ್ನಾಟಕ ಭಾಗ ಆಕ್ರಮಿಸಿ ಸದ್ಯ ರಾಜ್ಯದೆಲ್ಲೆಡೆ ಜನ ಕರದಂಟು ಸವಿ ಸವಿಯುತ್ತಿದ್ದಾರೆ. ಇಲ್ಲಿನ ಮೂಲ ಕರದಂಟು ತಯಾರಕರಾದ ವಿಜಯಾ ಕರದಂಟು ತಯಾರಕರು ಬೆಂಗಳೂರಲ್ಲೂ2 ಮಳಿಗೆ ತೆರೆದು ಕರದಂಟು ರುಚಿಯನ್ನು ರಾಜಧಾನಿಯಲ್ಲೂಪಸರಿಸಿದ್ದಾರೆ.

ಚೇತರಿಕೆಗೆ ಬೇಕು ಆರೇಳು ತಿಂಗಳು
ಕರದಂಟು ಉದ್ಯಮ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದರೂ ಮೊದಲಿನಷ್ಟು ಕರದಂಟು ತಯಾರಿಕೆಗೆ ಇಲ್ಲಿನ ವ್ಯಾಪಾರಿಗಳು ಮನಸ್ಸು ಮಾಡುತ್ತಿಲ್ಲ. ಪ್ರವಾಸಿಗರ ಕೊರತೆ, ಕೋರಿಯರ್‌ ಇಲ್ಲ, ಸಭೆ, ಸಮಾರಂಭಕ್ಕೆ ಅನುಮತಿ ಇಲ್ಲದಿರುವುವ ಕಾರಣದಿಂದ ಹಿಂದೇಟು ಹಾಕುತ್ತಿದ್ದಾರೆ.

ಲಾಕ್‌ಡೌನ್‌ಗೂ ಮುಂಚೆ ತಯಾರಿಸಿದ್ದ ಲಕ್ಷಾಂತರ ಮೌಲ್ಯದ ಕರದಂಟನ್ನು ಉಚಿತವಾಗಿ ಹಂಚಲಾಗಿದೆ. ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ನಮ್ಮೂರಿನ 5 ಹಾಗೂ ಬೆಂಗಳೂರಲ್ಲಿನ 2 ಮಳಿಗೆ ಸೇರಿ ಲಕ್ಷಾಂತರ ವಹಿವಾಟು ನಿಂತು ಹೋಗಿದೆ. ಕೊರೊನಾ ಭೀತಿ ಕರದಂಟು ಉದ್ಯಮವನ್ನು ನಲುಗಿಸಿದೆ.
-ಸಂತೋಷ ಐಹೊಳ್ಳಿ, ವಿಜಯಾ ಕರದಂಟು ಅಮೀನಗಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ