Please enable javascript.ಅಕಾಲಿಕ ಮಳೆ: ನೆಲಕಚ್ಚಿದ ಬಾಳೆ,ಸೂರ್ಯಕಾಂತಿ - ಅಕಾಲಿಕ ಮಳೆ: ನೆಲಕಚ್ಚಿದ ಬಾಳೆ,ಸೂರ್ಯಕಾಂತಿ - Vijay Karnataka

ಅಕಾಲಿಕ ಮಳೆ: ನೆಲಕಚ್ಚಿದ ಬಾಳೆ,ಸೂರ್ಯಕಾಂತಿ

ವಿಕ ಸುದ್ದಿಲೋಕ 26 Apr 2014, 4:45 am
Subscribe

ಇಚಲಕರಂಜಿ : ಕಳೆದ ಮೂರುದಿನಗಳಿಂದ ಸುರಿದ ಮಳೆಯಿಂದಾಗಿ ಇಚಲಕರಂಜಿ ಪರಿಸರದಲ್ಲಿಯ ಕಬ್ಬು ನುರಿಸುವ ಕಾರ್ಯ ಸಂಪೂರ್ಣ ನಿಂತಿದೆ. ಕಾರಣ ಗದ್ದೆಯಲ್ಲಿ ನೀರು ನಿಂತ ಕಬ್ಬು ಕಡೆಯಲು ತೊಂದರೆಯಾಗುತ್ತಿದೆ. ಇದೂ ಅಲ್ಲದೆ ಬೀಸಿದ ಬಿರುಗಾಳಿ ಹಾಗೂ ಆಲೆಕಲ್ಲು ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿಯ ಕಬ್ಬು,ಬಾಳೆ,ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ನೆಲಕ್ಕುರುಳಿವೆ.

ಅಕಾಲಿಕ ಮಳೆ: ನೆಲಕಚ್ಚಿದ ಬಾಳೆ,ಸೂರ್ಯಕಾಂತಿ
ಇಚಲಕರಂಜಿ : ಕಳೆದ ಮೂರುದಿನಗಳಿಂದ ಸುರಿದ ಮಳೆಯಿಂದಾಗಿ ಇಚಲಕರಂಜಿ ಪರಿಸರದಲ್ಲಿಯ ಕಬ್ಬು ನುರಿಸುವ ಕಾರ್ಯ ಸಂಪೂರ್ಣ ನಿಂತಿದೆ. ಕಾರಣ ಗದ್ದೆಯಲ್ಲಿ ನೀರು ನಿಂತ ಕಬ್ಬು ಕಡೆಯಲು ತೊಂದರೆಯಾಗುತ್ತಿದೆ. ಇದೂ ಅಲ್ಲದೆ ಬೀಸಿದ ಬಿರುಗಾಳಿ ಹಾಗೂ ಆಲೆಕಲ್ಲು ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿಯ ಕಬ್ಬು,ಬಾಳೆ,ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ನೆಲಕ್ಕುರುಳಿವೆ.

ಸಕಾಲಕ್ಕೆ ಕಾರ್ಖಾನೆಗಳಿಂದ ಕಬ್ಬು ಕಟಾವಾಗದೆ ಕಬ್ಬು ನಾಟಿಮಾಡಿ 14ರಿಂದ 16ತಿಂಗಳುಗಳು ಕಳೆದರೂ ಕಟಾವಾಗದ ಕಾರಣ ತೂಕ ಕಡಿಮೆಯಾಗಿ ಇಳುವರಿಯೂ ಕುಂಠಿತಗೊಳ್ಳುತ್ತಿದೆ. ಗಾಳಿಯಿಂದಾಗಿ ಶಿರೋಳ,ಹಾತಕಣಂಗಲೆ ತಾಲೂಕಿನಲ್ಲಿಯ ಬಾಳೆ,ನೆಲಸಮವಾಗಿದ್ದು ಕಲ್ಲಂಗಡಿ,ಮಾವು,ಹೀರೇಕಾಯಿ,ಸೌತೆಕಾಯಿಗಾಗಿ ಕಟ್ಟಿದ ಎಲೆಬಳ್ಳಿಗಳು ಸಹಿತ ನೆಲಸಮವಾಗಿ ಅಪಾರ ಹಾನಿಯಾಗಿದೆ.ಇದೂ ಅಲ್ಲದೆ ಕರವೀರ,ಆಜರಾ,ಗಡಿಂಗ್ಲಜ,ಕಾಗಲ ತಾಲೂಕಿನಲ್ಲಿ ಬೆಳೆದ ಸೂರ್ಯಕಾಂತಿ ಬೆಳೆಯೂ ನೆಲಸಮವಾಗಿ ರೈತರಿಗೆ ಅಪಾರ ನಷ್ಟವಾಗಿದೆ.

ಅಕಾಲಿಕ ಮಳೆಯಿಂದಾಗಿ ಸಕ್ಕರೆ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ. ದರ ನಿಗದಿಗಾಗಿ ನಡೆಸಲಾದ ಚಳವಳಿಯಿಂದಾಗಿ ಮೊದಲೇ ಕಬ್ಬು ನುರಿಸುವ ಹಂಗಾಮು ಒಂದು ತಿಂಗಳು ತಡವಾಗಿ ಪ್ರಾರಂಭಿಸಿದ್ದ ಸಕ್ಕರೆ ಕಾರ್ಖಾನೆಗಳು ಸದ್ಯ ಸುರಿದ ಮಳೆಯಿಂದಾಗಿ ಕಡ್ಡಾಯವಾಗಿ ಕಬ್ಬು ಕಟಾವು ನಿಲ್ಲಿಸಲಾಗಿದೆ. ಪರಿಣಾಮ ಕಳೆದ ಮೂರು ದಿನಗಳಲ್ಲಿ 2,10,000 ಟನ ಕಬ್ಬು ಕಟಾವಾಗದೆ ಹೊಲದಲ್ಲಿಯೇ ಉಳಿದುಕೊಂಡಿದೆ.

ಕೊಲ್ಲಾಪೂರ ಹಾಗೂ ಕರ್ನಾಟಕದ ಗಡಿಭಾಗದಲ್ಲಿಯ 10ಕ್ಕೂ ಅಧಿಕ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುವ ಕಾರ್ಯ ಹಂಗಾಮು ಮುಗಿಸಿದ್ದು ಜಿಲ್ಲೆಯಲ್ಲಿಯ ಇನ್ನೂ 14 ಸಕ್ಕರೆ ಕಾರ್ಖಾನೆಗಳು ಇನ್ನೂ ಕಬ್ಬು ನುರಿಸುತ್ತಿವೆ. ಎಲ್ಲ ಕಾರ್ಖಾನೆಗಳಿಂದ ಪ್ರತಿದಿನ ಸರಾಸರಿ 4500ರಿಂದ5000ಟನ್ ಕಬ್ಬು ನುರಿಸುತ್ತಿದ್ದು ಪ್ರತಿದಿನ ಸರಾಸರಿ 70000ಟನ್ ಕಬ್ಬು ನುರಿಸಲಾಗುತ್ತದೆ.

ಕಬ್ಬನ್ನು ಕಟಾವು ಮಾಡಲು ಹರಸಾಹಸ ಮಾಡುತ್ತಿರುವ ಕಟಾವು ಕೂಲಿಕಾರರು ಹಾಗೂ ಕಾರ್ಖಾನೆಯಲ್ಲಿ ಕಬ್ಬು ಇಳಿಸಲು ಎರಡೆರಡು ದಿನ ಸರದಿಯಲ್ಲಿ ನಿಂತ ಚಕ್ಕಡಿಗಳು (ಸಂಗ್ರಹಚಿತ್ರ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ