Please enable javascript.Grant,ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಿ - add iti colleges under grant - Vijay Karnataka

ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಿ

Vijaya Karnataka 20 Dec 2018, 5:00 am
Subscribe

ಬೆಳಗಾವಿ: 7 ವರ್ಷಗಳಿಂದ ತರಬೇತಿ ನೀಡುತ್ತಿರುವ ಖಾಸಗಿ ಕೈಗಾರಿಕಾ ತರಬೇತಿ(ಐಟಿಐ) ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ...

BEL-19 LBS 7
ಬೆಳಗಾವಿ : 7 ವರ್ಷಗಳಿಂದ ತರಬೇತಿ ನೀಡುತ್ತಿರುವ ಖಾಸಗಿ ಕೈಗಾರಿಕಾ ತರಬೇತಿ(ಐಟಿಐ) ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದ ಸದಸ್ಯರು ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ಖಾಸಗಿ ಐಟಿಐ ಕಾಲೇಜುಗಳು ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷ ಣ ನೀಡುತ್ತಿವೆ. ಈಗಾಗಲೇ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಖಾಸಗಿ ಐಟಿಐ ಕಾಲೇಜುಗಳು ಶಿಕ್ಷ ಣ ನೀಡಿವೆ. ಅದನ್ನು ಅರಿತುಕೊಂಡು ಈ ಹಿಂದೆ ಸರಕಾರಗಳು ಅನುದಾನ ನೀಡುತ್ತಾ ಬಂದಿವೆ. ಕೇಂದ್ರ ಸರಕಾರದ ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್ತು ಕನಿಷ್ಠ 7 ವರ್ಷಗಳು ಪೂರೈಸಿದ ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸವಂತೆ 1997 ನಿಯಮ ರೂಪಿಸಿದ್ದಾರೆ. ಅದರಂತೆ ಕಳೆದ ಹಲವು ಸರಕಾರಗಳು 104 ಐಟಿಐ ಕಾಲೇಜುಗಳಿಗೆ ಅನುದಾನ ನೀಡಲಾಗಿದೆ. ಆದರೆ, ಈಚೆಗೆ ಸರಕಾರ ಅನುದಾನಕ್ಕೆ ಒಳಪಡಿಸುತ್ತಿಲ್ಲ. ಇದರಿಂದ ಖಾಸಗಿ ಶಿಕ್ಷ ಣ ಸಂಸ್ಥೆಗಳು ನಡೆಸುವುದು ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಖಾಸಗಿ ಐಟಿಐ ಕಾಲೇಜುಗಳ ಉತ್ತೇಜನಕ್ಕಾಗಿ ಮತ್ತೆ ಏಳು ವರ್ಷಗಳು ಪೂರೈಸಿದ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಎಸ್‌.ಎಂ. ನೆರಬೆಂಚಿ, ನವೀನಕುಮಾರ ಕೆ.ಎಸ್‌., ಎಸ್‌.ಎಸ್‌. ಹೊಳಲ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ