ಆ್ಯಪ್ನಗರ

ಸೋನವಾಲ್ಕರ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

ವಿಕ ಸುದ್ದಿಲೋಕ ಮೂಡಲಗಿ ಸ್ಥಳೀಯ ಲಕ್ಷ್ಮೇ ಶಿಕ್ಷಣ ಸಂಸ್ಥೆಯ ನಂದಗೋಕುಲ ಪೂರ್ವ ಪ್ರಾಥಮಿಕ ಶಾಲೆ ಮತ್ತು ನೀಲವ್ವ ನಿಂಗಪ್ಪ ಸೋನವಾಲ್ಕರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ 7ನೇ ...

Vijaya Karnataka 16 Feb 2018, 5:00 am

ಮೂಡಲಗಿ: ಸ್ಥಳೀಯ ಲಕ್ಷ್ಮೇ ಶಿಕ್ಷಣ ಸಂಸ್ಥೆಯ ನಂದಗೋಕುಲ ಪೂರ್ವ ಪ್ರಾಥಮಿಕ ಶಾಲೆ ಮತ್ತು ನೀಲವ್ವ ನಿಂಗಪ್ಪ ಸೋನವಾಲ್ಕರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ 7ನೇ ವಾರ್ಷಿಕೋತ್ಸವ ಜರುಗಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಹಾಗೂ ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ ಶಿಕ್ಷಣ ಸಂಸ್ಥೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಐ.ಎಸ್‌. ಮುರಕಟ್ನಾಳ, ಸಾನ್ನಿಧ್ಯ ವಹಿಸಿದ್ದ ಪಾದಬೋಧ ಸ್ವಾಮೀಜಿ, ಅಧ್ಯಕ್ಷ ತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ವಿಜಯ ಸೋನವಾಲ್ಕರ ಮಾತನಾಡಿದರು.

ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ರಾಘವೇಂದ್ರ ನಾಯ್ಕ, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಟಿ. ಸೋನವಾಲ್ಕರ, ನಿರ್ದೇಶಕರಾದ ವೆಂಕಟೇಶ, ಸಂತೋಷ, ಸಂದೀಪ, ವಿಶ್ವನಾಥ ಕಲ್ಲೂರ ಮತ್ತು ಸುಮತಿ ಸೋನವಾಲ್ಕರ ವೇದಿಕೆಯಲ್ಲಿದ್ದರು.

ಸರೋಜ ಕಲ್ಲೂರ ಸ್ವಾಗತಿಸಿದರು. ಶೃತಿ ಬದ್ನೂರ ಮತ್ತು ನಿಖಿತಾ ಭೋಜ್ವಾನಿ ನಿರೂಪಿಸಿದರು. ಶಿವು ಗುಡ್ಲಿ ವಂದಿಸಿದರು. ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ