SATHISH JARAKIHOLI-ಬೆಳೆಯುತ್ತಿರುವ ಬೆಳಗಾವಿಗೆ ಭಂಗ ತರದಿರಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ನಗರದ ಗೋಗಟೆ ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ಯುವಕನ ಮೇಲೆ ಬೆಳಗಾವಿ ನಗರ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ಘಟನೆ, ಅದನ್ನು ಅಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಪದೇ ಪದೇ ಕನ್ನಡ, ಮರಾಠಿ ಆಗಬಾರದು. ಬೆಳಗಾವಿ ಬೆಳೆಯುತ್ತಿರುವ ನಗರ ಇದಕ್ಕೆ ಭಂಗ ತರುವ ಕೆಲಸ‌ ಮಾಡಬಾರದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯನ್ನು ಬೆಳೆಯಲು ಅವಕಾಶ ಕೊಡಬೇಕು. 20 ವರ್ಷದ ಹಿಂದೆ ಬೆಳಗಾವಿಯಲ್ಲಿ ಹಿಂದೂ,‌ ಮುಸ್ಲಿಂ ಗಲಾಟೆಯಾಗಿ ಅಭಿವೃದ್ಧಿ ಕುಂಠಿತವಾಗಿತ್ತು. ಸದ್ಯ ಈಗ ಇಂತಹ ಗಲಾಟೆಗಳು ತಣ್ಣಗಾಗಿದ್ದು, ಈಗ ಬೆಳಗಾವಿ ಬೆಳೆಯುತ್ತಿದೆ. ಬೆಳಗಾವಿ ಬೆಳೆಯಲು ಅವಕಾಶ ಮಾಡಿಕೊಡಬೇಕಿದೆ. ನಗರದಲ್ಲಿ ಯಾವುದೊಂದು ವಿಷಯಕ್ಕೆ ದೊಡ್ಡದಾಗಿ ಮಾಡುವುದು ಸರಿಯಲ್ಲ. ಠಾಣೆಗೆ ದೂರು ನೀಡಲು ಜನರು ಬಂದರೊಂದಿಗೆ ಪೊಲೀಸರು ಸಂಯಮದಿಂದ ನಡೆದುಕೊಳ್ಳಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳುವುದು ಪೊಲೀಸರ ನಡೆ ಸರಿಯಿಲ್ಲ. ಬೆಳಗಾವಿ ಬೆಳೆಯುತ್ತಿರುವ ನಗರ ಇದಕ್ಕೆ ಭಂಗ ತರುವ ಕೆಲಸ‌ ಮಾಡಬಾರದು ಎಂದು ತಿಳಿ ಹೇಳಿದರು.

ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಹಲ್ಲೆಗೈದ ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಬಿಜೆಪಿ ಸರ್ಕಾರಕ್ಕೆ ಧಮ್‌ ಇಲ್ಲ: ಸರ್ಕಾರಕ್ಕೆ ಇಂಥ ಪ್ರಕರಣದಲ್ಲಿ ಗಟ್ಟಿ ಕ್ರಮ ತೆಗೆದುಕೊಳ್ಳುವ ಅಥವಾ ಯಾವುದೇ ಪ್ರಕರಣದಲ್ಲಿ ಕ್ರಮ ಜರುಗಿಸುವ ಧಮ್ ಬಿಜೆಪಿ ಸರ್ಕಾರಕ್ಕಿಲ್ಲ. ಬಿಜೆಪಿ ಅವರು ಧಮ್ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಉಸ್ತುವಾರಿ ಸಚಿವರು, ಶಾಸಕರಿಗೆ ಇರುವ ಶಕ್ತಿ ಸರಕಾರಕ್ಕೆ ಇಲ್ಲ. ಇದು ಬೇರೆ ಬೇರೆ ವಿಷಯದಲ್ಲಿಯೂ ಸಾಭೀತಾಗಿದೆ. ಇದನ್ನು ಹೆಚ್ಚು ಮುಂದುವರೆಸವುದು ಸರಿಯಲ್ಲ. ಅಲ್ಲದೆ, ಪೊಲೀಸರು ಕನ್ನಡದ ಧ್ವಜದ ಬಗ್ಗೆ ಬಳಕೆ ಮಾಡಿರುವ ಪದ‌ ಸರಿಯಲ್ಲ ಎಂದರು.

Vijaya Karnataka Web 6 Dec 2022, 1:49 pm
Loading ...