ಆ್ಯಪ್ನಗರ

ಮಹಿಳಾ ಯುವಜನೋತ್ಸವ: ಹುಬ್ಬಳ್ಳಿ ಎಸ್‌ಜಿಎಂವಿ ಕಾಲೇಜು ವಿದ್ಯಾರ್ಥಿನಿಯರು ವಿನ್ನರ್ಸ್‌

ಬೈಲಹೊಂಗಲ: ಇಲ್ಲಿನ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆದ ಅಂತರ್‌ ವಲಯಗಳ 15ನೇ ಶಕ್ತಿ ಸಂಭ್ರಮದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವದಲ್ಲಿ ...

Vijaya Karnataka 26 Sep 2018, 5:00 am
ಬೈಲಹೊಂಗಲ: ಇಲ್ಲಿನ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆದ ಅಂತರ್‌ ವಲಯಗಳ 15ನೇ ಶಕ್ತಿ ಸಂಭ್ರಮದ ರಾಜ್ಯ ಮಟ್ಟದ ಮಹಿಳಾ ಯುವಜನೋತ್ಸವದಲ್ಲಿ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಎಸ್‌ಜಿಎಂವಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ವಿನ್ನರ್ಸ್‌ ಆಗಿ ಹೊರಹೊಮ್ಮಿದರು. ಈ ವಿದ್ಯಾರ್ಥಿನಿಯರ ತಂಡಕ್ಕೆ ಗೋಲ್ಡ್‌ ಮೆಡಲ್‌, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.
Vijaya Karnataka Web BEL-25HTP4


ರನರ್‌ ಅಪ್‌ಗಳಾದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕಲಬುರ್ಗಿ ಈರಮ್ಮಾ ಗಂಗಸಿರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ಗೋಲ್ಡ್‌ ಮೆಡಲ್‌, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ. ಯು.ಕೆ. ಕುಲಕರ್ಣಿ, ತಾಂತ್ರಿಕ ಸಲಹಾ ಸಮಿತಿ ಚೇರಮನ್‌ ಓಂಕಾರ ಕಾಕಡೆ, ಆರ್‌.ವಿ. ಗಂಗಶೆಟ್ಟಿ, ವಿಷ್ಣು ಶಿಂಧೆ, ಶಾಂತಾದೇವಿ ಟಿ., ಆಶ್ವಿನಿ ಕೆ.ಎಂ., ಸಂಜೀವಕುಮಾರ ಗಿರಿ, ಡಾ. ವಿಕ್ರಮ ಹಿರೇಮಠ, ಪ್ರಕಾಶ ಬಡಿಗೇರ, ಎಸ್‌.ಆರ್‌.ಕಲಹಾಳ, ವೀಣಾ ಭಟ್ಟ ಸೇರಿದಂತೆ ಅನೇಕರು ಒಟ್ಟು 26 ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ