Please enable javascript.ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ - ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ - Vijay Karnataka

ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ

ವಿಕ ಸುದ್ದಿಲೋಕ 20 Aug 2014, 4:42 am
Subscribe

ತಾಲೂಕಿನ ಗಜಿಗಿನಾಳ ಗ್ರಾಮದಲ್ಲಿ ಶ್ರಾವಣ ಸೋಮವಾರ ನಿಮಿತ್ತ ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ
ಸಿರುಗುಪ್ಪ; ತಾಲೂಕಿನ ಗಜಿಗಿನಾಳ ಗ್ರಾಮದಲ್ಲಿ ಶ್ರಾವಣ ಸೋಮವಾರ ನಿಮಿತ್ತ ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮದಿಂದ 4 ಕಿ.ಮೀ.ದೂರದ ಬಾಗೇವಾಡಿ ಬಳಿಯ ತುಂಗಭದ್ರಾ ನದಿಗೆ ತೆರಳಿದ ಭಕ್ತರು ಗಂಗೆ ಪೂಜೆ ನೆರವೇರಿಸಿದರು. ಬಳಿಕ ಗಂಗೆಯನ್ನು ಹೊತ್ತ ಪೂಜಾರಿ ಹಾಗೂ ಪಲ್ಲಕ್ಕಿ ಉತ್ಸವವನ್ನು ಗ್ರಾಮದಲ್ಲಿ ಸ್ವಾಗತಿಸಿಕೊಳ್ಳಲಾಯಿತು.ಮೂರ್ತಿಗೆ ಬಿಲ್ವಪತ್ರೆ ಏರಿಸುವ ಕಾರ್ಯಕ್ರಮ ಇದೇ ವೇಳೆ ನಡೆಯಿತು.

ಗ್ರಾಮದ ಮುಖಂಡರಾದ ಸಣ್ಣ ವೀರೇಶಗೌಡ, ಎಚ್.ಪಂಪನಗೌಡ, ಮರಿಬಸವನಗೌಡ, ದೊಡ್ಡವೀರೇಶಗೌಡ, ಎಂ.ಪಂಪನಗೌಡ, ಸಣ್ಣವೀರನಗೌಡ, ಎಂ.ಬಸವನಗೌಡ, ಎಚ್.ಪರಮೇಶ್ವರಗೌಡ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ