ಆ್ಯಪ್ನಗರ

ಕನ್ನಡ ಭಾವುಟ: ಕಾವೇರಿದ ಚರ್ಚೆ

ರಾಜ್ಯ ಸರಕಾರ ಅಂತಿಮವಾಗಿ ಪ್ರಕಟಿಸಿರುವ ಮೂರು ಬಣ್ಣಗಳುಳ್ಳ ಕನ್ನಡದ ಧ್ವಜ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಆಹಾರವಾಗಿದೆ.

Vijaya Karnataka 10 Mar 2018, 5:00 am

ಶಶಿಧರ ಮೇಟಿ, ಬಳ್ಳಾರಿ

ರಾಜ್ಯ ಸರಕಾರ ಅಂತಿಮವಾಗಿ ಪ್ರಕಟಿಸಿರುವ ಮೂರು ಬಣ್ಣಗಳುಳ್ಳ ಕನ್ನಡದ ಧ್ವಜ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಆಹಾರವಾಗಿದೆ.

ಕೆಲವರು ಧ್ವಜ ನಿರ್ಣಯವಾಗಿರುವುದನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಆಕ್ಷೇಪ ಎತ್ತಿದ್ದರಿಂದ ಚರ್ಚೆ ಚುರುಕಾಗಿದೆ. ಹೊಸ ವಿನ್ಯಾಸದ ಧ್ವಜಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಧ್ವಜಾ ಬೇಕಿತ್ತಾ? ಹಳೆಯ ಧ್ವಜವನ್ನೇ ಉಳಿಸಕೊಳ್ಳಬಹುದಾಗಿತ್ತಲ್ಲ ? ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇಲ್ಲಿಂದಲೇ ಆರಂಭ: ಫೇಸ್‌ಬುಕ್‌ನಲ್ಲಿ ಮಂಜುನಾಥ್‌ ಸಿಡಿಗಿನಮೋಳ ಅವರು ರಾಜ್ಯ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ಧ್ವಜ ಹಾಕಿ, 'ನನ್ನ ನಾಡ ಧ್ವಜ, ನನ್ನ ಹೆಮ್ಮೆ' ಎಂದು ಬರೆದಿದ್ದಾರೆ. ಈ ಸ್ಟೇಟಸ್‌ ಆಧರಿಸಿ ಚರ್ಚೆ ಶುರುವಾಗಿವೆ. ಕೆಲವರು ಆತ್ಮೀಯವಾಗಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದರೆ, ಲೈಕ್‌ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವರು ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಅಭಿಪ್ರಾಯ ಹರಿದಾಟ: ಕನ್ನಡ ದ್ರೋಹಿಗಳು ಮಾತ್ರ ನಾಡ ಧ್ವಜಕ್ಕೆ ತಕರಾರು ತೆಗೆಯುತ್ತಾರೆಂದು ಬರೆಯಲಾಗಿದೆ. ಕನ್ನಡ ಧ್ವಜ ನಮ್ಮೆಲ್ಲರ ಹೆಮ್ಮೆ ಎಂದು ಹಲವರು ಹೇಳಿದ್ದಾರೆ. ಈ ಹಿಂದೆ ಒಂದು ದೇಶ, ಒಂದು ಧ್ವಜ ಎಂದವರು, ಈಗ ಕುಂಕುಮ ಅರಿಷಣವೆಂದು ಪ್ರಚೋದಿಸುತ್ತಿದ್ದಾರೆಂದು ಕಾಲೆಳೆಯಲಾಗಿದೆ. ಚಿಕ್ಕಂದಿನಿಂದ ಒಪ್ಪಿ ಅಪ್ಪಿಕೊಂಡ ಬಾವುಟ ಬದಲಾಯಿಸಿದ್ದನ್ನು ಒಪ್ಪಲಾಗುತ್ತಿಲ್ಲ, ಹಳೆಯ ಬಾವುಟಕ್ಕೆ ಸಂವಿಧಾನದ ಅನುಮೋದನೆ ಪಡಯಬಹುದಿತ್ತಲ್ಲ ಎಂದು ಕೇಳಿದ್ದಾರೆ. ರಾಜಕೀಯ ಕೆಸರೆರೆಚಾಟದಲ್ಲಿ ಕನ್ನಡಿಗರೇ ಭಾವನೆಗಳಿಗೆ ಘಾಸಿಯಾಗುತ್ತಿದೆ ಅನ್ನಿಸುತ್ತಿದೆ ಎಂದಿದ್ದರೆ, ಮತ್ತೊಬ್ಬರು ಚುನಾವಣೆ ಹೊತ್ತಲ್ಲಿ ಇದು ಬೇಕಿತ್ತಾ ಎಂದು ರಾಜ್ಯ ಸರಕಾರದ ತೀರ್ಮಾನವನ್ನು ಸಂಶಯಿಸಿದ್ದಾರೆ.

...

ಹಳೆಯ ಧ್ವಜದ ಹಿನ್ನಲೆ

ಹಿಂದಿನ ಧ್ವಜವು ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿತ್ತು. ಕನ್ನಡ ಚಳವಳಿಯ ಮ.ರಾಮಮೂರ್ತಿ 1966ರಲ್ಲಿ ವಿನ್ಯಾಸಗೊಳಿಸಿದ್ದರು. ಧ್ವಜದ ಬಳಕೆ ಗೊಂದಲದ ಹಿನ್ನೆಲೆಯಲ್ಲಿ ಹೊಸಧ್ವಜವನ್ನು ಸಿದ್ಧಪಡಿಸಲಾಗಿದೆ. ಪ್ರತ್ಯೇಕ ಧ್ವಜವನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಭಾರತದಲ್ಲಿ ಕರುನಾಡಿಗೆ ಲಭಿಸುತ್ತದೆ. ಆ ಪೂರ್ವದಲ್ಲಿ ಕೇಂದ್ರ ಸರಕಾರದ ಸಮ್ಮತಿ ಬೇಕಾಗಿದೆ. ಈ ಕುರಿತಾಗಿ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ