ಆ್ಯಪ್ನಗರ

ಕಂಠಮಟ್ಟ ಕುಡಿದು ತಗಲಾಕಿಕೊಂಡ, ಇಂಗ್ಲಿಷ್‌ ಕಲೀರಿ ಅಂತಾ ಪೊಲೀಸರಿಗೇ ಬಾರಿಸಿದ..!

ಆಶೀರ್ವಾದಂ ವೃತ್ತದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಸಂಚಾರ ನಿಮಯ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದಾಗ ಮದ್ಯಪಾನ ಮಾಡಿ ವಾಹನ ಓಡಿಸುತ್ತಿದ್ದ ಸಂಜಯ್‌ ಸಿಕ್ಕಿ ಬಿದ್ದಿದ್ದ.

Vijaya Karnataka 11 Mar 2020, 6:01 pm

ಹೈಲೈಟ್ಸ್‌:


* ಕಂಠಮಟ್ಟ ಕುಡಿದು ವಾಹನ ಚಲಾಯಿಸುತ್ತಿದ್ದ ಸಂಜಯ್

* ಆಲ್ಕೋ ಮೀಟರ್‌ನಲ್ಲೂ ಕುಡಿತಕ್ಕೆ ಸಾಕ್ಷ್ಯ ಲಭ್ಯ

* ಕುಡಿದೇ ಇಲ್ಲ ಎಂದು ವಾದಿಸಿ ಪೊಲೀಸರಿಗೇ ಬಾರಿಸಿದ ಭೂಪ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web police clash
ಕಂಠಮಟ್ಟ ಕುಡಿದು ತಗಲಾಕಿಕೊಂಡ, ಇಂಗ್ಲಿಷ್‌ ಕಲೀರಿ ಅಂತಾ ಪೊಲೀಸರಿಗೇ ಬಾರಿಸಿದ..!
ಬೆಂಗಳೂರು: ಕಂಠಮಟ್ಟ ಕುಡಿದು ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ದೊಮ್ಮಲೂರಿನ ಸಂಜಯ್‌ (25) ಎಂಬಾತನನ್ನು ಅಶೋಕ್‌ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಶೋಕ ನಗರದ ಸಂಚಾರ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಮಹಲಿಂಗೇಗೌಡ ಅವರ ಮೇಲೆ ಆರೋಪಿ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ. ಆಶೀರ್ವಾದಂ ವೃತ್ತದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಸಂಚಾರ ನಿಮಯ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದಾಗ ಮದ್ಯಪಾನ ಮಾಡಿ ವಾಹನ ಓಡಿಸುತ್ತಿದ್ದ ಸಂಜಯ್‌ ಸಿಕ್ಕಿ ಬಿದ್ದಿದ್ದ. ತಪಾಸಣೆ ನಡೆಸಿದ ಕಾರಣದಿಂದ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾಗಿ ದೂರು ದಾಖಲಾಗಿದೆ.

ನಡೆದದ್ದೇನು?

ಗರುಡಾ ಮಾಲ್‌ ಬಳಿ ಕರ್ತವ್ಯದಲ್ಲಿ ನಿರತರಾಗಿದ್ದ ಸಂಚಾರ ಪೇದೆ ವೀರೇಶ್‌ ಎನ್ನುವವರು ಸಂಜಯ್‌ನ ಬೈಕ್‌ ತಡೆದು ನಿಲ್ಲಿಸಿದ್ದರು. ಸಿಗ್ನಲ್‌ ಜಂಪ್‌ ಮಾಡಿದ್ದರಿಂದ ವಾಹನ ತಡೆದು ನಿಲ್ಲಿಸಲಾಗಿದೆ. ಈತನನ್ನು ಪರೀಕ್ಷಿಸುವಾಗ ಮದ್ಯಪಾನ ಮಾಡಿರುವುದು ಗೊತ್ತಾಗಿತ್ತು. ಆದರೆ ತಮ್ಮ ಬಳಿ ಆಲ್ಕೋ ಮೀಟರ್‌ ಇಲ್ಲದಿದ್ದರಿಂದ ಮಹಾಲಿಂಗೇಗೌಡರಿಗೆ ಮೀಟರ್‌ ತರುವಂತೆ ವೀರೇಶ್‌ ಕೇಳಿದ್ದರು. ಇದಾಗಿ ಕೆಲ ನಿಮಿಷಗಳಲ್ಲೇ ಆಲ್ಕೋ ಮೀಟರ್‌ ಸಮೇತ ಸ್ಥಳಕ್ಕೆ ಬಂದ ಮಹಾಲಿಂಗೇಗೌಡರು ತಪಾಸಣೆ ನಡೆಸಿದಾಗ ಮೀಟರ್‌ ರೀಡಿಂಗ್‌ ಪ್ರಮಾಣ 308 ಎಂ.ಜಿ.ಎಂದು ತೋರಿಸಿತ್ತು. ಬಳಿಕ ಆತನ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲು ಹೋದಾಗ ಸಂಜಯ್‌ ‘ನಾನು ಕುಡಿಯುವುದಿಲ್ಲ, ನೀವು ಮೊದಲು ಇಂಗ್ಲಿಷ್‌, ಹಿಂದಿ ಭಾಷೆ ಕಲಿತುಕೊಳ್ಳಿ. ನಾನು ಯಾರು ಎಂಬುದನ್ನು ನಿಮಗೆ ತೋರಿಸುತ್ತೇನೆ’ ಎಂದು ಧಮ್ಕಿ ಹಾಕಿದ್ದಲ್ಲದೆ ಹೆಲ್ಮೆಟ್‌ನಿಂದ ಮಹಲಿಂಗೇಗೌಡ ಅವರ ತಲೆಗೆ ಹಲ್ಲೆ ಮಾಡಿದ್ದ. ಪರಿಣಾಮ ಮಹಲಿಂಗೇಗೌಡ ಗಾಯಗೊಂಡಿದ್ದರು.

ಕೊರೊನಾ ವೈರಸ್‌ಗಿಂತಾ ಡ್ರಿಂಕ್ & ಡ್ರೈವ್ ಅಪಾಯ..! ಟೆಸ್ಟ್‌ ನಿಲ್ಲಿಸೋ ಮಾತೇ ಇಲ್ಲ ಅಂದ್ರು ಕಮೀಷನರ್

ಇಷ್ಟಕ್ಕೇ ಸುಮ್ಮನಾಗದ ಸಂಜಯ್‌, ಹಲ್ಲೆಗೊಳಗಾದ ಎಎಸ್‌ಐ ಸಹಾಯಕ್ಕೆ ಬಂದ ಪೇದೆ ವೀರೇಶ್‌ ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಮಹಾಲಿಂಗೇಗೌಡರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್, ನಟ ದಲಿಪ್ ತಹಿಲ್ ಬಂಧನ

ಗಲಾಟೆ ನಡೆಯುತ್ತಿದ್ದ ಹೊತ್ತಲ್ಲೇ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಸಂಜಯ್‌ನನ್ನು ವಶಕ್ಕೆ ಪಡೆದು ಅಶೋಕ್‌ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಶೋಕ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಟೈಗರ್ ವುಡ್ಸ್ ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ