BS Yediyurappa: ಕಲ್ಲು ತೂರಾಟ ಘಟನೆ ತಪ್ಪು ಗ್ರಹಿಕೆಯಿಂದ ನಡೆದಿದೆ, ಯಾರ ಬಗ್ಗೆಯೂ ಆರೋಪ ಮಾಡಲ್ಲ: ಬಿಎಸ್‌ವೈ

ಬೆಂಗಳೂರು: ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಶಿಕಾರಿಪುರದ ನಿವಾಸಕ್ಕೆ ಕಲ್ಲು ತೂರಾಟ ಮಾಡಿದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಆದರೆ ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಯಾರ ಬಗ್ಗೆಯೂ ಆರೋಪ ಮಾಡಲ್ಲ. ಯಾರದೇ ಕೈವಾಡ ‌ಇಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಂಜಾರ ಸಮಾಜದ ಕಾರ್ಯಕರ್ತರು ನಮ್ಮ ಮನೆ‌ ಮೇಲೆ ದಾಳಿ ಮಾಡಿ ಕಲ್ಲು‌ ತೂರಾಟ ಮಾಡಿದ್ದಾರೆ. ತಕ್ಷಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಬಂಜಾರ ಸಮಾಜದ ಬಂದುಗಳು ನಮ್ಮ ಜೊತೆ ಇದ್ದಾರೆ. ತಪ್ಪು ಗ್ರಹಿಕೆಯಿಂದ‌ನ ಈ‌ಘಟನೆ ಆಗಿದೆ. ಯಾರ ವಿರುದ್ಧ ಕ್ರಮ ಬೇಡ ಹಾಗೂ ಯಾವ ಬಂಧನ ಮಾಡಬಾರದು ಎಂದು ಸೂಚಿಸಿದ್ದೇನೆ ಎಂದರು‌‌.

BS Yediyurappa: ನನ್ನ ಮನೆ ಮೇಲೆ ಕಲ್ಲುತೂರಾಟ ಘಟನೆಯಿಂದ ಮನಸ್ಸಿಗೆ ನೋವಾಗಿದೆ -ಬಿಎಸ್ ಯಡಿಯೂರಪ್ಪ

ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿರಬೇಕು. ಬಂಜಾರ ಸಮಾಜದ ಹಿರಿಯ ಮುಖಂಡರ ಜೊತೆ ಮಾತನಾಡುತ್ತೇನೆ. ಏಕೆ ಘಟನೆ ಆಯಿತು? ಹಾಗೂ ಗೊಂದಲದ ಬಗ್ಗೆ ಸಮಾಲೋಚನೆ ಮಾಡುತ್ತೇನೆ ಎಂದು ಹೇಳಿದರು.

ಬಂಜಾರ ಸಮಾಜದ ಸಮಸ್ಯೆ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಶಿಕಾರಿಪುರ ಜನರು ಶಾಂತಿಗೆ ಹೆಸರಾದವರು. ನ್ಯಾಯಯುತ ಹೋರಾಟ ಮಾಡುತ್ತಾ ಬಂದವರು. ಕಾನೂನು ಕೈಗೆತ್ತುಕೊಳ್ಳುವುದು ಬೇಡ. ನಾನು ನಾಲ್ಕು ಬಾರಿ ಸಿಎಂ ಆಗಲು ಬಂಜಾರ ಸಮಾಜದ ಜನರ ಬೆಂಬಲವೂ ಕಾರಣ. ನಾನೂ ಅವರಿಗೆ ಸ್ಪಂದಿಸಿದ್ದೇನೆ. ನಾಳೆ ಅಥವಾ ನಾಡಿದ್ದು ಹೋಗಿ ಅವರ ಚರ್ಚೆ ಮಾಡಿ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಮನವಿ ಮಾಡಿದರು.

Vijaya Karnataka Web 27 Mar 2023, 8:44 pm
Loading ...