Congress Ticket: ಮಡಿವಾಳ ಸಮಾಜಕ್ಕೆ ಟಿಕೆಟ್ ಬೇಡಿಕೆ, ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ, ವಿಷ ಸೇವನೆಗೆ ಯತ್ನ!

ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಟಿಕೆಟ್ ಗಲಾಟೆ ತೀವ್ರಗೊಂಡಿದೆ. ಕೆಪಿಸಿಸಿ ಕಚೇರಿ ಮುಂದೆ ಸೋಮವಾರ ಮಡಿವಾಳ ಸಮಾಜದವರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ವೇಳೆ ಆಕ್ರೋಶಗೊಂಡ ಕಾರ್ಯಕರ್ತರು ವಿಷ ಸೇವಿಸಲು ಯತ್ನಿಸಿದ್ದು ಕೆಲ ಕಾಲ ಹೈಡ್ರಾಮಾ ನಡೆಯಿತು.

ಕೆಪಿಸಿಸಿಯಲ್ಲಿ ಮಡಿವಾಳ ಸಮಾಜದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ‌ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಚೇರಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಎರಡನೇ ಪಟ್ಟಿ ಟಿಕೆಟ್ ಗೊಂದಲದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ 124 ಮಂದಿ ಹೆಸರು ಘೋಷಣೆ ಆಗಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ ಕ್ಷೇತ್ರಗಳ ಹೆಸರು ಅಂತಿಮಗೊಳ್ಳಲಿದೆ. ಈಗಾಗಲೇ ಎರಡು ಬಾರಿ ಸ್ಕ್ರೀನಿಂಗ್ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ 38 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ.

Vijaya Karnataka Web 3 Apr 2023, 4:00 pm
Loading ...