Please enable javascript.ವಿಜಯಪುರ: ಭಾಷೆ ಉಳಿವಿಗೆ ಪ್ರಯತ್ನ ಅಗತ್ಯ - ವಿಜಯಪುರ: ಭಾಷೆ ಉಳಿವಿಗೆ ಪ್ರಯತ್ನ ಅಗತ್ಯ - Vijay Karnataka

ವಿಜಯಪುರ: ಭಾಷೆ ಉಳಿವಿಗೆ ಪ್ರಯತ್ನ ಅಗತ್ಯ

ವಿಕ ಸುದ್ದಿಲೋಕ 27 Jun 2015, 9:04 am
Subscribe

‘ಮಾತ ಭಾಷೆ ಯಾವುದೇ ಆಗಲಿ, ಉಳಿಯಬೇಕಾದರೆ ಅದನ್ನು ನಿತ್ಯ ಹಾಡಬೇಕು. ಭಾಷೆಯನ್ನು ರಕ್ಷಿಸಲು ಹಾಗೂ ಅಭಿವದ್ಧಿ ಪಡಿಸಲು ನಾವೆಲ್ಲ ಮನಸ್ಸು ಮಾಡಬೇಕು,’ ಎಂದು ಸಾಹಿತಿ ಪಿ.ಮಂಜಪ್ಪ ಹೇಳಿದರು.

ವಿಜಯಪುರ: ಭಾಷೆ ಉಳಿವಿಗೆ ಪ್ರಯತ್ನ ಅಗತ್ಯ
ವಿಜಯಪುರ: ‘ಮಾತ ಭಾಷೆ ಯಾವುದೇ ಆಗಲಿ, ಉಳಿಯಬೇಕಾದರೆ ಅದನ್ನು ನಿತ್ಯ ಹಾಡಬೇಕು. ಭಾಷೆಯನ್ನು ರಕ್ಷಿಸಲು ಹಾಗೂ ಅಭಿವದ್ಧಿ ಪಡಿಸಲು ನಾವೆಲ್ಲ ಮನಸ್ಸು ಮಾಡಬೇಕು,’ ಎಂದು ಸಾಹಿತಿ ಪಿ.ಮಂಜಪ್ಪ ಹೇಳಿದರು. ಪಟ್ಟಣದ ಗಾಂಧಿ ಚೌಕದಲ್ಲಿ ಆಯೋಜಿಸಿದ್ದ 21ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ‘ನೆಲ, ಜಲ, ಭಾಷೆ ಮತ್ತು ನಾಡಿನ ಕಲೆ, ಸಂಸ್ಕೃತಿ ಯನ್ನು ಉಳಿಸಿ, ಬೆಳೆಸಲು ಸಂಘಟಿತರಾಗ ಬೇಕು, ಒಗ್ಗೂಡಬೇಕು. ಕನ್ನಡ ಆಡಳಿತ ಭಾಷೆ ಯಾಗಬೇಕು. 5 ನೇ ತರಗತಿವರೆಗೆ ಕಡ್ಡಾಯವಾಗಿ ಕಲಿಸುವಂತಾ ಗಬೇಕು. ಪೋಷಕರು ಆಂಗ್ಲ ಮಾಧ್ಯಮದ ವ್ಯಾಮೋಹದಲ್ಲಿ ಸಿಲುಕಿ, ಹೆಚ್ಚು ಹಣ ಖರ್ಚು ಮಾಡಿ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಮಕ್ಕಳು ಬಾಲ್ಯದಿಂದಲೇ ಮಾತ ಭಾಷೆಯನ್ನು ಮರೆಯುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ,’ ಎಂದರು. ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ ಕನ್ನಡ ಭಾಷೆಗೆ ದೀರ್ಘ ಇತಿಹಾಸ, ಸಂಘಟನೆಗಳ ಬಲವಿದ್ದರೂ ಭಾಷೆಯ ಉಳಿವಿಗೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗಿರುವುದು ಶೋಚ ನೀಯ ಸಂಗತಿ. ಕನ್ನಡದ ಉಳಿವಿಗೆ ಸಮ್ಮೇಳನಗಳನ್ನು ಮಾಡಿದರೆ ಸಾಲದು, ಪ್ರತಿಯೊಂದು ಮನೆ ಮನೆ ಯಲೂ ್ಲಕನ್ನಡ ಪ್ರೀತಿ ಮೂಡಿಸಬೇಕು,’ ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾನಾ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಸಾವಿರಾರು ಜನ ಸೇರುವ ನಿರೀಕ್ಷೆ ಇದ್ದರೂ, ಕುರ್ಚಿಗಳು ಚೇರುಗಳು ಖಾಲಿಯಾಗಿದ್ದವು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಚಿ.ಮಾ.ಸುಧಾಕರ್, ಪುರಸಭೆ ಅಧ್ಯಕ್ಷೆ ಅನಸೂಯಮ್ಮ, ಮಾಜಿ ಶಾಸಕ ಜಿ.ಚಂದ್ರಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿಶಾಮಿಗೌಡ, ಕಸಾಪ ತಾಲೂಕು ಅಧ್ಯಕ್ಷ ಎನ್.ರಾಜಗೋಪಾಲ್, ದೊಡ್ಡಬಳ್ಳಾಪುರ ಅಧ್ಯಕ್ಷ ಶ್ರೀ ೀಕಾಂತ್, ಜಿಪಂ ಮಾಜಿ ಸದಸ್ಯ ವೀರಪ್ಪ, ಎ.ಸಿ.ಗುರುಸ್ವಾಮಿ, ಜಿಪಂ ಸದಸ್ಯ ಬಿ.ರಾಜಣ್ಣ, ಬಿ.ಕೆ.ಶಿವಪ್ಪ, ವಿ.ಎನ್.ರಮೇಶ್,ಮುನಿವೀರಣ್ಣ, ಪುರಸಭೆ ಸದಸ್ಯಎಸ್.ಭಾಸ್ಕರ್, ದೇ.ಸೂ.ನಾಗರಾಜ್, ಕರವೇ ಮುಖಂಡರಾದ ಶಿವಕುಮಾರ್, ಮಹೇಶ್, ಸುರೇಶ್, ಮಂಜುನಾಥ್ ಮೊದಲಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ