Please enable javascript.ಬದುಕಿನ ಮೂಲ ತಿಳಿಯಲು ಸತ್ಸಂಗ ಪೂರಕ - ಬದುಕಿನ ಮೂಲ ತಿಳಿಯಲು ಸತ್ಸಂಗ ಪೂರಕ - Vijay Karnataka

ಬದುಕಿನ ಮೂಲ ತಿಳಿಯಲು ಸತ್ಸಂಗ ಪೂರಕ

ವಿಕ ಸುದ್ದಿಲೋಕ 9 Dec 2014, 5:36 pm
Subscribe

ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸತ್ಸಂಗ ಬಹಳ ಅಗತ್ಯವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಬದುಕಿನ ಮೂಲ ತಿಳಿಯಲು ಸತ್ಸಂಗ ಪೂರಕ
ಭಾಲ್ಕಿ: ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸತ್ಸಂಗ ಬಹಳ ಅಗತ್ಯವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಸಮೀಪದಲ್ಲಿರುವ ಎಳಗುತ್ತಿ ಆಶ್ರಮದಲ್ಲಿ ಆಯೋಜಿಸಿದ್ದ 18ನೇ ದತ್ತ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಹಣದಿಂದ ಸುಖ, ಶಾಂತಿ ಹಾಗೂ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಬದುಕಿನ ಮೂಲ ಉದ್ದೇಶ ಅರಿಯಲು ಸತ್ಸಂಗ ಪೂರಕವಾಗಿದೆ ಎಂದರು.

ಶ್ರೀಮಠದ ಶ್ರೇಯೋಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಹುಲಕುಂಟಿ ಶಾಂತಲಿಂಗೇಶ್ವರ ಮಠದ ಮನಿಪ್ರ ಶಿವಾನಂದ ಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಒಳ್ಳೆಯವರ ಸಹವಾಸದಿಂದ ಕೆಟ್ಟವರು ಒಳ್ಳೆಯವರಾಗುವ ಅವಕಾಶಗಳಿರುತ್ತವೆ. ಆದ್ದರಿಂದ ಬದುಕಿನಲ್ಲಿ ಸತ್ಸಂಗ ಬಹಳ ಮುಖ್ಯವಾಗಿದೆ. ಮನುಷ್ಯನ ಜಮ ಸಾರ್ಥಕತೆಗೆ ವ್ಯರ್ಥ ಕಾಲಹರಣ ಮಾಡದೇ ಜಪ-ತಪ, ಧ್ಯಾನ-ದಾನ ಪರೋಪಕಾರ, ಸತ್ಸಂಗ ಪ್ರವಚನ ಶ್ರವಣ ಮಾಡಬೇಕು ಎಂ ಹೇಳಿದರು.

ಮಾತೋಶ್ರೀ ಗೋದಾವರಿ ತಾಯಿ ನೇತೃತ್ವ ವಹಿಸಿದ್ದರು. ಕಿಟ್ಟಾ ಸಂಸ್ಥಾನ ಮಠದ ಸಿದ್ದೇಶ್ವರ ಶಿವಚಾರ್ಯರು, ಸುಶಿಲಾಬಾಯಿ ತಾಯಿ ಸಮ್ಮುಖ ವಹಿಸಿದ್ದರು. ಬೀದರ್ ಗುರುದೇವ ಆಶ್ರಮದ ಗಣೇಶಾನಂದ ಮಹಾರಾಜರು ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀದೇವಿ ಸುಭಾಷ ಪಾಟೀಲ್, ವಿಜಯಕುಮಾರ ವೈಜನಾಥ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸೋಮನಾಥ ಶೀಲವಂತ, ಸಂಗಪ್ಪ ಕುಂಬಾರ್, ಮಾಣಿಕರೆಡ್ಡಿ ಕೊತ್ತುರ್, ಗುರು ಪಂಡರಂಗೆ, ಮಹೇಶ ಎಳಗುತ್ತಿ, ನಂದು ಭದ್ರಶೆಟ್ಟಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರೇವಣಸಿದ್ದ ಪಂಡರಂಗೆ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ