Please enable javascript.ಬಿಎಸ್‌ಎಸ್‌ಕೆ ಚುನಾವಣೆ: ಖೇಣಿ ಪ್ಯಾನೆಲ್ ಮೇಲುಗೈ - ಬಿಎಸ್‌ಎಸ್‌ಕೆ ಚುನಾವಣೆ: ಖೇಣಿ ಪ್ಯಾನೆಲ್ ಮೇಲುಗೈ - Vijay Karnataka

ಬಿಎಸ್‌ಎಸ್‌ಕೆ ಚುನಾವಣೆ: ಖೇಣಿ ಪ್ಯಾನೆಲ್ ಮೇಲುಗೈ

ವಿಕ ಸುದ್ದಿಲೋಕ 12 May 2015, 4:57 pm
Subscribe

ತಾಲೂಕಿನ ಬೀದರ್ ಸಹಕಾರಿ ಸಕ್ಕರೆ ಕಾರಖಾನೆ ಚುನಾವಣೆಯಲ್ಲಿ ಕಾರಖಾನೆ ಹಾಲಿ ಅಧ್ಯಕ್ಷ ಸಂಜಯ್ ಖೇಣಿ ಪೆನಾಲ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.ಭಾನುವಾರ ನಡೆದ ಚುನಾವಣೆಯಲ್ಲಿ ಖೇಣಿ ಪ್ಯಾನೆಲ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಾಸಕ ರಾಜಶೇಖರ್ ಪಾಟೀಲ್ ನೇತೃತ್ವದ ಪ್ಯಾನೆಲ್ 5 ಸ್ಥಾನಗಳಲ್ಲಿ ಗೆಲುವು ಪಡೆದಿದೆ.

ಬಿಎಸ್‌ಎಸ್‌ಕೆ ಚುನಾವಣೆ: ಖೇಣಿ ಪ್ಯಾನೆಲ್ ಮೇಲುಗೈ
ಹುಮನಾಬಾದ್: ತಾಲೂಕಿನ ಬೀದರ್ ಸಹಕಾರಿ ಸಕ್ಕರೆ ಕಾರಖಾನೆ ಚುನಾವಣೆಯಲ್ಲಿ ಕಾರಖಾನೆ ಹಾಲಿ ಅಧ್ಯಕ್ಷ ಸಂಜಯ್ ಖೇಣಿ ಪೆನಾಲ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.ಭಾನುವಾರ ನಡೆದ ಚುನಾವಣೆಯಲ್ಲಿ ಖೇಣಿ ಪ್ಯಾನೆಲ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಾಸಕ ರಾಜಶೇಖರ್ ಪಾಟೀಲ್ ನೇತೃತ್ವದ ಪ್ಯಾನೆಲ್ 5 ಸ್ಥಾನಗಳಲ್ಲಿ ಗೆಲುವು ಪಡೆದಿದೆ.

ಕಾರಖಾನೆ ಅಧ್ಯಕ್ಷ ಸಂಜಯ್ ಖೇಣಿ ಪ್ಯಾನೆಲ್,ಶಾಸಕ ರಾಜಶೇಖರ್ ಪಾಟೀಲ್,ಮಾಜಿ ಶಾಸಕ ಸುಭಾಷ ಕಲ್ಲೂರು ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಈ ಚುನಾವಣೆ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.

ವಿಜೇತರು: ಕಾರಖಾನೆ ಹಾಲಿ ಅಧ್ಯಕ್ಷ ಸಂಜಯ್ ಖೇಣಿ (4014), ಬಾಬಾ ಪಟೇಲ್(3896), ಅಣ್ಣೆಪ್ಪ ಹಣಮಂತಪ್ಪ (3358),ಅಶೋಕ ಪಾಟೀಲ್ (3366),ದತ್ತಾತ್ರೀ ಬಾಚೆಪಳ್ಳಿ (282),ಕಮಲಾಬಾಯಿ ನಿಟ್ಟೂರೆ(3242), ಈರಮ್ಮ ಪಾಟೀಲ್ ಬನ್ನಳ್ಳಿ((3748),ಬಕ್ಕಪ್ಪಾ ಶಂಕರೆಪ್ಪ (3318) ಗೆಲುವು ಸಾಧಿಸಿದವರು.

ಶಾಸಕ ರಾಜಶೇಖರ ಪಾಟೀಲ್ ಸಹಕಾರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಸೋಮವಾರ ನಡೆದ ಮತ ಏಣಿಕೆಯಲ್ಲಿ ಪಾಟೀಲ್ ಪ್ಯಾನೆಲ್‌ನ ಜಿಪಂ ಮಾಜಿ ಸದಸ್ಯ ಲಕ್ಷ್ಮಣರಾವ ಬುಳ್ಳಾ (3081), ಶಿವಕುಮಾರ ಸಾದಾ (3748),ಪರಮೇಶ್ವರ ಪಾಟೀಲ್ (2970), ಕಿರಣ ಚಂದಾ ಆಯ್ಕೆಯಾಗಿದ್ದಾರೆ.

6900 ಮತಗಳು ತಿರಸ್ಕೃತ

12 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಸ್ಪರ್ಧಿಸಿದ 42 ಅಭ್ಯರ್ಥಿಗಳು ಒಟ್ಟು 83,326 ಮತಗಳು ಪಡೆದಿದ್ದು ,ಈ ಪೈಕಿ 6900 ಮತಗಳು ತಿರಸ್ಕೃತಗೊಂಡಿವೆ.

ನಿಧಾನ ಗತಿಯಲ್ಲಿ ಸಾಗಿದ ಮತ ಏಣಿಕೆ :ಆಕ್ರೋಶ

ಬಿಎಸ್‌ಎಸ್‌ಕೆ ಯ ಚುನಾವಣೆ ಪ್ರಕ್ರಿಯೆ ಗೊಂದಲದ ಗೂಡಾಗಿತ್ತು. ಭಾನುವಾರ ರಾತ್ರಿಯಿಡಿ ನಡೆದ ಮತ ಏಣಿಕೆಯಲ್ಲಿ ವಿಳಂಬದಿಂದ ಕೆಲವರು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಮತ ಏಣಿಕೆಗೆ ವಿಳಂಬ ಸಂಬಂಧ ಜೆಡಿಎಸ್ ಜಿಲ್ಲಾಧ್ಯಕ್ಷ ನಸೀಮೋದ್ಧಿನ್ ಪಟೇಲ್ ಮತ್ತು ಚುನಾವಣಾಧಿಕಾರಿ ಡಾ.ಶಂಕರ ವಣಿಕ್ಯಾಳ ನಡುವೆ ಮಾತಿನ ಚಕಮಕಿ ನಡೆಯಿತು.ಫಲಿತಾಂಶ ವಿಳಂಬಕ್ಕೆ ಪಟೇಲ್ ತೀವ್ರ ಬೇಸರ ವ್ಯಕ್ತಪಡಿಸಿ ಚುನಾವಣಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಘಟನೆ ನಡೆಯಿತು.

ಮಹಿಳಾ ಕ್ಷೇತ್ರದ ಶಾಸಕ ರಾಜಶೇಖರ ಪೆನಾಲ್‌ನ ಅಭ್ಯರ್ಥಿ ಮತ್ತು ಖೇಣಿ ಪೆನಾಲ್‌ನ ಮಹಿಳಾ ಅಭ್ಯರ್ಥಿಯ ನಡುವೆ 3 ಮತಗಳ ವ್ಯತ್ಯಾಸವು ಕಂಡು ಬಂತು.ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಕೊನೆಗೂ ಮತ ಏಣಿಕೆ ಆರಂಭವಾಗಿ 18 ಗಂಟೆಗಳ ನಂತರ ಫಲಿತಾಂಶ ಘೋಷಣೆಯಾಯಿತು.

ಬಂದೋ ಬಸ್ತ್:ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿಕರ ಘಟನೆ ನಡೆಯದಂತೆ ಸ್ಥಳದಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ