ಆ್ಯಪ್ನಗರ

ಲಸಿಕೆ ನೀಡುವಲ್ಲಿ ಬಿಜೆಪಿ ವಿಫಲ, ಬೆಲೆ ಏರಿಕೆಯಿಂದಲೇ ಸರ್ಕಾರಕ್ಕೆ ಆಪತ್ತು: ಯು. ಟಿ. ಖಾದರ್

'ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆಯ ಅಪಪ್ರಚಾರ ನಡೆಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಈಗ ಬೆಲೆ ಏರಿಕೆಯಿಂದಲೇ ತನ್ನ ಅಧಿಕಾರ ಕಳೆದುಕೊಳ್ಳಲಿದೆ' - ಖಾದರ್‌ ಭವಿಷ್ಯ

Vijaya Karnataka 11 Jun 2021, 8:26 pm

ಹೈಲೈಟ್ಸ್‌:

  • ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಸಿಕೆ ನೀಡುವಲ್ಲಿ ವಿಫಲವಾಗಿವೆ
  • ಯುಪಿಎ ಅವಧಿಯಲ್ಲಿ ಬೆಲೆ ಏರಿಕೆಯ ಅಪಪ್ರಚಾರ ನಡೆಸಿ ಅಧಿಕಾರಕ್ಕೆ ಬಂದಿದ್ದರು
  • ಸಾಕಷ್ಟು ತೆರಿಗೆ ಸಂಗ್ರಹವಾದರೂ ಜನಪರ ಕಾರ್ಯಕ್ರಮವಿಲ್ಲ: ಖಾದರ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web khader
Mangaluru MLA U T Khader.
ಬೀದರ್‌: ಕೋವಿಡ್‌ ಲಸಿಕೆ ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಹೇಳಿಕೆಗಳಿಂದ ಗೊಂದಲ ಮೂಡಿಸುತ್ತಿದೆ. ಭಾರತದಲ್ಲಿ ಸ್ಟಾಕ್‌ ನೋಡಿ ವ್ಯಾಕ್ಸಿನ್‌ ನೀಡಲಾಗುತ್ತಿದೆ. ಲಸಿಕೆ ನೀಡುವ ವಿಷಯವನ್ನೂ ಸರಕಾರ ರಾಜಕೀಯಕ್ಕೆ ಬಳಸಿಕೊಂಡಿತು. ಸುಪ್ರೀಂಕೋರ್ಟ್‌ ನಿರ್ದೇಶನದ ಬಳಿಕ ಈಗ ನಾವೇ ಲಸಿಕೆ ನೀಡುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ ಎಂದು ಮಾಜಿ ಸಚಿವ, ಶಾಸಕ ಯು. ಟಿ. ಖಾದರ್‌ ಕಿಡಿಕಾರಿದರು.
ಬೀದರ್ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿನಕ್ಕೆ ಎಷ್ಟು ಲಸಿಕೆ ಉತ್ಪಾದನೆ ಆಗುತ್ತಿದೆ ಮತ್ತು ಎಷ್ಟು ಕೊಡಲಾಗುತ್ತದೆ ಎಂಬುದರ ಕುರಿತ ಸರಕಾರ ಉತ್ತರಿಸಬೇಕು ಎಂದರು. ಲಸಿಕೆ ತಯಾರಿಸಲು ದೇಶದಲ್ಲಿ 22 ಕಂಪನಿಗಳು ಸಿದ್ಧವಿದ್ದರೂ ಅವಕಾಶ ನೀಡಿಲ್ಲ. ಕೇವಲ ಮೂರು ಕಂಪನಿಗಳ ಜತೆ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಯುಟಿ ಖಾದರ್‌ ಆರೋಪಿಸಿದರು.


ಬೆಲೆ ಏರಿಕೆಯಿಂದಲೇ ಸರಕಾರಕ್ಕೆ ಆಪತ್ತು: ಖಾದರ್‌ ಭವಿಷ್ಯ

ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆಯ ಅಪಪ್ರಚಾರ ನಡೆಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಈಗ ಬೆಲೆ ಏರಿಕೆಯಿಂದಲೇ ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎಂದು ಖಾದರ್‌ ಭವಿಷ್ಯ ನುಡಿದರು. ಚುನಾವಣೆ ಎದುರಾದಾಗ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ತೆರಿಗೆ ಭಾರವನ್ನು ಸರಕಾರ ಜನ ಸಾಮಾನ್ಯರ ಜೇಬಿನಿಂದಲೇ ಭರಿಸಿಕೊಳ್ಳುತ್ತಿದೆ. ಕಾಂಗ್ರೆಸ್‌ ಸರಕಾರವಿದ್ದಾಗ ಕೇವಲ 55 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿತ್ತು. ಇದೀಗ 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಂಗ್ರಹ ಆಗುತ್ತಿದೆ. ಆದರೂ, ದೇಶದ, ರಾಜ್ಯದ ಜನರಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದು ಆರೋಪಿಸಿದರು.

ಜನಪರವಾದ ಬಜೆಟ್ ಇದಲ್ಲ, ಪೆಟ್ರೋಲ್‌-ಡೀಸೆಲ್ ಬೆಲೆ ಏರಿಸಿದ್ದಾರೆ: ಯು.ಟಿ ಖಾದರ್
ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ: ಖಾದರ್

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಜನತೆ ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ ಎಂದ ಯು.ಟಿ. ಖಾದರ್, ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಯಾವುದೇ ರೀತಿಯ ಮುಸುಕಿನ ಗುದ್ದಾಟ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಿಮ್ಮ ತಪ್ಪು ಮುಚ್ಚಿಕೊಳ್ಳಲು ಜನರಿಗೇಕೆ ಲಾಕ್ ಡೌನ್ ಗುಮ್ಮ ತೋರಿಸುತ್ತಿರುವಿರಿ? ಖಾದರ್ ಪ್ರಶ್ನೆ
ಪಕ್ಷದ ಹಿರಿಯ ಮುಖಂಡರುಗಳಲ್ಲಿ ಯಾವುದೇ ಬೇಧವಿಲ್ಲ. ಹಿಂದೆ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅತ್ಯುತ್ತಮ ರೀತಿಯಲ್ಲಿಆಡಳಿತ ನೀಡಿತ್ತು. ಮುಂದಿನ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದರು. ಶಾಸಕ ರಹೀಮ್‌ ಖಾನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ