ಆ್ಯಪ್ನಗರ

ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಹತೋಟಿ

ಕೇವಲ ಮಾತ್ರೆಗಳಿಂದ ಸಕ್ಕರೆ ಕಾಯಿಲೆಯಿಂದ ಮುಕ್ತರಾಗುವುದು ಸಾಧ್ಯವಿಲ್ಲ. ಜೀವನ ಶೈಲಿಯಿಂದ ಕಾಯಿಲೆ ಹತೋಟಿಗೆ ತರಬಹುದು ಎಂದು ಅಬುಪರ್ವತ ಗ್ಲೋಬಲ್ ಆಸ್ಪತ್ರೆಯ ಸಕ್ಕರೆ ಕಾಯಿಲೆ ತಜ್ಞ ಡಾ.ಶ್ರೀಮಂತ ಕುಮಾರ ತಿಳಿಸಿದರು.

ವಿಕ ಸುದ್ದಿಲೋಕ 13 Mar 2016, 12:22 pm
ಬೀದರ್ : ಕೇವಲ ಮಾತ್ರೆಗಳಿಂದ ಸಕ್ಕರೆ ಕಾಯಿಲೆಯಿಂದ ಮುಕ್ತರಾಗುವುದು ಸಾಧ್ಯವಿಲ್ಲ. ಜೀವನ ಶೈಲಿಯಿಂದ ಕಾಯಿಲೆ ಹತೋಟಿಗೆ ತರಬಹುದು ಎಂದು ಅಬುಪರ್ವತ ಗ್ಲೋಬಲ್ ಆಸ್ಪತ್ರೆಯ ಸಕ್ಕರೆ ಕಾಯಿಲೆ ತಜ್ಞ ಡಾ.ಶ್ರೀಮಂತ ಕುಮಾರ ತಿಳಿಸಿದರು.
Vijaya Karnataka Web jvana ailiyinda sakkare kyile hati
ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಹತೋಟಿ


ಬ್ರಹ್ಮಕುಮಾರಿ ಅಂತಾರಾಷ್ಟ್ರೀಯ ಸಂಸ್ಥಾನದ ದಿಂದ ಶನಿವಾರ ನಗರದ ಗಣೇಶ ಮೈದಾನದಲ್ಲಿ 80ನೇ ಮಹಾಶಿರಾತ್ರಿಯ ನಿಮಿತ್ತ ಮಧುಮೇಹ ರೋಗಿಗಳಿಗಾಗಿ ಎರಡು ದಿನ ಹಮ್ಮಿಕೊಂಡ ಮುಕ್ತಿ ಶಿಬಿರದಲ್ಲಿ ಉಪನ್ಯಾಸ ನೀಡಿದರು.

ಕೇವಲ ಔಷಧ ತೆಗೆದುಕೊಳ್ಳುವುದರಿಂದ ಸಕ್ಕರೆ ಕಾಯಿಲೆ ವಾಸಿಯಾಗುವುದಿಲ್ಲ. ಊಟ, ತಿಂಡಿ, ವ್ಯಾಯಾಮ ಹಾಗೂ ನಮ್ಮ ಸರಿಯಾದ ಜೀವನದ ಕ್ರಮದಿಂದ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ಸಲಹೆ ನೀಡಿದರು.

ವೈದ್ಯರು ರೋಗಿಗಳಿಗೆ ಜಾಗತಿ ಮೂಡಿಸದೆ, ಕೇವಲ ಮಾತ್ರೆಗಳನ್ನು ನೀಡುವಲ್ಲಿ ಮಗ್ನರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಮೊದಲು ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು. ಅದನ್ನು ಮಾತ್ರೆಗಳಿಲ್ಲದೆ ಜೀವನದ ಶೈಲಿಯ ಬದಲಾವಣೆಯಿಂದ ವಾಸಿ ಮಾಡಿಕೊಳ್ಳುವ ಬಗ್ಗೆ ತಿಳಿಸಬೇಕು ಎಂದು ನುಡಿದರು.

ಜಗತ್ತಿನಲ್ಲಿ 40 ಕೋಟಿಗಿಂತ ಹೆಚ್ಚು ಜನರಿಗೆ ಸಕ್ಕರೆ ಕಾಯಿಲೆ ಇದೆ. ಭಾರತದಲ್ಲಿ 7 ಕೋಟಿ ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಪ್ರತಿ 20 ಸೆಕೆಂಡ್‌ಗೆ ಒಬ್ಬ ಮನುಷ್ಯನ ಕಾಲು ಕತ್ತರಿಸಲಾಗುತ್ತಿದೆ, 6 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾಯುತ್ತಿದ್ದಾನೆ. ವರ್ಷಕ್ಕೆ 10 ಲಕ್ಷ ಜನ ಈ ರೋಗಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾನೆ ಎಂದು ಹೇಳಿದರು.

ಸಕ್ಕರೆ ಕಾಯಿಲೆಯುಳ್ಳ ಶೇ. 8 ರಷ್ಟು ಜನರಿಗೆ ಹದಯ ಸಮಸ್ಯೆ, ಶೇ.60 ಜನರಿಗೆ ಕಣ್ಣಿಣ ತೊಂದರೆ ಮತ್ತು ಶೇ.50 ರಷ್ಟು ಜನರಿಗೆ ಕಾಲು ಸ್ವಾಧೀನ ಕಳೆದುಕೊಳ್ಳುವಂಥ ಮತ್ತು ಶೇ.40 ರಷ್ಟು ಜನರು ಕಿಡ್ನಿ ವೈಫಲಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಇದಕ್ಕೂ ಮುನ್ನ ಡಾ.ಗುರುಪಾದಪ್ಪಾ ನಾಗಮಾರಪಳ್ಳಿಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೆಡಿಕಲ್ ಕಾಲೇಜಿನ ಡಾ. ಚನ್ನಣ್ಣಾ, ಐಎಂಐ ಅಧ್ಯಕ್ಷ ಡಾ. ಆನಂದ, ಬಾಬುರಾವ್ ಪಸರ್ಗೆ, ಡಾ. ರಾಜೇಶ ಪಾರಾ, ಚಂದ್ರಕಾಂತ ಗುದಗೆ, ಶಿವಶರಣಪ್ಪಾ ವಾಲಿ, ಬ್ರಹ್ಮ್ಮಕುಮಾರಿ ಪ್ರತಿಮಾ, ಪ್ರಭಾಕರ್ ಮಹಾನಂದ, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ