ಆ್ಯಪ್ನಗರ

ಹೆಸರು ನೋಂದಣಿಗೆ ಸಲಹೆ

ಕಾರ್ಮಿಕರ ಜೀವನ ಮಟ್ಟ ಸುಧಾರಣೆ, ಸಾಮಾಜಿಕ ಭದ್ರತೆಗೆ ರಾಜ್ಯ ಸರÜಕಾರ ಹಲವು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕಟ್ಟಡ ಕಲ್ಲು ಕೂಲಿ ...

ವಿಕ ಸುದ್ದಿಲೋಕ 2 May 2017, 9:00 am

ಗುಂಡ್ಲುಪೇಟೆ: ಕಾರ್ಮಿಕರ ಜೀವನ ಮಟ್ಟ ಸುಧಾರಣೆ, ಸಾಮಾಜಿಕ ಭದ್ರತೆಗೆ ರಾಜ್ಯ ಸರÜಕಾರ ಹಲವು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕಟ್ಟಡ ಕಲ್ಲು ಕೂಲಿ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು.

ಮಡಹಳ್ಳಿ ವೃತ್ತದಲ್ಲಿ ಕಟ್ಟv Üಕಲ್ಲು ಕೂಲಿ ಕಾರ್ಮಿಕರ ಸಂಘದಿಂದ ನಡೆದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸುವ ಮೂಲಕ ಸರಕಾರದ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ ಎಂದರು. ಸತತ ಬರ ಪರಿಣಾಮ ರಾಜ್ಯ ಸರಕಾರ ಮರಳು ಗಣಿಗಾರಿಕೆಗೆ ನಿಷೇಧಿಸಿದೆ. ಇದರಿಂದ ನಿರ್ಮಾಣ ಕಾರ್ಯಗಳು ಕುಂಠಿತವಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನರೇಗಾ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕ ವರ್ಗಕ್ಕೆ ವರದಾನವಾಗಿಲ್ಲ. ಇದರಿಂದ ನೆರೆಯ ಕೇರಳ ಮತ್ತು ಕೊಡಗಿನ ಎಸ್ಟೇಟ್‌ಗಳಿಗೆ ಕೂಲಿ ಅರಸಿ ಹೋಗುವುದು ತಪ್ಪಿಲ್ಲ ಎಂದು ಬೇಸರಿಸಿದರು.

ನಿವೇಶನದ ಬೇಡಿಕೆ : ಸಂಘಕ್ಕೆ ಪುರಸಭೆಯಿಂದ ನಿವೇಶನ ಕೊಡಿಸುವುದಾಗಿ ದಿ.ಎಚ್‌.ಎಸ್‌.ಮಹಾದೇವಪ್ರಸಾದ್‌ ನೀಡಿದ್ದ ಭರವಸೆಯನ್ನು ನೂತನ ಶಾಸಕರಾದ ಗೀತಾ ಮಹಾದೇವಪ್ರಸಾದ್‌ ಈಡೇರಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಎಸ್‌.ಪುಟ್ಟಸ್ವಾಮಿ, ಶ್ರೀನಿವಾಸ ,ಕಿಟ್ಟಣ್ಣ , ಉಮೇಶ್‌, ಪಿಣ್ಣ ಶೆಟ್ಟಿ , ಸ್ವಾಮಣ್ಣ, ಮಹೇಶ್‌, ನಂಜುಂಡ, ಮನೋಹರ, ಮಹದೇವ, ಚಿಕ್ಕಣ್ಣ, ಕೃಷ್ಣಪ್ಪ, ಹುಚ್ಚಪ್ಪ, ಹೇಮಂತ್‌, ಶಿವಣ್ಣ, ನಾಗೇಶ್‌, ಜಿ.ಎಂ.ರಾಜು, ಮಾದು, ರವಿ, ಲಕ್ಷ ಮ್ಮ ಹಾಜರಿದ್ದರು.

ಲಾರಿ ಲೋಡರ್ಸ್‌: ಸಂಘದಿಂದ ಕಾರ್ಮಿಕ ದಿನ ಆಚರಿಸಲಾಯಿತು.

ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ತಕರ ಸಂಘದ ನಹೀಮ್‌ ಮಾತನಾಡಿ, ಕಾರ್ಮಿಕರು ಅನಕ್ಷ ರಸ್ಥರಾಗಿರುವ ಕಾರಣ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸೌಲಭ್ಯಗಳಿಗಾಗಿ ಸಂಘಟಿತರಾಗುವ ಜತೆಗೆ ಅಕ್ಷ ರ ಜ್ಞಾನ ಹೊಂದುವ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಲಾರಿ ಲೋಡರ್ಸ್‌ ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ಕಾರ್ಮಿಕ ವರ್ಗಕ್ಕೆ ದುಡಿಮೆಗೆ ತಕ್ಕ ಕೂಲಿ ಸಿಗುತ್ತಿಲ್ಲ. ಆದ್ದರಿಂದ ಕಾರ್ಮಿಕ ಇಲಾಖೆ ನಮ್ಮನ್ನು ಗುರುತಿಸಿ ಸೌಲಭ್ಯಗಳನ್ನು ನೀಡಬೇಕು. ಜೀವನ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ವರ್ತಕರಾದ ಬಾಬು, ಮಾಲೀಕ್‌, ಮೂರ್ತಿ, ರಮೇಶ್‌, ಗೌತಮ್‌, ಸಲೀಂ, ಶಿವಪ್ರಸಾದ್‌, ನಾರಾಯಣಶೆಟ್ಟಿ, ಮಣಿ, ಮುದಾಸೀರ್‌, ಮನ್ಸೂರ್‌, ಗಣೇಶ್‌, ಶ್ರೀನಿವಾಸ್‌, ಕಿಸ್ಮತ್‌, ಪ್ರಕಾಶ್‌, ಶ್ರೀರಂಗಶೆಟ್ಟಿ, ಮಹಮ್ಮದ್‌ ಅಲಿ, ಶಿವಣ್ಣ, ಟಿಪ್ಪು, ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ನಟರಾಜು, ಸಂಘದ ಕಾರ‍್ಯದರ್ಶಿ ಮಲ್ಲೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ