ಆ್ಯಪ್ನಗರ

7ನೇ ವೇತನ ಆಯೋಗ ಸವಲತ್ತಿಗೆ ಅಂಚೆ ಗ್ರಾಮೀಣ ನೌಕರರ ಒತ್ತಾಯ

ಅಂಚೆ ಇಲಾಖೆಯ ಗ್ರಾಮೀಣ ನೌಕರರಿಗೆ 7ನೇ ವೇತನ ಆಯೋಗದ ಸವಲತ್ತುಗಳನ್ನು ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 19 Aug 2017, 9:00 am

ಕೊಳ್ಳೇಗಾಲ: ಅಂಚೆ ಇಲಾಖೆಯ ಗ್ರಾಮೀಣ ನೌಕರರಿಗೆ 7ನೇ ವೇತನ ಆಯೋಗದ ಸವಲತ್ತುಗಳನ್ನು ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು, 7ನೇ ವೇತನ ಆಯೋಗದ ಸಿಫಾರಸು ಜಾರಿಗೆ ಬಂದು ತಿಂಗಳುಗಳು ಕಳೆದರೂ ಅಂಚೆ ಇಲಾಖೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಅಂಚೆ ನೌಕರರಿಗೆ ವೇತನ ಮತ್ತು ಸೇವಾ ಸವಲತ್ತುಗಳು ದೊರೆತಿಲ್ಲ. ಸವಲತ್ತುಗಳ ಪರಿಷ್ಕರಣೆಗೆಂದು ರಚಿಸಿದ್ದ ಕಮಲೇಶ್‌ಚಂದ್ರ ನೇತೃತ್ವದ ಸಮಿತಿ ಇಲಾಖೆಗೆ ವರದಿ ನೀಡಿ ಹಲವು ತಿಂಗಳಾದರು ಸಹ ಸಿಫಾರಸು ಜಾರಿಯಾಗಿಲ್ಲ. ಈ ಸಂಬಂಧ ಪ್ರಧಾನ ಮಂತ್ರಿಗಳು ಮತ್ತು ಎಲ್ಲಾ ಸಂಸದರು ಹಾಗೂ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ . ಇನ್ನಾದರು ನಮ್ಮ ಬೇಡಿಕೆಗಳನ್ನು ಹಿಡೇರಿಸಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಶೇಖಣ್ಣ, ಅಧ್ಯಕ್ಷ ಬಿ.ಸುಬ್ಬಣ್ಣ, ಖಜಾಂಚಿ ಪ್ರಕಾಶ್‌ ಆಂಥೋನಿ, ಚಿಕ್ಕಲಿಂಗಯ್ಯ, ರಾಜೇಂದ್ರ, ಬಸವರಾಜು, ಮಾದೇಶ, ಪುಟ್ಟಸ್ವಾಮಿ, ಮಹೇಶ ಮುಂತಾದವರದ್ದರು, ಬಳಿಕ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್‌ ಕಾಮಾಕ್ಷ ಮ್ಮ ಅವರಿಗೆ ಮನವಿ ಸಲ್ಲಿಸಿದರು.

ಹಕ್ಕೊತ್ತಾಯಗಳು: ಕಮಲೇಶ್‌ಚಂದ್ರ ಸಮಿತಿ ಶಿಫಾರಸು ಕೂಡಲೇ ಮಾರ್ಪಾಡುಗಳೊಡನೆ ಜಾರಿಗೆ ತರಬೇಕು.

ಶಾಖಾ ಅಂಚೆ ಕಚೇರಿಗಳನ್ನು ಕನಿಷ್ಠ 5 ಗಂಟೆ ಮತ್ತು ಗರಿಷ್ಠ 5-8 ಗಂಟೆ ಎಂದು ನಿಗದಿಪಡಿಸಿ ಸಮಯಕ್ಕ ತಕ್ಕಂತೆ ವೇತನ ನೀಡಬೇಕು.

ಗ್ರಾಮೀಣ ಅಂಚೆ ಸೇವಕರಿಗೆ ಪಿಂಚಣಿಯನ್ನು ಕ್ಯಾಟ್‌ ಪ್ರಿನ್ಸಿಪಾಲ್‌ ಬೆಂಚ್‌ ದೆಹಲಿ ಮತ್ತು ಮದ್ರಾಸ್‌ ಕೋರ್ಟ್‌ಗಳ ತೀರ್ಪಿನ ಆಧಾರದಲ್ಲಿ ನೀಡಬೇಕು.

ಟಾರ್ಗೆಟ್‌ ಹೆಸರನಲ್ಲಿ ಜಿಡಿಎಸ್‌ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸಿಬೇಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ