ಆ್ಯಪ್ನಗರ

ಹೊಸೂರು: ಬಸವ ಭವನ ನಿರ್ಮಾಣಕ್ಕೆ ಚಾಲನೆ

ತಾಲೂಕಿನ ವೆಂಕಟಯ್ಯನಛತ್ರ ಹೊಸೂರು ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

Vijaya Karnataka Web 1 Mar 2016, 3:00 am
Vijaya Karnataka Web basava bhavan work started
ಹೊಸೂರು: ಬಸವ ಭವನ ನಿರ್ಮಾಣಕ್ಕೆ ಚಾಲನೆ


ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಹೊಸೂರು ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ವೆಂಕಟಯ್ಯನಛತ್ರ ಹೊಸೂರು ಗ್ರಾಮದಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಬಸವ ನಿರ್ಮಾಣವಾಗುತ್ತಿದ್ದು, ಗ್ರಾಮಸ್ಥರು ಹಾಗೂ ಮುಖಂಡರು ಜತೆಗೂಡಿ ಸುಸಜ್ಜಿತ ಭವನ ನಿರ್ಮಾಣ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಎಚ್.ಎಸ್.ಬಸವರಾಜು ಮಾತನಾಡಿ, ಹೊಸೂರು ಗ್ರಾಮದಲ್ಲಿ ರಸ್ತೆಗಳು ಹದೆಗೆಟ್ಟಿದ್ದು ,ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಬೇಕು ಹಾಗೂ ಕುಡಿಯುವ ನೀರಿನ ಅಭಾವ ಇರುವುದರಿಂದ ಶೀಘ್ರ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚರಂಡಿ ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಜಿ.ಪಂ. ಸದಸ್ಯ ಎಂ.ರಾಮಚಂದ್ರು, ತಾ.ಪಂ ಸದಸ್ಯ ಪಿ.ಕುಮಾರ್‌ನಾಯಕ,ಗ್ರಾ.ಪಂ. ಸದಸ್ಯ ರಂಗಸ್ವಾಮಿ, ಬಂಗಾರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ಸುಂದರ್‌ರಾಜು , ನಟೇಶ್, ನಂಜುಂಡಸ್ವಾಮಿ, ಶಿವಮಲ್ಲಪ್ಪ, ನಾಗರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ