Please enable javascript.ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ - TP vice president poornimaa - Vijay Karnataka

ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ

Vijaya Karnataka Web 17 Jul 2015, 5:00 am
Subscribe

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿ ಕುಣಗಳ್ಳಿ ಕ್ಷೇತ್ರದ ಪೂರ್ಣಿಮಾ ಕೆಂಪರಾಜು ಅವಿರೋಧವಾಗಿ ಆಯ್ಕೆಯಾದರು.

tp vice president poornimaa
ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ
ಕೊಳ್ಳೇಗಾಲ: ತಾಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿ ಕುಣಗಳ್ಳಿ ಕ್ಷೇತ್ರದ ಪೂರ್ಣಿಮಾ ಕೆಂಪರಾಜು ಅವಿರೋಧವಾಗಿ ಆಯ್ಕೆಯಾದರು.

ಕೊನೆಯ 20 ತಿಂಗಳ ಅವಧಿಯ ಮೊದಲ 10 ತಿಂಗಳ ಅವಧಿಗೆ ಒಪ್ಪಂದಂತೆ ಉಮಾಲಿಂಗರಾಜು ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಪೂರ್ಣಗೊಂಡಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಪೂರ್ಣಿಮಾ ಕೆಂಪರಾಜು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಹಾಗೂ ನಾಮ ಪತ್ರ ಕ್ರಮ ಬದ್ಧವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.

ಅಧ್ಯಕ್ಷ ಮುರುಡುಶ್ವೇರಸ್ವಾಮಿ, ಸದಸ್ಯರಾದ ಮಲ್ಲಯ್ಯ, ನಸ್ರೂಲ್ಲಾ ಷರೀಫ್, ಸಣ್ಣೇಗೌಡ, ನಂಜೇಗೌಡ, ದಾಕ್ಷಾಯಣಿ, ಪ್ರಮೀಳಾ, ನಾಗಲಾಂಬಿಕಾ, ಇಒ ಶ್ರೀಧರ್ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ