Please enable javascript.5 lakh balijiga"s,ರಾಜ್ಯದಲ್ಲಿ 5ಲಕ್ಷ ಬಲಿಜಿಗರನ್ನು ನೋಂದಾಯಿಸುವ ಗುರಿ - aims to register 5 lakh balijiga"s in the state - Vijay Karnataka

ರಾಜ್ಯದಲ್ಲಿ 5ಲಕ್ಷ ಬಲಿಜಿಗರನ್ನು ನೋಂದಾಯಿಸುವ ಗುರಿ

Vijaya Karnataka 9 Dec 2018, 5:00 am
Subscribe

ಕರ್ನಾಟಕ ಪ್ರದೇಶ ಬಲಿಜ ಸಂಘಕ್ಕೆ ನೂರು ವರ್ಷ ತುಂಬುವ ಹಿನ್ನಲೆಯಲ್ಲಿ ರಾಜ್ಯದಲ್ಲಿ 5ಲಕ್ಷ ಮಂದಿ ಬಲಿಜಿಗರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಬಲಿಜಿಗರ ಸಂಘದ ಕಾರ್ಯದರ್ಶಿ ಜಗದೀಶ್‌ ತಿಳಿಸಿದರು.

CBP-8BPL1
ವಿಕಸುದ್ದಿಲೋಕ ಬಾಗೇಪಲ್ಲಿ

ಕರ್ನಾಟಕ ಪ್ರದೇಶ ಬಲಿಜ ಸಂಘಕ್ಕೆ ನೂರು ವರ್ಷ ತುಂಬುವ ಹಿನ್ನಲೆಯಲ್ಲಿ ರಾಜ್ಯದಲ್ಲಿ 5ಲಕ್ಷ ಮಂದಿ ಬಲಿಜಿಗರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಬಲಿಜಿಗರ ಸಂಘದ ಕಾರ್ಯದರ್ಶಿ ಜಗದೀಶ್‌ ತಿಳಿಸಿದರು.

ತಾಲೂಕಿನ ಕೊಂಡಂವಾರಿಪಲ್ಲಿ(ಜಕ್ಕಿನಾನಿಪಲ್ಲಿ) ಎಸ್‌.ಎಲ್‌,ಎಲ್‌ ಕಲ್ಯಾಣ ಮಂಟಪದಲ್ಲಿ ಬಲಿಜಿಗ ಸಮುದಾಯದ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿ 40ಲಕ್ಷ ದಷ್ಟು ಬಲಿಜ ಜನಾಂಗದ ಜನಸಂಖ್ಯೆ ಇದ್ದು ಸಮುದಾಯವನ್ನು ಹೆಚ್ಚು ಶಕ್ತಿಯುತವಾಗಿ ಬೆಳೆಸಬೇಕು ಎಂದು ದೃಢಸಂಕಲ್ಪ ಮಾಡಿದ್ದೇವೆ.ಈಗಾಗಲೇ ರಾಜ್ಯಾದಂತ ಪ್ರವಾಸ ಮಾಡಿದಾಗ ಹೆಚ್ಚಿನ ಸ್ಪಂದನೆ ಸಿಕ್ಕಿದೆ ಎಂದರು.

ಬಾಗೇಪಲ್ಲಿ ತಾಲೂಕು ಬಲಜಿಗರ ತವರೂರು ಹಾಗೂ ಶಕ್ತಿ ಕೇಂದ್ರ. ತಾಲೂಕಲ್ಲಿ ಸಮುದಾಯದ ಸಂಘಟನೆಯನ್ನು ಮಾದರಿಯಾಗಿ ಮಾಡಿ ತೋರಿಸಬೇಕಿದೆ. ಪ್ರತಿಯೊಬ್ಬ ಮುಖಂಡನೂ ಮನೆ ಮನೆಗೂ ತೆರಳಿ ಸದಸ್ಯತ್ವ ನೋಂದಾಯಿಸಿ ಯಶಸ್ವಿಗೊಳಿಸಬೇಕಾಗಿದೆ.ತಾಲೂಕಿನಲ್ಲಿ ಬಲಿಜ ಸಮಯದಾಯದ ಜನರು ಹೆಚ್ಚಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಬೇಕು ಎಂದರು.

ಜಿಪಂ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ ತಾಲೂಕಿನಲ್ಲಿ ಬಲಿಜಿಗ ಸಮುದಾಯದ ಜನರು ರಾಜಕೀಯವನ್ನು ಪಕ್ಕಕ್ಕೆ ಇಟ್ಟು ಸಮುದಾಯದ ಸಮಸ್ಯೆ ಬಂದಾಗ ಎಲ್ಲಾ ಒಗ್ಗಟ್ಟು ಪ್ರದರ್ಶಿಸಿದರೆ ಸಮುದಾಯದ ಜನರು ಆರ್ಥಿಕ,ರಾಜಕೀಯ, ಸಾಮಾಜಿಕವಾಗಿ ಅಭಿವೃದ್ಧೊಹೊಂದಲು ಸಾದ್ಯವಾಗುತ್ತದೆ.ಬಲಿಜ ಸಮುದಾಯದ ಮಾಜಿ ಶಾಸಕ ಎನ್‌.ಸಂಪಂಗಿ ಅವರು ಪಕ್ಷೇತರರಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು.ಆಗ ಬಲಿಜಿಗರ ಒಗ್ಗಟ್ಟಿನಿಂದ ಪ್ರಚಾರ ಮಾಡಿದ್ದಕ್ಕೆ ಸಂಪಂಗಿ ಅವರು ಜಯಗಳಿಸಿ ದರು ಎಂದರು.

ಒಗ್ಗಟ್ಟು ಪ್ರದರ್ಶಿಸಿ: ಯಾವುದೇ ಒಂದು ಸಂಘಟನೆಯಲ್ಲಿ ಕೆಲವು ಮುಖಂಡರು ಸದಸ್ಯತ್ವವನ್ನು ತಮಗೆ ಬೇಕಾದವರನ್ನು ಮಾಡಿಕೊಂಡು ಚುನಾವಣೆಯಲ್ಲಿ ಜಯಗಳಿಸುವ ಹುನ್ನಾರ ನಡೆಸುತ್ತಾರೆ.ಆದರೆ ಎಂ.ಆರ್‌.ಸೀತಾರಾಮ್‌ ಮಾರ್ಗದರ್ಶನದಲ್ಲಿ ಕರ್ನಾಟಕ ಬಲಿಜಿಗ ಸಂಘವು ಪ್ರಾಮಾಣಿಕ, ದಕ್ಷ ತೆಯಿಂದ ಕಾರ‍್ಯಕಲಾಪಗಳು ನಡೆಸುತ್ತಿದೆ.ಒಂದು ಮನೆಯಲ್ಲಿ ಮೂವರು ಅಣ್ಣತಮ್ಮಂದಿರು ಇದ್ದರೆ ಮೂವರು ಒಂದೊಂದು ರಾಜಕೀಯ ಪಕ್ಷ ದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ಸಮುದಾಯದ ವಿಷಯ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

ಜಿಪಂ ಸದಸ್ಯೆ ಗಾಯಿತ್ರ ನಂಜುಂಡಪ್ಪ, ರಾಜ್ಯ ಬಲಿಜಿಗರ ಸಂಘದ ಉಪಾಧ್ಯಕ್ಷ ರಾದ ಎಂ.ಆರ್‌.ಶ್ರೀನಿವಾಸಮೂರ್ತಿ,ತಿಮ್ಮಪ್ಪ, ಕಾರ್ಯದರ್ಶಿ ಶಂಕರಪ್ಪ, ಮುಖ್ಯಮಂತ್ರಿಗಳ ಕಚೇರಿ ವಿಶೇಷ ಅಧಿಕಾರಿ ಕೆ.ವೆಂಕಟೇಶ್‌,ತಾಲೂಕು ಬಲಿಜ ಸಂಘದ ನಿರ್ದೇಶಕ ಕೆ.ನರಸಿಂಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್‌.ನರಸಿಂಹನಾಯ್ಡು, ಪುರಸಭೆ ಸದಸ್ಯರಾದ ಶ್ರೀನಿವಾಸ ಅಪ್ಪಯ್ಯಬಾಬು, ಎಲ್‌.ಬಾಸ್ಕರ್‌, ಬಿ.ಎನ್‌.ಶ್ರೀನಿವಾಸ, ಯಲ್ಲಂಪಲ್ಲಿ ಗ್ರಾಪಂ ಅಧ್ಯಕ್ಷೆ ಆಲವೇಣಿ ಆನಂದ್‌, ಹಾಗೂ ಮುಖಂಡರಾದ ಎಸ್ಟಿಡಿ ಮೂರ್ತಿ, ಡಿ.ಎನ್‌.ರಘುನಾಥ್‌, ನಂದಕುಮಾರ್‌.ಬಿ.ಎನ್‌.ನವೀನ್‌,ಎಲ್‌ಐಸಿ ವೆಂಕಟರವಣಪ್ಪ, ನಾರಾಯಣಸ್ವಾಮಿ, ನಾಗಭೂಷಣ,ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಬಾಗೇಪಲ್ಲಿ

:ಬಾಗೇಪಲ್ಲಿ ತಾಲೂಕಿನ ಕೊಂಡಂವಾರಿಪಲ್ಲಿ(ಜಕ್ಕಿನಾನಿಪಲ್ಲಿ) ಎಸ್‌ಎಲ್‌ಎಲ್‌ ಕಲ್ಯಾಣ ಮಂಟಪದಲ್ಲಿ ಬಲಿಜಿಗ ಸಮುದಾಯದ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ