Please enable javascript.ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ಜಾತ್ರೆ - ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ಜಾತ್ರೆ - Vijay Karnataka

ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ಜಾತ್ರೆ

ವಿಕ ಸುದ್ದಿಲೋಕ 5 Mar 2015, 5:21 am
Subscribe

ಮಡಬೂರಿನ ದಾನಿವಾಸ ದುರ್ಗಾಂಬ ದೇವಿ ಜಾತ್ರೆ ಆರಂಭಗೊಂಡಿದ್ದು ಮಾ.9ರ ವರೆಗೆ ನಡೆಯಲಿದೆ. ಮಾ.6ರಂದು ರಥೋತ್ಸವ ಜರುಗಲಿದೆ.

ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ಜಾತ್ರೆ
ನರಸಿಂಹರಾಜಪುರ: ಮಡಬೂರಿನ ದಾನಿವಾಸ ದುರ್ಗಾಂಬ ದೇವಿ ಜಾತ್ರೆ ಆರಂಭಗೊಂಡಿದ್ದು ಮಾ.9ರ ವರೆಗೆ ನಡೆಯಲಿದೆ. ಮಾ.6ರಂದು ರಥೋತ್ಸವ ಜರುಗಲಿದೆ.

ದೇವಸ್ಥಾನದ ಇತಿಹಾಸ: 1580ರಲ್ಲಿ ಕೋಟೆ ದಾನಿವಾಸ ರಾಜವೀರಪ್ಪ ಒಡೆಯರು ಮತ್ತು ಪಾರ್ವತಮ್ಮ ಅವರ ವಂಶಸ್ಥರ ಕಾಲದಲ್ಲಿ ದಾನಿವಾಸ ದುರ್ಗಾಂಬ ದೇವಸ್ಥಾನ ಇತ್ತು ಎನ್ನುವುದಕ್ಕೆ ಭದ್ರಾ ಹಿನ್ನೀರಿನಲ್ಲಿ ಮುಳುಗಿರುವ ಕೋಟೆ ಮತ್ತು ಕುಸಿದು ಬಿದ್ದಿರುವ ದೇವಸ್ಥಾನಗಳು ಇದ್ದು, ನೀರು ಕಡಿಮೆಯಾದರೆ ಈಗಲೂ ಕಾಣಸಿಗುತ್ತವೆ.

ಈ ದುರ್ಗಾಂಬ ದೇವಸ್ಥಾನ ಸಮೀಪದಲ್ಲಿ ಬೇಲೂರಿನ ವೆಂಕಟಾದ್ರಿ ನಾಯಕನ ಇಬ್ಬರು ಹೆಣ್ಣು ಮಕ್ಕಳನ್ನು ಕೆಳದಿ ಅರಸು ಮನೆತನದವರು ವಿವಾಹ ಮಾಡಿಕೊಂಡ ಸವಿನೆನಪಿಗಾಗಿ ಮಳಲು ಹೊಳೆ ಎಂಬಲ್ಲಿ ಈಶ್ವರ ದೇವಸ್ಥಾನ ನಿರ್ಮಿಸಿದ್ದರು ಎನ್ನಲಾಗಿದೆ.

ದೇವಾಲೆಕೊಪ್ಪದ ಮನೆತನದವರು ದೇವಸ್ಥಾನದ ಮೇಲ್ವಿಚಾರಣೆ ನೋಡುತ್ತಿದ್ದಾರೆ. ಅವರಿಗೆ ನೆಲಗದ್ದೆ, ಗುಳದಮನೆ, ಗೇರುಬೈಲು, ಲಿಂಗಾಪುರ, ಹಳೇದಾನಿವಾಸ, ಕೆಸ್ವಿ, ಬಿಳಾಲ್ ಮನೆ, ಹಂದರೂ, ಹಾರಂಬಳ್ಳಿ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. 1950ರಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣದಿಂದಾಗಿ ಈ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಕೆಲ ಗ್ರಾಮಗಳು ಮುಳುಗಡೆಯಾಗಿದ್ದವು. ಆಗ ದೇವಲೆಕೊಪ್ಪದ ಸುಬ್ಬಯ್ಯಗೌಡರ ಮಗ ವೆಂಕಟೇಗೌಡರ ವಹಿವಾಟಿನಲ್ಲಿ ಮಡಬೂರಿನಲ್ಲಿ 1960ರಲ್ಲಿ ದುರ್ಗಾಂಬ ದೇವಿ ಮೂರ್ತಿ ಹಾಗೂ ಉರಿಚೌಡಿ, ಮಲೆನಾಡು ಚೌಡಿ, ಕೆಂಚರು, ಪಂಜುರ್ಲಿ, ಅಧೀನದೇವತೆಗಳನ್ನು ಮಡಬೂರಿನಲ್ಲಿ ಪ್ರತಿಷ್ಠಾಪಿಸಲಾಗಿದೆ.

ಕೋಲಾರ ಜಿಲ್ಲೆ ಶಿವಾರ ಪಟ್ಟಣದ ಶಿಲ್ಪಿ ಡಕ್ಕಣ್ಣಚಾರ್ಯರ ಮಗ ಬಸವಲಿಂಗಾಚಾರ್ಯರಿಂದ ವಿಗ್ರಹ ಕೆತ್ತಿಸಿ ಎಲ್.ಶ್ರೀನಿವಾಸ್‌ಮೂರ್ತಿ ಕೊಡುಗೆ ನೀಡಿದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ಗ್ರಾಮದಲ್ಲಿ ಪ್ರತಿವರ್ಷ ಹುಣ್ಣಿಮೆ ಹೊತ್ತಿಗೆ ಎಂಟು ದಿನಗಳ ಕಾಲ ಜಾತ್ರೆ ವಿಜಂಭಣೆಯಿಂದ ನಡೆಯುತ್ತದೆ. ದೇವಸ್ಥಾನ ವ್ಯಾಪ್ತಿಯಲ್ಲಿ ಐತಿಹಾಸಿಕ ಹಿನ್ನೆಲೆಯಿರುವ ಹಳೆದಾನಿವಾಸ ವೆಂಕಟರಮಣಸ್ವಾಮಿ, ಗಣಪತಿ ದೇವಸ್ಥಾನವಿದೆ. ಉತ್ತಮವಾದ ಸಮುದಾಯ ಭವನವಿದ್ದು ಬಹಳಷ್ಟು ಮದುವೆಗಳು ಇಲ್ಲಿ ನಡೆಯುತ್ತವೆ. ಇತ್ತೀಚೆಗೆ ದೇವಸ್ಥಾನ ಪಕ್ಕದಲ್ಲಿಯೇ ಪಂಚವಟಿ ಎಂಬ ಅನಾಥಾಶ್ರಮ ನಿರ್ಮಿಸಲಾಗಿದೆ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ