ಆ್ಯಪ್ನಗರ

ಕಸ ಕೊಂಡೊಯ್ಯವ ವಾಹನ ಕಾಣೆ

ಪಟ್ಟಣದಲ್ಲಿ ಕಸವನ್ನು ಕೊಂಡೊಯ್ಯುವ ವಾಹನ ಕಳೆದು ಒಂದು ವಾರದಿಂದ ಕಾಣೆಯಾಗಿದ್ದು, ಹುಡುಕಿಕೊಡುವಂತೆ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 27 May 2018, 5:00 am
ಮೂಡಿಗೆರೆ : ಪಟ್ಟಣದಲ್ಲಿ ಕಸವನ್ನು ಕೊಂಡೊಯ್ಯುವ ವಾಹನ ಕಳೆದು ಒಂದು ವಾರದಿಂದ ಕಾಣೆಯಾಗಿದ್ದು, ಹುಡುಕಿಕೊಡುವಂತೆ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web a garbage vehicle is missing
ಕಸ ಕೊಂಡೊಯ್ಯವ ವಾಹನ ಕಾಣೆ


ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ಮತ್ತು 11ನೇ ವಾರ್ಡ್‌ಗೆ ಸಂಬಂಧಿಸಿದ ರಸ್ತೆಯಲ್ಲಿ ಪ.ಪಂ.ಯ ಕಸ ಕೊಂಡುಯ್ಯವ ಆಟೊ ರಿಕ್ಷಾ ವಾರದಿಂದ ಬಂದಿಲ್ಲ. ಪರಿಸರ ರಕ್ಷ ಣೆ ಮಾಡಬೇಕೆಂಬ ದೃಷ್ಟಿಯಿಂದ ಮನೆಯಲ್ಲಿರುವ ಕಸವನ್ನು ಶೇಖರಿಸಿ ಬೆಳಗ್ಗೆ ಬರುವ ಪ.ಪಂ. ಆಟೊಕ್ಕೆ ಹಾಕುತ್ತಿದ್ದೇವೆ. ಕಸ ಹಾಕಲು ಸಾರ್ವಜನಿಕರೇ ತಯಾರಿರುವಾಗ ಕಸ ಕೊಂಡೊಯ್ಯವ ಆಟೊ ಯಾಕೆ ಕಳುಹಿಸುತ್ತಿಲ್ಲವೆಂದು ಮುಖ್ಯಾಧಿಕಾರಿಗೆ ಶನಿವಾರ ನೀಡಿದ ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಈ ಸಂದರ್ಭ ಮುಖ್ಯಾಧಿಕಾರಿ ಕಲಾವತಿ ಆಟೊ ಚಾಲಕನನ್ನು ಕೂಡಲೆ ಕರೆಸಿ ವಿಚಾರಿಸಿದರು. ಕಸ ಕೊಂಡೊಯ್ಯಲು ತೆರಳಿದಾಗ ಸ್ಥಳೀಯ ವ್ಯಕ್ತಿ ಗೋಪಿ ಎಂಬುವರು ಆಟೊ ಅಡ್ಡ ಹಾಕಿ, ಆ ಬಡಾವಣೆಯಿಂದ ಕಸ ತರಬಾರದೆಂದು ತಡೆ ಹಾಕುತ್ತಿರುವ ಬಗ್ಗೆ ತಿಳಿದು ಬಂತು.ವಿಚಾರ ತಿಳಿದ ಪಟ್ಟಣದ ನಿವಾಸಿಗಳು, ಆಟೊ ತಡೆ ಹಾಕಲು ಅವರಿಗೆ ಅಧಿಕಾರ ಕೊಟ್ಟವರಾರು? ಓರ್ವ ವ್ಯಕ್ತಿಯಿಂದ ಸುಮಾರು 20 ಮನೆಯಲ್ಲಿ ಶೇಖರಿಸಿದ್ದ ತ್ಯಾಜ್ಯ ವಸ್ತುಗಳು ಹಾಗೆಯೆ ಉಳಿಯುವಂತಾಗಿದೆ. ಅದನ್ನು ಹೊರಗೆ ಎಸೆಯುವುದು ನಮಗೇನು ಕಷ್ಟವೇನಲ್ಲ. ಆದರೆ ನಾವುಗಳೆ ಹಾಗೆ ಮಾಡಿದರೆ ಪರಿಸರ ರಕ್ಷಿಸುವವರಾರೆಂದು ಪ್ರಶ್ನಿಸಿದ ಸ್ಥಳೀಯರು, ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಆಟೊ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು. ನಂತರ ಆಟೊ ತಡೆ ಹಾಕುತ್ತಿದ್ದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದರು.

ಪಟ್ಟಣದ ನಿವಾಸಿಗಳಾದ ರವಿ ಕುಮಾರ್‌, ಹರೀಶ್‌, ಉಸ್ಮಾನ್‌, ಅರಣ್‌ಕುಮಾರ್‌, ಮನ್‌ ಮೋಹನ್‌, ಮುಸ್ತಫಾ ಇಂಙಳ್‌, ಶಬ್ಬೀರ್‌ ಅಹಮ್ಮದ್‌, ಸಂಪತ್‌, ಇಸ್ಮಾಹಿಲ್‌, ಅಲೀ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ