ಆ್ಯಪ್ನಗರ

ಅಪರಾಧಿಗಳಿಗೆ ಮರಣ ದಂಡನೆಗೆ ಆಗ್ರಹ

ಹೈದರಾಬಾದ್‌ನಲ್ಲಿಸಾಮೂಹಿಕ ಅತ್ಯಾಚಾರ, ಕೊಲೆ ಮಾಡಿದ ಅಪರಾಧಿಗಳಿಗೆ ತಕ್ಷಣವೇ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕ್ರರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಶನಿವಾರ ಮನವಿ ಸಲ್ಲಿಸಿದರು.

Vijaya Karnataka 1 Dec 2019, 5:00 am
ಶೃಂಗೇರಿ: ಹೈದರಾಬಾದ್‌ನಲ್ಲಿಸಾಮೂಹಿಕ ಅತ್ಯಾಚಾರ, ಕೊಲೆ ಮಾಡಿದ ಅಪರಾಧಿಗಳಿಗೆ ತಕ್ಷಣವೇ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕ್ರರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಶನಿವಾರ ಮನವಿ ಸಲ್ಲಿಸಿದರು.
Vijaya Karnataka Web 30SRI3_35


ಎಬಿವಿಪಿ ನಗರ ಕಾರ್ಯದರ್ಶಿ ಸೂರಜ್‌ ಮಾತನಾಡಿ, ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ, ಕೊಲೆ ಮಾಡಿದ ಘಟನೆಯನ್ನು ಎಬಿವಿಪಿ ಕಟುವಾಗಿ ಖಂಡಿಸುತ್ತದೆ. ಘಟನೆ ನಡೆದು ಎರಡು ದಿನದವರೆಗೆ ತನಿಖೆಯನ್ನು ಚುರುಕುಗೊಳಿಸದ ಪೊಲೀಸರ ನಡೆ ಮತ್ತು ಸುರಕ್ಷತೆಯ ವೈಫಲ್ಯಕ್ಕೆ ಕಾರಣವಾಗಿದೆ. ತೆಲಂಗಾಣದ ಗೃಹ ಮಂತ್ರಿಗಳು ನೀಡಿದ ಹೇಳಿಕೆಯು ಕೀಳು ಮಾನಸಿಕತೆಯನ್ನು ಬಿಂಬಿಸುತ್ತಿದೆ. ಕ್ರೂರ ಘಟನೆಗೆ ಕಾರಣರಾದವರಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಸಹ ಕಾರ್ಯದರ್ಶಿ ದುರ್ಗೇಶ್‌ ಮಾತನಾಡಿ, ಒಬ್ಬ ಮಹಿಳೆ ಸಹಾಯ ಆಪೇಕ್ಷಿಸಿದಾಗ ಸಹಾಯ ಮಾಡುವ ಬದಲಾಗಿ ಮಹಿಳೆಯನ್ನೇ ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದು ದುರಾದೃಷ್ಠಕರ. ಈ ರೀತಿ ಮಾಡುವ ಮಾನಸಿಕತೆ ಉಳ್ಳವರು ಭೂಮಿ ಮೇಲೆ ಬದುಕಿರುವುದು ಯೋಗ್ಯವಲ್ಲ.

ಎಬಿವಿಪಿ ಮುಖಂಡರಾದ ನವಜಿತ್‌, ರಂಜಿತ್‌, ಪ್ರಣಯ, ಸಂಹಿತ್‌, ರಾಹುಲ್‌ ಮತ್ತಿರರು ಇದ್ದರು. ಉಪ ತಹಸೀಲ್ದಾರ್‌ ಶಿವರಾಮ್‌ ಅವರಿಗೆ ಮನವಿ ಸಲ್ಲಿಸಿದರು.
,..........
ಅತ್ಯಾಚಾರಿಗಳಿಗೆ ಮರಣದಂಡನೆ ನೀಡಿ. ಇಂತಹ ಘಟನೆ ಮರುಕಳಿಸದಂತೆ ಈ ನಿರ್ಣಯ ಸಮಾಜಕ್ಕೆ ಉದಾಹರಣೆಯಾಗಲಿ.
-ನಿಧಿ ತ್ರಿಪಾಠಿ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ