ಆ್ಯಪ್ನಗರ

ದಾಸಿಮಯ್ಯ ವಿಶ್ವದ ಮೊದಲ ವಚನಕಾರರು

ದೇವರ ದಾಸಿಮಯ್ಯ ವಿಶ್ವದ ಮೊದಲ ವಚನಕಾರರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಸರಳವಾಗಿ ವಚನಗಳಿಂದ ಜನರನ್ನು ಎಚ್ಚರಿಸುವ ಕೆಲಸಗಳನ್ನು ಮಾಡಿದ್ದಾರೆ ...

Vijaya Karnataka 23 Mar 2018, 4:17 pm

ಚಿತ್ರದುರ್ಗ: ದೇವರ ದಾಸಿಮಯ್ಯ ವಿಶ್ವದ ಮೊದಲ ವಚನಕಾರರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಸರಳವಾಗಿ ವಚನಗಳಿಂದ ಜನರನ್ನು ಎಚ್ಚರಿಸುವ ಕೆಲಸಗಳನ್ನು ಮಾಡಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯಬಸವರಾಜನ್‌ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿಗೂ ಈ ಸಮುದಾಯದವರ ಸ್ಥಿತಿಗತಿಗಳು ಈಗಲೂ ಶೋಚನೀಯವಾಗಿದ್ದು ಸಮುದಾಯದ ಜನ ಕೀಳರಿಮೆಯನ್ನು ಬಿಟ್ಟು ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷ ಣವನ್ನು ಕೊಡಿಸಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನಿಡಿದರು.

ಸರಕಾರಗಳು ಕೌಶಾಲ್ಯಾಭಿವೃದ್ಧಿಯಲ್ಲಿ ಸಾಕಷ್ಟು ತರಬೇತಿಗಳನ್ನು ನೀಡುತ್ತಿದ್ದು ಸಮುದಾಯದ ಯುವ ಪೀಳಿಗೆಯವರು ಕೈ ಮಗ್ಗದಿಂದ ಹೊಸ, ಹೊಸ ವಿನ್ಯಾಸದಲ್ಲಿ ನೇಯ್ಗೆ ಆವಿಷ್ಕಾರಗಳನ್ನು ತಿಳಿದು ನೇರೆ ಹೊರೆ ದೇಶಗಳಲ್ಲಿ ಉದ್ಯೋಗವನ್ನು ಪಡೆದು ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಜವಳಿ ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್‌ ಮಾತನಾಡಿ, 'ಈಗಿನ ಸರಕಾರ ಈ ನೇಕಾರರ ಕೈ ಮಗ್ಗ ಮತ್ತು ವೃತ್ತಿಯನ್ನು ಜೀವಂತಿಕೆಯಾಗಿ ಉಳಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಶೇ 50 ರಷ್ಟು ಸಹಾಯಧನವನ್ನು ನೀಡುತ್ತಿದೆ. ನೇಕಾರರ 54 ಕೋಟಿ ರೂ. ಸಾಲವನ್ನು ಮಾಡಿದ್ದಾರೆ. ಲಾಳಿ ಮಗ್ಗಗಳಲ್ಲಿ ಒಂದು ಯೂನಿಟ್‌ಗೆ ಒಂದು ರೂಪಾಯಿ ಒಂದು ಪೈಸೆ ವಿದ್ಯುತ್‌ ಬಿಲ್‌ನ್ನು ಸರಕಾರ ಭರಿಸುತ್ತಿದೆ' ಎಂದರು.

ಸಾಹಿತಿ ಯು. ಜಗನ್ನಾಥ ಉಪನ್ಯಾಸ ನೀಡಿ'ದೇವರ ದಾಸಿಮಯ್ಯನವರು ಚಿಕ್ಕ ವಯಸ್ಸಿನಲ್ಲಿ ಅಧ್ಯಾತ್ಮಕ ಚಿಂತನೆ ಮಾಡಿ ಜ್ಞಾರ್ನಾಜನೆಗಾಗಿ ಶ್ರೀಶೈಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಮಹಾನ್‌ ಜ್ಞಾನಿ ಗುರುಗಳ ಹತ್ತಿರ ಜ್ಞಾನ ಸಂಪಾದನೆ ಮಾಡಿದ್ದರು. ಮಹಾನ್‌ ಪವಾಡ ಪುರುಷರಾಗಿದ್ದರು, ಮನುಷ್ಯ-ಮನುಷ್ಯತ್ವವನ್ನು ಅರಿತು ಎಲ್ಲರು ಸರಳ ಜೀವನ ಮಾಡಬೇಕೆಂದು ತಿಳಿಸಿದ್ದಾರೆ ಎಂದರು.

ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ತಾಲ್ಲೂಕು ದಂಡಾಧಿಕಾರಿ ಮೋಹನ್‌, ಡಿಡಿಪಿಐ ಅಂಥೋಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಲ್ಲಾ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್‌.ಸುರೇಶ್‌, ಸೇರಿದಂತೆ ಮತ್ತಿತರ ಗಣ್ಯರು ಇದ್ದರು. ಶ್ರೀಬನಶಂಕರಿ ದೇವಸ್ಥಾನದಿಂದ ನಾನಾ ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ನಗರಗಳಲ್ಲಿ ಮೆರವಣಿಗೆ ಸಾಗಿ ತರಾಸು ರಂಗಮಂದಿರದಲ್ಲಿ ಸಮಾವೇಶಗೊಂಡಿತು.

ಮೊಳಕಾಲ್ಮುರು, ಕೊಂಡ್ಲಹಳ್ಳಿಯಲ್ಲಿ ನೇಕಾರರ ಮಗ್ಗಗಳಿದ್ದು 30 ಎಕರೆಯಲ್ಲಿ ಮಗ್ಗದ ಉದ್ಯಮ ಸ್ಥಾಪಿಸಲು ಜಾಗವನ್ನು ಸರಕಾರ ನೀಡಿದೆ ಎಂದು ತಿಳಿಸಿದರು. ದುಡಿಯುವ ಕೈಗಳಿಗೆ ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ಈ ಜವಳಿ ಕೈಮಗ್ಗ ಉದ್ಯಮದಿಂದ ಸಮುದಾಯದವರು ತೃಪ್ತಿದಾಯಕ ಜೀವನ ಸಾಗಿಸಬಹುದಾಗಿದೆ.

- ಗೋ.ತಿಪ್ಪೇಶ್‌, ಜವಳಿ ನಿಗಮದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ