ದಾವಣಗೆರೆ: ರಿಂಗ್ ರಸ್ತೆಯ ನವೋದಯ ವಿದ್ಯಾಸಂಸ್ಥೆಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಶಾಲಾ ಕೊಠಡಿ ಸುಟ್ಟು ಕರಕಲಾಗಿದೆ.
ಅ.23ರಂದು ಶಾಲಾ ಸಿಬ್ಬಂದಿ ದೀಪಾವಳಿ ಅಂಗವಾಗಿ ಪೂಜೆ ಮಾಡಿ ದೀಪ ಹಚ್ಚಿ ಹೋಗಿದ್ದು, ಆಕಸ್ಮಿಕವಾಗಿ ದೀಪ ಕೆಳಗೆ ಬಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಠಡಿಯೊಳಗಿದ್ದ ಪೀಠೋಪಕರಣ ಹಾಗೂ ಶಾಲೆ ದಾಖಲೆ ಪುಸ್ತಕ ಹಾಗೂ ಕಡತ ಸುಟ್ಟುಹೋಗಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.