Please enable javascript.ಕಲಿಕಾ ಸಾಧನ ಮೌಲ್ಯ ಮಾಪನ ವೀಕ್ಷಣೆ - ಕಲಿಕಾ ಸಾಧನ ಮೌಲ್ಯ ಮಾಪನ ವೀಕ್ಷಣೆ - Vijay Karnataka

ಕಲಿಕಾ ಸಾಧನ ಮೌಲ್ಯ ಮಾಪನ ವೀಕ್ಷಣೆ

ವಿಕ ಸುದ್ದಿಲೋಕ 20 Mar 2017, 4:31 am
Subscribe

ಕಲಿಕಾ ಸಾಧನ ಮೌಲ್ಯ ಮಾಪನ 4, 6ನೇ ತರಗತಿ ವಿದ್ಯಾರ್ಥಿಗಳಿಗೆ ಸಂಜೀವಿನಿ ಇದ್ದಂತೆ ಎಂದು ಶಾಸಕ ಎಚ್‌.ಪಿ.ರಾಜೇಶ್‌ ಹೇಳಿದರು.

ಕಲಿಕಾ ಸಾಧನ ಮೌಲ್ಯ ಮಾಪನ ವೀಕ್ಷಣೆ
ಜಗಳೂರು : ಕಲಿಕಾ ಸಾಧನ ಮೌಲ್ಯ ಮಾಪನ 4, 6ನೇ ತರಗತಿ ವಿದ್ಯಾರ್ಥಿಗಳಿಗೆ ಸಂಜೀವಿನಿ ಇದ್ದಂತೆ ಎಂದು ಶಾಸಕ ಎಚ್‌.ಪಿ.ರಾಜೇಶ್‌ ಹೇಳಿದರು.

ಪಟ್ಟಣದ ಸಂತೇಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ, ಶಾಲಾ ಗುಣಮಟ್ಟ ಮೌಲ್ಯಾಂಕನದಿಂದ ನಡೆದ ಪ್ರಸಕ್ತ 4,6ನೇ ತರಗತಿ ಮಕ್ಕಳಿಗೆ ಕಲಿಕಾ ಸಾಧನ ಮೌಲ್ಯ ಮಾಪನ ವೀಕ್ಷಿಸಿ, ಮಾತನಾಡಿದರು. 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಮೌಲ್ಯ ಮಾಪನಕ್ಕೆ ವರ್ಗಾವಣೆ ಮಾಡಿರುವುದು ಮಕ್ಕಳ ಬುದ್ದಿ ಶಕ್ತಿ ಅರಿಯಲು ಸಹಕಾರಿ. ಶಾಲೆಯಲ್ಲಿ ಕಲಿಯುವ ಪ್ರತಿ ಮಗುವು ಪಠ್ಯದ ಸಾರಾಂಶ ಅರಿಯುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಶಿಕ್ಷ ಕರು ಪಠ್ಯ ಚಟುವಟಿಕೆಗೆ ಸೀಮಿತರಾಗದೇ ವಿದ್ಯಾರ್ಥಿಗಳ ಪೋಷಕರ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಶಾಲೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಈಶ್ವರಚಂದ್ರ ಮಾತನಾಡಿದರು. ಮೌಲ್ಯ ಮಾಪನದಲ್ಲಿ ಭಾಗವಹಿಸಿದ್ದ ಶಿಕ್ಷ ಕರಿಗೆ ದಿ. ರಂಜನಿ ರಾಜೇಶ್‌ ಜ್ಷಾಪಕಾರ್ಥ ಮಾಜಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಇ.ಸತೀಶ್‌, ಪ್ರಾಥಮಿಕ ಶಿಕ್ಷ ಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್‌ 4 ದಿನಗಳ ಕಾಲ ಉಪಹಾರದ ವ್ಯವಸ್ಥೆ ಮಾಡಿದ್ದರು. ಬಿಆರ್‌ಸಿ ಗಿರೀಶ್‌ ಸೇರಿದಂತೆ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ