ಆ್ಯಪ್ನಗರ

ಅನ್ನಭಾಗ್ಯದ 330 ಚೀಲ ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಭಾನುವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ವಿಕ ಸುದ್ದಿಲೋಕ 18 Jul 2017, 8:34 am
ಹರಿಹರ : ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಭಾನುವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web  330
ಅನ್ನಭಾಗ್ಯದ 330 ಚೀಲ ಅಕ್ಕಿ ವಶ


ಖಚಿತ ಮಾಹಿತಿ ಮೇರೆಗೆ ನಗರದ ಕೈಗಾರಿಕಾ ಪ್ರದೇಶದ ಗೋದಾಮೊಂದರಲ್ಲಿ ದಾಸ್ತಾನು ಮಾಡಿದ್ದರೆನ್ನಲಾದ 330 ಚೀಲ ಅಕ್ಕಿ, 14 ಚೀಲ ಗೋದಿ ವಶಪಡಿಸಿಕೊಳ್ಳಲಾಗಿದೆ.

ಗ್ರಾಮಾಂತರ ಉಪವಿಭಾಗ ಡಿವೈಎಸ್‌ಪಿ ಮಂಜುನಾಥ್‌ ಗಂಗಲ್‌ ನೇತೃತ್ವದ ತಂಡ ದಾಳಿ ನಡೆಸಿದೆ. ಸಿಪಿಐ ಲಕ್ಷ ್ಮಣ್‌ ನಾಯ್ಕ, ಪಿಎಸ್‌ಐ ಸಿದ್ದೇಗೌಡ, ಎಎಸ್‌ಐ ಮಾರಣ್ಣ, ಆಹಾರ ನಿರೀಕ್ಷ ಕ ಯು.ಎಚ್‌. ರಮೇಶ್‌ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಆರೋಪಿ ಪರಾರಿ: ತಾಜುದ್ದೀನ್‌ ಎಂಬ ವ್ಯಕ್ತಿ ಅಕ್ರಮ ಸಂಗ್ರಹ ಮಾಡಿದ್ದೆನ್ನಲಾಗಿದ್ದು, ಆತ ನಾಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ