Please enable javascript.ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮ,ದಾವಣಗೆರೆಯಲ್ಲಿ ಭತ್ತದ ಗದ್ದೆಗೆ ಸಿಂಪಡಿಸಿದ ಕಳೆನಾಶಕದಿಂದ 330 ಅಡಕೆ ಮರಗಳು ನಾಶ - areca trees burnt dead in basavapatna as famer uses weedicides in neighbour paddy field - Vijay Karnataka

ದಾವಣಗೆರೆಯಲ್ಲಿ ಭತ್ತದ ಗದ್ದೆಗೆ ಸಿಂಪಡಿಸಿದ ಕಳೆನಾಶಕದಿಂದ 330 ಅಡಕೆ ಮರಗಳು ನಾಶ

Curated byಅಮಿತ್ ಎಂ.ಎಸ್ | Vijaya Karnataka 18 May 2024, 3:25 pm
Subscribe

Weedicides Kills Areca Trees in Davanagere: ಭತ್ತದ ಗದ್ದೆಗೆ ಹೊಡೆದ ಕಳೆ ನಾಶಕವು ಅಡಕೆ ಮರಗಳಿಗೆ ಮಾರಕವಾದ ಘಟನೆ ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ. ಸುಮಾರು 12 ವರ್ಷದ 330 ಅಡಕೆ ಮರಗಳು ಕಳೆ ನಾಶಕದ ಪರಿಣಾಮದಿಂದ ಸುಟ್ಟು ಹೋಗಿವೆ. ಇದರಿಂದ ನಷ್ಟಕ್ಕೆ ಒಳಗಾಗಿರುಬ ರೈತರು ಗದ್ದೆಗೆ ಕಳನಾಶಕ ಹೊಡೆದ ವ್ಯಕ್ತಿ, ಆ ಕಳೆನಾಶಕ ಕಂಪೆನಿ ಮಾಲೀಕರು ಹಾಗೂ ಅದನ್ನು ಮಾರಾಟ ಮಾಡಿದ ಅಂಗಡಿ ವಿರುದ್ಧ ದೂರು ನೀಡಿದ್ದಾರೆ.

ಹೈಲೈಟ್ಸ್‌:

  • ಕಳೆ ನಾಶಕ ಸಿಂಪಡಿಸಿದ ರೈತ, ಔಷಧ ಕಂಪನಿ ಮಾಲೀಕನ ವಿರುದ್ಧ ದೂರು ದಾಖಲು
  • 30 ವರ್ಷಕ್ಕೆ ಬರುವ ಸರಾಸರಿ 3 ಲಕ್ಷದ ನಷ್ಟಕ್ಕಾಗಿ 99 ಲಕ್ಷ ರೂ.ಪರಿಹಾರಕ್ಕೆ ರೈತರ ಒತ್ತಾಯ
  • ಭತ್ತ ನಾಟಿ ಮಾಡಲು ಗುತ್ತಿಗೆ ಪಡೆದಿದ್ದ ವ್ಯಕ್ತಿ, ಕಳೆಗಳನ್ನು ನಾಶಪಡಿಸಲು ಹೊಡೆದಿದ್ದ ಔಷಧ
areca trees
ಕಳೆನಾಶಕದಿಂದಾಗಿ ಸುಟ್ಟು ಹೋದ ಮರಗಳು
ಬಸವಾಪಟ್ಟಣ (ದಾವಣಗೆರೆ): ಭತ್ತದ ಗದ್ದೆಯ ಹುಲ್ಲಿನ ಹತೋಟಿಗೆ ಸಿಂಪಡಿಸಿದ ಕಳೆ ನಾಶಕದ ಪರಿಣಾಮ ಗದ್ದೆಯ ಪಕ್ಕದ ಸುಮಾರು 330 ಅಡಕೆ ಗಿಡಗಳು ಸುಟ್ಟು ನಾಶವಾಗಿರುವ ಘಟನೆ ಚನ್ನಗಿರಿ ತಾಲೂಕು ಕಣಿವೆಬಿಳಚಿ ಗ್ರಾಮದಲ್ಲಿ ನಡೆದಿದೆ.
ನಾಶವಾಗಿರುವ ಫಸಲು ಬಿಡುವ 12 ವರ್ಷದ ಅಡಕೆ ಗಿಡಗಳು, ಕಣಿವೆಬಿಳಚಿ ಗ್ರಾಮದ ರೈತರಾದ ಆಂಜನಾಬೋವಿ ಮತ್ತು ಹನುಮಂತಪ್ಪ ಎಂಬುವರಿಗೆ ಸೇರಿದ್ದಾಗಿದೆ. ಗದ್ದೆಯ ಪಕ್ಕದಲ್ಲಿರುವ ಅಡಕೆ ಗಿಡಗಳಿಗೆ ಬೇರುಗಳ ಮೂಲಕ ಕಳೆನಾಶಕ ಔಷ ತಗುಲಿ, ಮರಗಳು ಸುಟ್ಟಿವೆ.
ಕೃಷಿಭೂಮಿಗೆ ಕೀಟನಾಶಕಕ್ಕಿಂತ ಕಳೆನಾಶಕವೇ ಹೆಚ್ಚು ಅಪಾಯಕಾರಿ: ಜಿಕೆವಿಕೆ ಎಚ್ಚರಿಕೆ!

ರೈತನಿಂದ ಪೊಲೀಸರಿಗೆ ದೂರು

''ಪಕ್ಕದ ಜಮೀನಿನವರು ಭತ್ತದ ನಾಟಿ ಮಾಡಿ ಕೀಟನಾಶಕವನ್ನು ಭತ್ತದ ಗದ್ದೆಗೆ ಹಾಕಿದ್ದು, ಗದ್ದೆಯ ಪಕ್ಕದ ಬದುವಿನಲ್ಲಿರುವ ಆಂಜನಾಬೋವಿ ಅವರಿಗೆ ಸೇರಿದ 230 ಮತ್ತು ಹನುಮಂತಪ್ಪಗೆ ಸೇರಿದ 100 ಮರಗಳು ಸುಳಿ ಒಣಗಿ ಗಿಡಗಳು ಸಂಪೂರ್ಣ ನಾಶವಾಗಿವೆ. ಜಮೀನಿಗೆ ಕಳೆನಾಶಕ ಸಿಂಪಡಿಸಿದ ವ್ಯಕ್ತಿ ಮತ್ತು ಔಷಧ ಕಂಪನಿ ಮಾಲೀಕ, ಔಷಧಿ ಮಾರಾಟಗಾರನ ವಿರುದ್ಧ ಶುಕ್ರವಾರ ಬಸವಾಪಟ್ಟಣ ಪೊಲೀಸ್‌ ಠಾಣೆಯಲ್ಲಿದೂರು ದಾಖಲು ಮಾಡಿದ್ದೇನೆ'' ಎಂದು ರೈತ ಆಂಜನಾಬೋವಿ 'ವಿಕ'ಗೆ ತಿಳಿಸಿದರು.

8 ತಿಂಗಳ ಹಿಂದೆ ಪಕ್ಕದ ಜಮೀನಿನವರಾದ ಚೌಡಕ್ಕ ದೊಡ್ಡವೆಂಕಟಾಬೋವಿ ಎಂಬುವರು ಭತ್ತದ ನಾಟಿ ಮಾಡಲು ಬೇರೆಯವರಿಗೆ ಜಮೀನು ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದವರು ಭತ್ತದ ಕಳೆಯನ್ನು ನಿವಾರಿಸಲು ಕಳೆನಾಶಕ ಸಿಂಪಡಿಸಿದ ಪರಿಣಾಮ ಸುಮಾರು ನಾಲ್ಕರಿಂದ ಐದು ತಿಂಗಳ ಒಳಗೆ ಮರಗಳು ಒಣಗುತ್ತಾ ನಾಶವಾಗಿವೆ ಎಂದು ರೈತ ದೂರಿನಲ್ಲಿ ತಿಳಿಸಿದ್ದಾರೆ.
ತುಮಕೂರು : ಬಿಸಿಲಲ್ಲಿಒಣಗುತ್ತಿರುವ ತೆಂಗು ಅಡಕೆ ರಕ್ಷಣೆಗೆ ಹರ ಸಾಹಸ

99 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಒಂದು ಮರಕ್ಕೆ ಕನಿಷ್ಟ 2 ಕೆಜಿ ಅಡಕೆ ಬರುತ್ತಿತ್ತು. ಅದರಂತೆ 330 ಗಿಡಗಳಿಂದ ವರ್ಷಕ್ಕೆ 660 ಕೆಜಿ ಅಡಕೆ ಬರುತ್ತದೆ. ಒಂದು ಕ್ವಿಂಟಾಲ್‌ಗೆ 50 ಸಾವಿರ ರೂ. ದರವಿದೆ. ಈಗ ಮರಗಳು ಸುಟ್ಟು ಹೋಗಿರುವುದರಿಂದ ವರ್ಷಕ್ಕೆ 3.30 ಲಕ್ಷ ರೂ. ನಷ್ಟ ಆಗುತ್ತದೆ. ಅಡಕೆ ಮರಗಳು ಕನಿಷ್ಠ 30 ವರ್ಷ ಬಾಳುತ್ತವೆ. ಅದರಂತೆ 30 ವರ್ಷಕ್ಕೆ 99 ಲಕ್ಷ ರೂ. ನನಗೂ ಮತ್ತು ನನ್ನ ಅಣ್ಣನಿಗೂ ಸೇರಿ ನಷ್ಟ ಉಂಟಾಗಿರುತ್ತದೆ. ಕಂಪನಿ ಮಾಲೀಕರು, ಔಷಧ ಮಾರಾಟಗಾರ ಮತ್ತು ಜಮೀನು ಗುತ್ತಿಗೆದಾರರು ಈ ನಷ್ಟದ ಪರಿಹಾರ ನೀಡಬೇಕು ಎಂದು ರೈತರು ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅಮಿತ್ ಎಂ.ಎಸ್
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ