ಆ್ಯಪ್ನಗರ

ಲೈಬ್ರರಿ ಸುದ್ದಿ..ವಿಕ ಫಲಶೃತಿ

ಕೊನೆಗೂ ಎಚ್ಚೆತ್ತುಕೊಂಡ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರು, ಕೇಂದ್ರ ಗ್ರಂಥಾಲಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತ್ಯೇಕ ಪತ್ರಿಕಾ ವಿಭಾಗ ನಿರ್ಮಿಸಿಕೊಂಡುವಂತೆ ಪಾಲಿಕೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜತೆಗೆ ನೂತನ ಮಹಿಳಾ ಶೌಚಾಲಯ ಕಟ್ಟಿಸಲು ನೀಲನಕ್ಷೆ ತಯಾರಿಸಿಕೊಡುವಂತೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

Vijaya Karnataka 10 Aug 2018, 5:00 am
ದಾವಣಗೆರೆ : ಕೊನೆಗೂ ಎಚ್ಚೆತ್ತುಕೊಂಡ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರು, ಕೇಂದ್ರ ಗ್ರಂಥಾಲಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತ್ಯೇಕ ಪತ್ರಿಕಾ ವಿಭಾಗ ನಿರ್ಮಿಸಿಕೊಂಡುವಂತೆ ಪಾಲಿಕೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜತೆಗೆ ನೂತನ ಮಹಿಳಾ ಶೌಚಾಲಯ ಕಟ್ಟಿಸಲು ನೀಲನಕ್ಷೆ ತಯಾರಿಸಿಕೊಡುವಂತೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
Vijaya Karnataka Web library issues action to alleviate
ಲೈಬ್ರರಿ ಸುದ್ದಿ..ವಿಕ ಫಲಶೃತಿ


ನಗರದ ಬಡಾವಣೆ ಪೊಲೀಸ್‌ ಠಾಣೆ ಮುಂಭಾಗದ ಕೇಂದ್ರ ಗ್ರಂಥಾಲಯದಲ್ಲಿನ ಸಮಸ್ಯೆಗಳ ಕುರಿತು 'ವಿಜಯ ಕರ್ನಾಟಕ' ದಿನ ಪತ್ರಿಕೆ ಆಗಸ್ಟ್‌ 3ರಂದು 'ಲೈಬ್ರರಿಯಲ್ಲಿ ಕುಳಿತು ಓದಲು ನೆಲವೇ ಗತಿ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಮರು ದಿನದಿಂದಲೇ ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಉಪನಿರ್ದೇಶಕರು ಕಾರ್ಯೋನ್ಮುಖರಾಗಿದ್ದಾರೆ.

ಲೈಬ್ರರಿ ಮುಂದಿನ ಖಾಲಿ ಜಾಗದಲ್ಲಿ ಪ್ರತ್ಯೇಕ ಪತ್ರಿಕೆ ವಿಭಾಗ ನಿರ್ಮಿಸಿಕೊಂಡುವಂತೆ ಪಾಲಿಕೆ ಆಯುಕ್ತರು ಮತ್ತು ಸದಸ್ಯೆರಿಗೂ ಬೇಡಿಕೆ ಸಲ್ಲಿಸಿದ್ದು, 2018-19ನೇ ಸಾಲಿನ ಆಯ-ವ್ಯಯ ಮಂಡಿಸಿ, ಆಡಳಿತಾತ್ಮಕ ಅನುಮೋದನೆಗಾಗಿ ಇಲಾಖೆಯ ನಿರ್ದೇಶನಾಲಯಕ್ಕೆ ರವಾನಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರು ಚಂದ್ರಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಕ್ಕೆ ಮೂರು ಬಾರಿ ಶುಚಿ:

ಶೌಚಾಲಯವನ್ನು ಓದುಗರು ಹೊರತುಪಡಿಸಿ ಹೊರಗಿನ ಸಾರ್ವಜನಿಕರು ಬಳಸುತ್ತಿದ್ದು, ಇದರಿಂದ ದುರ್ವಾಸನೆ ಹೊಡೆಯುತ್ತಿತ್ತು. ಆದರೆ ಈಗ ದಿನಕ್ಕೆ ಮೂರು ಬಾರಿ ಶುಚಿಗೊಳಿಸಲು ಮಾರ್ಗದರ್ಶನ ನೀಡಲಾಗಿದೆ. ಹಾಗೆಯೇ ಮಹಿಳಾ ಶೌಚಾಲಯ ರಿಪೇರಿ ಪದೇ ಪದೇ ಬರುತ್ತಿದ್ದು, ನೂತನ ಶೌಚಾಲಯ ಕಟ್ಟಿಸಲು ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸಿ ನೀಡುವಂತೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

-------

ಕೋಟ್‌...

ನಗರ ಕೇಂದ್ರ ಗ್ರಂಥಾಲಯದಲ್ಲಿ ಮಹಿಳಾ ಶೌಚಾಲಯ ರಿಪೇರಿ ಕುರಿತು ನಾಳೆಯೇ ಎಂಜಿನಿಯರ್‌ ಕಳುಹಿಸಿ ಕೊಡಲಾಗುವುದು. ಜತೆಗೆ ಗ್ರಂಥಾಲಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತ್ಯೇಕ ಪತ್ರಿಕೆ ವಿಭಾಗ ನಿರ್ಮಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಮಂಜುನಾಥ್‌ ಆರ್‌.ಬಳ್ಳಾರಿ, ಪಾಲಿಕೆ ಆಯುಕ್ತರು.

-------

ಓದುಗರ

ಲೈಬ್ರರಿಯಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಓದುಗರ ಹೊಣೆಯಾಗಿದೆ. ಜತೆಗೆ ಇಲ್ಲಿನ ಪತ್ರಿಕೆಗಳಲ್ಲಿ ತಮಗೆ ಬೇಕಾದ ವಿಷಯದ ಸುದ್ದಿ ಕಟ್‌ ಮಾಡಿಕೊಳ್ಳುವುದು ಹಾಗೂ ಪುಸ್ತಕಗಳಲ್ಲಿನ ಪುಟಗಳ ಕತ್ತರಿಸಿಕೊಂಡು ಹೋಗುವುದರಿಂದ ಉಳಿದ ಓದುಗರಿಗೆ ತೊಂದರೆಯಾಗುತ್ತಿದೆ. ಇದು ನಮ್ಮ ಗ್ರಂಥಾಲಯ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾವೂ ಓದಿ ಉಳಿದವರಿಗೂ ಪುಸ್ತಕ, ಪತ್ರಿಕೆಗಳ ಓದಲು ಅನುವು ಮಾಡಿಕೊಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ