Please enable javascript.ಕುಂದಗೋಳ :ಶಿವಾಜಿ ಜಯಂತ್ಯುತ್ಸವ - ಕುಂದಗೋಳ :ಶಿವಾಜಿ ಜಯಂತ್ಯುತ್ಸವ - Vijay Karnataka

ಕುಂದಗೋಳ :ಶಿವಾಜಿ ಜಯಂತ್ಯುತ್ಸವ

ವಿಕ ಸುದ್ದಿಲೋಕ 1 May 2014, 4:34 am
Subscribe

ಕುಂದಗೋಳ :ಪಟ್ಟಣದ ಕಿಲ್ಲಾ ಓಣಿಯ ಕ್ಷತ್ರೀಯ ಮರಾಠ ಸಮಾಜ ಬಾಂಧವರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 387 ನೇ ಜಯಂತಿಯನ್ನು ನ.1 ರಂದು ಇಲ್ಲಿಯ ಶಿವಾಜಿ ನಗರದ ರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.

ಕುಂದಗೋಳ :ಶಿವಾಜಿ ಜಯಂತ್ಯುತ್ಸವ
ಕುಂದಗೋಳ :ಪಟ್ಟಣದ ಕಿಲ್ಲಾ ಓಣಿಯ ಕ್ಷತ್ರೀಯ ಮರಾಠ ಸಮಾಜ ಬಾಂಧವರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 387 ನೇ ಜಯಂತಿಯನ್ನು ನ.1 ರಂದು ಇಲ್ಲಿಯ ಶಿವಾಜಿ ನಗರದ ರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 10 ಕ್ಕೆ ಶಿವಾಜಿ ಯುವಕ ಮಂಡಳದ ಯುವಕರಿಂದ ಬೈಕ್ ರ‌್ಯಾಲಿ ಮಾಡಲಾಗುವುದು ಮಧ್ಯಾಹ್ನ 3ಕ್ಕೆ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು

ಕಾರ್ಯಕ್ರಮದ ಸಾನ್ನಿಧ್ಯವನ್ನು ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಸ್ವಾಮಿಗಳು, ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಹಾಗೂ ಕಲ್ಯಾಣಪುರದ ಬಸವಣ್ಣಜ್ಜನವರು ಆಗಮಿಸುವರು. ಶಾಸಕ ಸಿ.ಎಸ್.ಶಿವಳ್ಳಿ ಅಧ್ಯಕ್ಷತೆ ವಹಿಸುವರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮೆರವಣಿಗೆ ಉದ್ಘಾಟಿಸುವರು. ಶಾಸಕರಾದ ವಿನಯ ಕುಲಕರ್ಣಿ, ಸಂತೋಷ ಲಾಡ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಅಕ್ಕಿ ಎಸ್.ಐ.ಚಿಕ್ಕನಗೌಡ್ರ,ಪಿ.ಸಿ.ಸಿದ್ದನಗೌಡ್ರ, ಎಂ.ಆರ್.ಪಾಟೀಲ, ಸಿ.ಎಂ.ಕಾಳೆ, ಅರವಿಂದ ಕಟಗಿ, ಕೇಶವ ಯಾದವ, ಸುರೇಶಗೌಡ ಪಾಟೀಲ, ವೆಂಕನಗೌಡ ಪೋಲೀಸಪಾಟೀಲ, ಬಾಲಕಷ್ಣ ಪವಾರ, ಜಿ.ಡಿ.ಘೋರ್ಪಡೆ, ಮಾರುತಿ ಕಲಘಟಗಿ ಮತ್ತಿತರರು ಭಾಗವಹಿಸುವರೆಂದು ಸಮಾಜದ ಅಧ್ಯಕ್ಷ ವಿಠಲ್ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ