Please enable javascript.ಕೆನರಾ ಬ್ಯಾಂಕ್‌ ಮಿತ್ರ ಯೋಜನೆ - canara bank allied scheme - Vijay Karnataka

ಕೆನರಾ ಬ್ಯಾಂಕ್‌ ಮಿತ್ರ ಯೋಜನೆ

Vijaya Karnataka 14 Apr 2020, 5:00 am
Subscribe

ಹುಬ್ಬಳ್ಳಿ: ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕೆನರಾ ಬ್ಯಾಂಕ್‌ ಮಿತ್ರ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಬ್ಯಾಂಕಿನ ಸೌಲಭ್ಯಗಳು ಗ್ರಾಹಕರ ಮನೆ ಬಾಗಿಲಿನಲ್ಲಿಯೇ ಲಭ್ಯ ಎಂದು ಹುಬ್ಬಳ್ಳಿ ಕ್ಷೇತ್ರೀಯ ಕಚೇರಿ ಎಜಿಎಂ ಸುರೇಶಕುಮಾರ ಎಂ. ತಿಳಿಸಿದ್ದಾರೆ.

canara bank allied scheme
ಕೆನರಾ ಬ್ಯಾಂಕ್‌ ಮಿತ್ರ ಯೋಜನೆ
ಹುಬ್ಬಳ್ಳಿ: ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕೆನರಾ ಬ್ಯಾಂಕ್‌ ಮಿತ್ರ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಬ್ಯಾಂಕಿನ ಸೌಲಭ್ಯಗಳು ಗ್ರಾಹಕರ ಮನೆ ಬಾಗಿಲಿನಲ್ಲಿಯೇ ಲಭ್ಯ ಎಂದು ಹುಬ್ಬಳ್ಳಿ ಕ್ಷೇತ್ರೀಯ ಕಚೇರಿ ಎಜಿಎಂ ಸುರೇಶಕುಮಾರ ಎಂ. ತಿಳಿಸಿದ್ದಾರೆ. ಕ್ಷೇತ್ರೀಯ ಎಲ್ಲಬ್ಯಾಂಕ್‌ ಮಿತ್ರರ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ನಂತರ ಅವರು ಮಾತನಾಡಿದರು.

ಪ್ರಸಕ್ತ ಲಾಕ್‌ಡೌನ್‌ ಸನ್ನಿವೇಶದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿರುವ ಆರ್ಥಿಕ ನೆರವನ್ನುಫಲಾನುಭವಿಗಳಿಗೆ, ಮಹಿಳೆಯರಿಗೆ, ಪಿಂಚಣಿದಾರರಿಗೆ, ರೈತರಿಗೆ ಮತ್ತು ಅಸಂಘಟಿತ ಕಾರ್ಮಿಕ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿಬ್ಯಾಂಕ್‌ ಮಿತ್ರರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಅಣ್ಣಿಗೇರಿ ಶಾಖೆಯ ವಿನಾಯಕ ಭೋಸಲೆ, ದೀಪಕ ಮತ್ತು ಮನೋಜ್‌ ಅವರು ಹಳ್ಳಿಗಳಿಗೆ ಹೋಗಿ ಸೇವೆ ನೀಡುತ್ತಿದ್ದಾರೆ. ಗಜೇಂದ್ರಗಡ ಶಾಖೆಗೆ ಬರುವ ಬೈರಾಪುರ ಮತ್ತು ಬೈರಾಪುರ ತಾಂಡದಂತಹ ಸಣ್ಣಹಳ್ಳಿಗಳಲ್ಲಿಬ್ಯಾಂಕ್‌ ಮಿತ್ರರು ಸೇವೆ ನೀಡುತ್ತಿರುವುದು ಶ್ಲಾಘನೀಯ. ಸೇವೆ ಪಡೆಯಲು ಜನರು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ