ಆ್ಯಪ್ನಗರ

ಧಾರವಾಡದಲ್ಲಿ ಉಜ್ಜಯಿನಿ ಎಕ್ಸ್ ಪ್ರೆಸ್ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಧಾರವಾಡ ಉಜ್ಜಯಿನಿ ಎಕ್ಸ್ ಪ್ರೆಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಈ ಬಸ್ ಸಂಚಾರ ಸೇವೆಯನ್ನು ಮಾ. 8ರಂದು ಲೋಕಾರ್ಪಣೆ ಮಾಡಿದ ನವನಗರ ಕಾಶಿ ಶಾಖಾಮಠದ ಷ.ಬ್ರ. ಶ್ರೀ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಸ್ವಾಮಿಗಳು ಧಾರವಾಡದಿಂದ ಉಜ್ಜಯಿನಿಗೆ ಪ್ರಯಾಣದ ಮೊದಲ ಟ್ರಿಪ್ ದ ಪ್ರಥಮ ಟಿಕೇಟ್ ಖರೀದಿಸುವ ಮೂಲಕ, ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

Reported byಕಲ್ಮೇಶ ಮಂಡ್ಯಾಳ | Edited byಚೇತನ್ ಓ.ಆರ್. | Lipi 8 Mar 2024, 10:59 pm

ಹೈಲೈಟ್ಸ್‌:

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಧಾರವಾಡ ಉಜ್ಜಯಿನಿ ಎಕ್ಸ್ ಪ್ರೆಸ್ ಬಸ್ ಸೇವೆ ಆರಂಭ.
  • ಮಾ. 8ರಂದು ಲೋಕಾರ್ಪಣೆ ಮಾಡಿದ ನವನಗರ ಕಾಶಿ ಶಾಖಾಮಠದ ಷ.ಬ್ರ. ಶ್ರೀ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.
  • ಭಕ್ತರ ಬೇಡಿಕೆಯಂತೆ ಬಸ್ ಸೇವೆ ಆರಂಭ ಎಂದು ಹೇಳಿದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿ ಪಿ.ಆರ್. ಕಿರಣಗಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Dharwad Ujjain Express bus service commenced by Dharwad rural division of North Western Karnataka Road Transport Corporation
ಧಾರವಾಡ: ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ಘಟಕದಿಂದ ನೂತನವಾಗಿ ಆರಂಭಿಸಿರುವ ಧಾರವಾಡ- ಉಜ್ಜಯಿನಿ ಎಕ್ಸ್ ಪ್ರೆಸ್ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಈ ಬಸ್ ಸಂಚಾರ ಸೇವೆಯನ್ನು ಮಾ. 8ರ ಬೆಳಗ್ಗೆ ಲೋಕಾರ್ಪಣೆ ಮಾಡಿದ ನವನಗರ ಕಾಶಿ ಶಾಖಾಮಠದ ಷ.ಬ್ರ. ಶ್ರೀ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, “ಮನುಷ್ಯನ ಜೀವನ ಜಂಜಾಟದಲ್ಲಿಯೂ ಅವನಲ್ಲಿ ವಿಶ್ರಾಂತಿ, ಸದ್ವಿಚಾರ, ಧನಾತ್ಮಕ ಚಿಂತನೆಗಳು ಬೆಳೆದು ಬರಲು ಮಠ,ಮಂದಿರ, ಶ್ರೀ ಪೀಠ ಕ್ಷೇತ್ರಗಳ ದರ್ಶನ ಮಾಡಬೇಕು. ಇದರಿಂದ ಜೀವನ ಪಾವನವಾಗುತ್ತದೆ’’ ಎಂದು ಹೇಳಿದರು.
ಮಹಾಶಿವರಾತ್ರಿಯ ಪವಿತ್ರದಿನದಂದು ಪಂಚಪೀಠದ ಪವಿತ್ರ ಕ್ಷೇತ್ರವಾದ ಶ್ರೀ ಉಜ್ಜಯಿನಿ ಪೀಠಕ್ಕೆ ಧಾರವಾಡದಿಂದ ಸರಕಾರಿ ಬಸ ಸಂಚಾರ ಆರಂಭಿಸಿರುವುದು ಇಡೀ ಉತ್ತರ ಕರ್ನಾಟಕ ಭಾಗದ ಎಲ್ಲ ಭಕ್ತರಿಗೆ ಅನುಕೂಲವಾಗಿದೆ.


ಭಕ್ತರಿಗೆ ಗದಗ ಪಂಚಾಕ್ಷರಿಗಳ ಆಶ್ರಮ, ತೊಂಟದಾರ್ಯ ಮಠ, ಮುಂಡರಗಿ ಅನ್ನದಾನೇಶ್ವರ ಮಠ, ಕೊಟ್ಟೂರು ಬಸವೇಶ್ವರ ದೇವಸ್ಥಾನ ಮತ್ತು ಉಜ್ಜಯಿನಿ‌ ಮರುಳಸಿದ್ದೇಶ್ವರ, ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ, ಆಶಿರ್ವಾದ ಪಡೆಯಲು ಸಾಧ್ಯವಾಗುತ್ತದೆ ಎಂದು ಶಿವಾಚಾರ್ಯರ ಸ್ವಾಮಿಗಳು ತಿಳಿಸಿದರು.

ಆಧ್ಯಾತ್ಮೀಕತೆ ಭಾರತೀಯರ ಜೀವನ, ಸಾಧನೆಯ ಪ್ರಮುಖ ಭಾವಾಗಿದೆ. ಇಲ್ಲಿನ ಪೀಠ, ಮಠಗಳ ಪರಂಪರೆಗಳು ನಾಡಿನ ಶ್ರೀಮಂತಿಕೆಯ ಸಂಕೇತಗಳಾಗಿವೆ. ಭಾರತೀಯರಾಗಿ, ವೀರಶೈವ ಲಿಂಗಾಯತರಾಗಿ ನಾವು ಹೆಮ್ಮೆಪಡಬೇಕು. ಪಂಚಪೀಠಗಳು ನಾಡಿನ ಸಮೃದ್ಧಿ, ಸಂತೋಷ, ಸಹಬಾಳ್ವೆ ಹಾಗೂ ಜನರ ಕಲ್ಯಾಣಕ್ಕಾಗಿ ಸದಾಕಾಲ ಮಹಾಪೂಜೆ, ಧರ್ಮಜಾಗೃತಿ, ಧರ್ಮ ಪುನರುತ್ಥಾನ ಕಾರ್ಯಗಳನ್ನು ಮಾಡುತ್ತಿವೆ. ಪಂಚಪೀಠಗಳ‌ ಜಗದ್ಗುರುಗಳು ನಿರಂತರವಾಗಿ ನಾಡಿನ ಹಳ್ಳಿ, ಪಟ್ಟಣಗಳಿಗೆ ಮತ್ತು ಹೊರರಾಜ್ಯಗಳಲ್ಲಿ ಸಂಚರಿಸಿ, ಧರ್ಮಜಾಗೃತಿ ಸಭೆಗಳ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿ, ಸಂಸ್ಕಾರ ಬೆಳೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಧಾರವಾಡದಲ್ಲಿ ಬಹುತೇಕ ಉನ್ನತ ಹುದ್ದೆಗಳಲ್ಲಿ ಮಹಿಳೆಯರದೇ ದರ್ಬಾರ್!
ಉಜ್ಜಯಿನಿ ಶ್ರೀ ಕ್ಷೇತ್ರ ಮಹಾತಪಸ್ವಿಗಳ, ಸಾಧಕರ ಜಾಗೃತಸ್ಥಾನ. ಅಲ್ಲಿಗೆ ಪ್ರವಾಸ ಮಾಡುವದರಿಂದ ಪುಣ್ಯ ಫಲಿಸುತ್ತದೆ ಎಂದು ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರು ಮಾತನಾಡಿ, ಧಾರವಾಡದಿಂದ ಉಜ್ಜಯಿನಿಗೆ ಬಸ್ ಸೇವೆ ಆರಂಭಿಸಿದ್ದು ಸಂತೋಷವಾಗಿದೆ. ಧಾರವಾಡ ಉಜ್ಜಯಿನಿ ಸಂಚಾರ ಮಾರ್ಗವು ಧಾರ್ಮಿಕ ಪ್ರವಾಸೋದ್ಯಮ ರೂಟ್ ಆಗಿದೆ. ಇದರಿಂದ ಭಕ್ತರಿಗೆ ಅನಕೂಲವಾಗಲಿದೆ. ಮತ್ತು ಸಾರಿಗೆ ಸಂಸ್ಥೆಗೂ ಉತ್ತಮ ಆದಾಯ ಬರುತ್ತದೆ. ಈ ಬಸ್ ಸಙಚಾರ ಸೇವೆಯನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸದಂತೆ ಅಧಿಕಾರಿಗಳಿಗೆ ವಿನಂತಿಸಿದರು.

ಮಹಾಶಿವರಾತ್ರಿಯಂದು ಅಯೋಧ್ಯೆ ಮಾದರಿ ಶ್ರೀ ರಾಮೇಶ್ವರನ ದರ್ಶನಕ್ಕೆ ಹುಬ್ಬಳ್ಳಿ ಸಜ್ಜು

ಭಕ್ತರ ಬೇಡಿಕೆಯಂತೆ ಬಸ್ ಸೇವೆ ಆರಂಭ

ಧಾರವಾಡ ಗ್ರಾಮೀಣ ಬಸ್ ಡಿಪೋ ವ್ಯವಸ್ಥಾಪಕ ಪಿ.ಆರ್. ಕಿರಣಗಿ ಅವರು ಮಾತನಾಡಿ, ಈ ಪವಿತ್ರ ದಿನದಂದು ಹೊಸ ಮಾರ್ಗ ಅನುಸೂಚಿ ಆರಂಭಿಸಿರುವುದು ಸಂತಸ ತಂದಿದೆ. ಭಕ್ತರ ಬಹುದಿನಗಳ ಬೇಡಿಕೆಯಂತೆ ಉಜ್ಜಯಿನಿ ಪಂಚಪೀಠಕ್ಕೆ ಬಸ ಸಂಚಾರ ಶುರು ಆಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಿದೆ ಎಂದು ಅವರು ಹೇಳಿದರು.

ವೀರಶೈವ ಜಂಗಮ ಸಂಸ್ಥೆಯ ಡಾ.ಎಸ್.ಜಿ.ಮಠದ, ಡಾ.ಸುರೇಶ ಹಿರೇಮಠ, ಪ್ರಭು ಕೆಂಡದಮಠ, ಗಂಗಯ್ಯ ಪ್ರಭುಸ್ವಾಮಿಮಠ, ಸುಮಿತಾ ಹಿರೇಮಠ, ನಾಗಯ್ಯ ಮುಖಶಿವಯ್ಯನವರ, ಶಂಕರಗೌಡ ಪಾಟೀಲ, ಶಾಂತವ್ವ ಪಾಟೀಲ, ವೀಣಾ ಕೆಂಡದಮಠ, ಹೊಸ ಬಸ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕ ದೇವರಾಜ ಭಜಂತ್ರಿ, ಉಜ್ಜಯಿನಿ ಬಸ್ ಚಾಲಕ ಮಹೇಶ ಹೆಗಡೆ, ಮಂಜುನಾಥ ಜಕ್ಕಪ್ಪನವರ, ದೇವಪ್ಪ ಮರಿಸಿದ್ದನವರ, ಈಶ್ವರ ಇಂಗಳಗಿ, ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಹೊಸ ಬಸ ನಿಲ್ದಾಣದ ಎಲ್ಲ ಸಂಚಾರ ನಿಯಂತ್ರಕರು, ಸಾರ್ವಜನಿಕರು, ಸಾರಿಗೆ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಬಿಜೆಪಿ ಕುಬೇರರ ಪಕ್ಷ, ನಮ್ಮಲ್ಲಿ ಟಿಕೆಟ್ ಗೆ ಹಣ ತಗೊಳ್ಳೊಲ್ಲ: ಆರ್ ಅಶೋಕ ಟೀಕೆಗೆ ಲಾಡ್ ತಿರುಗೇಟು
ಕಾರ್ಯಕ್ರಮದ ನಂತರ ಕಾಶಿ ಶಾಖಾಮಠದ ಷ.ಬ್ರ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಧಾರವಾಡದಿಂದ ಉಜ್ಜಯಿನಿಗೆ ಪ್ರಯಾಣದ ಮೊದಲ ಟ್ರಿಪ್ ದ ಪ್ರಥಮ ಟಿಕೇಟ್ ಖರೀದಿಸಿ, ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಲೇಖಕರ ಬಗ್ಗೆ
ಕಲ್ಮೇಶ ಮಂಡ್ಯಾಳ
ಕಲ್ಮೇಶ ಮಂಡ್ಯಾಳ ಅವರು ಎಂ.ಎ. ರಾಜ್ಯಶಾಸ್ತ್ರ ಹಾಗೂ ಎಂ.ಎ ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಸ್ನಾತಕೋತ್ತರ ಪದವಿ ಪಡೆದಿದ್ದು‌, ಕಳೆದ ಹಲವಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬೆಂಗಳೂರು, ದೆಹಲಿ ಹಾಗೂ ಚೆನೈ ನಗರದಲ್ಲಿ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ವರದಿಗಾರ, ಹಿರಿಯ ಉಪಸಂಪಾದಕ ಹಾಗೂ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಮುದ್ರಣ, ವಿದ್ಯುನ್ಮಾನ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಮಾನಾಂತರ ಅನುಭವ ಹೊಂದಿದ್ದಾರೆ. ಹುಬ್ಬಳ್ಳಿ ನಿವಾಸಿಯಾಗಿರುವ ಕಲ್ಮೇಶ ಅವರು ಮಾಧ್ಯಮ ಕ್ಷೇತ್ರದಲ್ಲಿ ಏನನ್ನಾದರೂ ಸಾಧನೆ ಮಾಡಬೇಕಂಬ ಹಂಬಲ,ಆಸೆ ಹೊಂದಿದ್ದಾರೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ