ಆ್ಯಪ್ನಗರ

ಉತ್ತರ ಕರ್ನಾಟಕ ಗುತ್ತಿಗೆದಾರರಿಗೆ ತಾರತಮ್ಯ

ಧಾರವಾಡ: ರಾಜ್ಯದ ಎಲ್ಲವಿಚಾರದಲ್ಲೂಉತ್ತರ ಕರ್ನಾಟಕಕ್ಕೆ ಅನ್ಯಾಯದ ಕೂಗು ಆಗಾಗ ಕೇಳುತ್ತಿದ್ದವು, ಸದ್ಯ ಗುತ್ತಿಗೆದಾರರ ಸಂಘಕ್ಕೆ ತೋರಿದ ಮಲತಾಯಿ ಧೋರಣೆಯಿಂದ ನಿಜ ಎನಿಸಿದೆ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ಆಗುವುದೇ ಲೇಸು ಎಂದು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಅಸಮಧಾನ ವ್ಯಕ್ತಪಡಿಸಿದರು.

Vijaya Karnataka 26 Dec 2019, 5:00 am
ಧಾರವಾಡ: ರಾಜ್ಯದ ಎಲ್ಲವಿಚಾರದಲ್ಲೂಉತ್ತರ ಕರ್ನಾಟಕಕ್ಕೆ ಅನ್ಯಾಯದ ಕೂಗು ಆಗಾಗ ಕೇಳುತ್ತಿದ್ದವು, ಸದ್ಯ ಗುತ್ತಿಗೆದಾರರ ಸಂಘಕ್ಕೆ ತೋರಿದ ಮಲತಾಯಿ ಧೋರಣೆಯಿಂದ ನಿಜ ಎನಿಸಿದೆ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ಆಗುವುದೇ ಲೇಸು ಎಂದು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಅಸಮಧಾನ ವ್ಯಕ್ತಪಡಿಸಿದರು.
Vijaya Karnataka Web discrimination for northern karnataka contractors
ಉತ್ತರ ಕರ್ನಾಟಕ ಗುತ್ತಿಗೆದಾರರಿಗೆ ತಾರತಮ್ಯ


ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸರಕಾರ ದಕ್ಷಿಣ ಭಾಗದ ಗುತ್ತೆಗೆದಾರರಿಗೆ ನೀಡುವ ಆದ್ಯತೆ ಉತ್ತರ ಕರ್ನಾಟಕದ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ದಕ್ಷಿಣದ ಗುತ್ತಿಗೆದಾರರಿಗೆ ಹೆಚ್ಚಿನ ಅನುದಾನ ನೀಡಿ, ಉತ್ತರಕ್ಕೆ ಕಡಿಮೆ ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಮಟ್ಟದಲ್ಲಿಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಕಮೀಟಿ ರಚಿಸಲಾಗಿದೆ. ಇದರಲ್ಲಿದಕ್ಷಿಣ ಭಾಗದ ಮುಖ್ಯ ಎಂಜನಿಯರ್‌ಗಳು ಮಾತ್ರ ಸದಸ್ಯರಿದ್ದು, ಉತ್ತರ ಕರ್ನಾಟಕದ ಎಂಜಿನಿಯರ್‌ಗಳನ್ನು ಕಮೀಟಿಯಲ್ಲಿಸೇರ್ಪಡಿಸಿಕೊಂಡಿಲ್ಲ. ರಾಜ್ಯ ಗುತ್ತಿಗೆದಾರರ ಸಂಘವು ಈ ಭಾಗದ ಗುತ್ತಿಗೆದಾರರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘ ಪ್ರತ್ಯೇಕವಾಗ ರಚಿಸಲಾಗಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ, ಬಸವರಾಜ ಪರಾಂಡೆ, ಅನ್ವರ ಲಂಗೋಟಿ ಸೇರಿದಂತೆ ಇತರರು ಇದ್ದರು.

27ರಂದು ಕ್ಯಾಲೆಂಡರ್‌ ಬಿಡುಗಡೆ:
ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದಿಂದ ಡಿ. 27ರಂದು ಬೆಳಿಗ್ಗೆ 11ಕ್ಕೆ ನಗರದ ಡಿಸಿ ಕಂಪೌಂಡ್‌ ಆವರಣದ ಲೋಕೋಪಯೋಗಿ ಸಭಾಭವನದಲ್ಲಿ2020ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ(ಉತ್ತರ) ಕೆ.ರಾಜೇಶ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಮುಖ್ಯ ಅಭಿಯಂತರ ಎಂ.ನಾರಾಯಣ ಅತಿಥಿಗಳಾಗಿ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸುವರು.

ವಿವಿಧ ಇಲಾಖೆಗಳ ಅಭಿಯಂತರಾದ ಎಂ.ಬಿ.ಜಗತೇರಿ, ಕೃಷ್ಣಾಜಿ ಚವ್ಹಾಣ, ಎ.ವಿ.ನವಲಿ, ಶಿವಾನಂದ ನಾಯ್ಕ, ವಸಂತ ನಾಯ್ಕ, ರಾಜೇಶ ಅಮ್ಮಿನಭಾವಿ, ಬಸವಲಿಂಗಪ್ಪ ಬೀಡಿ ಭಾಗವಹಿಸಲಿದ್ದಾರೆ. ಈ ವೇಳೆ ಹಾಫ್‌ ಐರನ್‌ ಮ್ಯಾನ್‌ ಪ್ರಶಸ್ತಿ ವಿಜೇತ ಇನ್ಸಪೆಕ್ಟರ್‌ ಮುರಗೇಶ ಚನ್ನಣ್ಣವರ ಅವರನ್ನು ಸನ್ಮಾನಿಸಲಾಗುವುದು ಎಂದು ಸುಭಾಷ ಪಾಟೀಲ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ