ಆ್ಯಪ್ನಗರ

ಧಾರವಾಡ: ಮನವಿ ಸ್ವೀಕರಿಸಿದ ಎಚ್‌ಡಿ ಕುಮಾರಸ್ವಾಮಿ ವಿರುದ್ಧವೇ ಪ್ರತಿಭಟನೆ

ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳೂ ಕೂಡ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಿದ್ದರು.

Vijaya Karnataka Web 4 Jun 2022, 8:36 pm
ಧಾರವಾಡ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ಮುಂದಾದ ಹೈಡ್ರಾಮಾ ಧಾರವಾಡದ ಕವಿವಿ ಆವರಣದಲ್ಲಿ ಶನಿವಾರ ನಡೆಯಿತು.
Vijaya Karnataka Web ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ


ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಈ ಮಧ್ಯೆ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳೂ ಕೂಡ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಿದ್ದರು. ಮೊದಲು ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಹಗರಣದಿಂದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದ್ದು, ನ್ಯಾಯ ಸಿಗುವಂತೆ ಮಾಡಬೇಕು. ಅಕ್ರಮ ಆಗದಂತೆ ಸೂಕ್ತ ರೀತಿಯಲ್ಲಿ ಮರು ಪರೀಕ್ಷೆ ಕೈಗೊಳ್ಳಬೇಕು ಎಂದು ಪಿಎಸ್‌ಐ ವಂಚಿತ ಅಭ್ಯರ್ಥಿಗಳು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅನ್ಯಾಯ ಆಗಿರುವುದು 56 ಸಾವಿರ ಅಭ್ಯರ್ಥಿಗಳಿಗಲ್ಲ. ಪರೀಕ್ಷೆ ಬರೆದು ಪಾಸಾದ 545 ಅಭ್ಯರ್ಥಿಗಳಿಗೆ ಎಂದು ಹೇಳಿಕೆ ಕೊಟ್ಟರು.

ಸಿಎಂ ಇಬ್ರಾಹಿಂಗೆ ಚಡ್ಡಿ ಹಾಕಿದ್ದೇ ಸಿದ್ದರಾಮಯ್ಯ: ಎಂಎಲ್‌ಸಿ ಅಬ್ದುಲ್‌ ಜಬ್ಬಾರ್‌ ಲೇವಡಿ

ಈ ಹೇಳಿಕೆಯಿಂದ ಕೆರಳಿದ ಪಿಎಸ್‌ಐ ಅಭ್ಯರ್ಥಿಗಳು, ಕುಮಾರಸ್ವಾಮಿ ವಿರುದ್ದವೇ ಪ್ರತಿಭಟನೆ ಕೈಗೊಂಡರು. ಈ ವೇಳೆ ಅವರೊಂದಿಗೆ ಮಾತಿನ ಚಕಮಕಿಯೂ ಸಂಭವಿಸಿತು. ಇದಲ್ಲದೇ ಕವಿವಿಯಿಂದ ಹೊರಡುವಾಗ ಅವರ ಕಾರಿನತ್ತ ನುಗ್ಗಿ, ಅವರ ವಿರುದ್ದ ಘೋಷಣೆ ಕೂಗಿದರು. ಇದಲ್ಲದೇ ಮೋದಿ, ಮೋದಿ ಕೂಗಲಾರಂಭಿಸಿದರು. ಈ ಮಧ್ಯೆ ಮಾಜಿ ಸಿಎಂ ಕಾರಿನತ್ತ ನುಗ್ಗಿ ಬಂದ ಯುವಕರಿಗೆ ಪೊಲೀಸರು ಗೂಸಾ ಕೊಟ್ಟ ಘಟನೆಯೂ ನಡೆದವು.

ಪಿಎಸ್‌ಐ ನೇಮಕಾತಿ ರದ್ದು, ಮರು ಪರೀಕ್ಷೆಯ ಬಗ್ಗೆ ಪರ-ವಿರೋಧಗಳಿವೆ. ಈ ಬಗ್ಗೆ ಎರಡು ಬಣದವರ ವಾದ ಆಲಿಸಿದ್ದು, ಈ ಬಗ್ಗೆ ವಿಧಾನಸಭೆ ಕಲಾಪ ಆರಂಭವಾದರೆ ಚರ್ಚೆ ಮಾಡಬಹುದು. ಈ ಬಗ್ಗೆ ಎರಡೂ ಬಣದವರಿಂದ ಮಾಹಿತಿ ಪಡೆದು ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆಯುತ್ತೇನೆ. ಆದರೆ ಇಲ್ಲಿ ಒಂದು ಗುಂಪು ನಡೆದುಕೊಂಡ ರೀತಿ ತುಂಬ ನೋವು ತಂದಿದೆ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ನನ್ನ ಮುಂದೆ ರೌಡಿಸಂ ನಡೆಯೊದಿಲ್ಲ: ಎಚ್‌ಡಿಕೆ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನನಗೆ ಮನವಿ ಕೊಡಲು ಬಂದವರು ಕಾರಿನತ್ತ ನುಗ್ಗಿ ಬಂದಿದ್ದಾರೆ. ಇವರೆಲ್ಲಾ ಮನವಿ ಕೊಡಲಷ್ಟೇ ಬಂದವರಲ್ಲ. ಬೇಕಂತಲೇ ಗಲಾಟೆ ಮಾಡಲು ಬಂದವರು. ಇವರು ಮನವಿ ಕೊಡಲು ಬಂದವರೋ? ರೌಡಿಜಂ ಮಾಡಲು ಬಂದಿದ್ದರಾ? ಎಂದು ಪ್ರಶ್ನಿಸಿದರು.

ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ವರ್ತಿಸುವಂತೆ ಇವರಿಗೆ ಹೇಳಿ ಕಳುಹಿಸಿದ್ದಾರೆ. ಬಿಜೆಪಿ ನಾಯಕರಿಗೆ ನಾನು ಒಂದು ಮಾತು ಹೇಳುತ್ತೇನೆ. ಇಂತಹ ಆಟಗಳು ನನ್ನ ಮುಂದೆ ನಡೆಯುವುದಿಲ್ಲ. 54ಸಾವಿರ ಜನ ಮಾನಸಿಕವಾಗಿ ನೋಂದಿದ್ದೇವೆ ಎಂದು ಹೇಳುತ್ತಿದ್ದ ಒಬ್ಬ ವ್ಯಕ್ತಿ ಯಾವ ರೀತಿ ವರ್ತಿಸಿದ ನೋಡಿ. ಮನವಿ ಕೊಡಲು ಬಂದವರು ಹೇಗಿರಬೇಕು ಎಂಬುದೂ ಇವರಿಗೆ ಗೊತ್ತಿಲ್ಲ. ನಾನು ಇಬ್ಬರ ಮನವಿಯನ್ನೂ ಆಲಿಸಿ ಕುಲಪತಿಗಳ ಚೇಂಬರಿಗೆ ಹೋಗಿದ್ದೇನೆ. ಅದಾದ ಬಳಿಕ ಗುಂಪು ನಿಂತುಕೊAಡು ಗಲಭೆಕೋರರಂತೆ ಬಂದರಲ್ಲ ಯಾರವರು ಎಂದು ಎಚ್‌ಡಿಕೆ ಪ್ರಶ್ನಿಸಿದರು.

ಮೋದಿ ಮೋದಿ ಎಂದು ಕೂಗುವವರು ಮೋದಿ ಬಳಿ ನ್ಯಾಯ ಕೇಳಲಿ: ಎಚ್‌ಡಿ ಕುಮಾರಸ್ವಾಮಿ ಕಿಡಿ

ಪೊಲೀಸರು ನನಗೆ ಸರಿಯಾಗಿ ಭದ್ರತೆ ಕೊಟ್ಟಿಲ್ಲ. ಗೃಹ ಸಚಿವರಿಗೆ ಸರಿಯಾಗಿ ಭದ್ರತೆ ಕೊಡಲು ಹೇಳಿ. ನನಗೆ ಮೋದಿ ಮೋದಿ ಅಂತ ಘೋಷಣೆ ಹಾಕುವ ಇವರೆಲ್ಲಾ, ಆ ಮೋದಿ ಹತ್ತಿರವೇ ಹೋಗಿ ನ್ಯಾಯ ಕೇಳಲಿ. ಸರಕಾರ ನನ್ನದಿದೆಯಾ? ಎಂದು ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ