Please enable javascript.ಧಾರವಾಡ ತಾಲೂಕಿನಲ್ಲಿ ಮಳೆಗಾಳಿ ಅವಾಂತರ - Rainfall in Dharwad Taluk - Vijay Karnataka

ಧಾರವಾಡ ತಾಲೂಕಿನಲ್ಲಿ ಮಳೆಗಾಳಿ ಅವಾಂತರ

ವಿಕ ಸುದ್ದಿಲೋಕ 25 May 2017, 4:00 am
Subscribe

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿ ಹೋಗಿದ್ದು, ಅನೇಕರ ಬಾಳು ಈಗ ಬೀದಿ ಬರುವಂತಾಗಿದೆ.

rainfall in dharwad taluk
ಧಾರವಾಡ ತಾಲೂಕಿನಲ್ಲಿ ಮಳೆಗಾಳಿ ಅವಾಂತರ

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿ ಹೋಗಿದ್ದು, ಅನೇಕರ ಬಾಳು ಈಗ ಬೀದಿ ಬರುವಂತಾಗಿದೆ.

ಧಾರವಾಡ ತಾಲೂಕಿನ ಮನಗುಂಡಿ, ಬೆಳ್ಳಿಗಟ್ಟಿ, ಮನಸೂರು ಗ್ರಾಮ ಸೇರಿದಂತೆ ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿಯ ರಭಸಕ್ಕೆ ಅನೇಕ ಮನೆಗಳ ಹೆಂಚು , ಛಾವಣಿಗಳು ಹಾರಿ ಹೋಗಿದ್ದರೆ, ಇನ್ನು ಕೆಲ ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ವರದಿಯಾಗಿದೆ.

ಗಾಳಿ ಮಾಡಿದ ಅವಾಂತರದಿಂದಾಗಿ ಮನಗುಂಡಿ ಗ್ರಾಮದ ಗ್ರಾಮ ಪಂಚಾಯಿತಿ ಹಾಗೂ ಸರಕಾರಿ ಶಾಲೆ ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಗ್ರಾಮಕ್ಕೆ ಹತ್ತಿರವಿರುವ ಕೋಳಿ ಫಾರ್ಮ್‌ಗಳು, ದನದ ಕೊಟ್ಟಿಗೆ ಶೆಡ್‌ಗಳು ಸಹ ಸಂಪೂರ್ಣ ನೆಲಕಚ್ಚಿವೆ.

46ಕ್ಕೂ ಅಧಿಕ ಮನೆಗಳು ಹಾನಿ: ಗಾಳಿ ಹಾಗೂ ಮಳೆಯ ತೀವ್ರತೆಗೆ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸುಮಾರು 46ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಅದೇ ಗ್ರಾಮದ ಹೊರವಲಯದಲ್ಲಿರುವ ಶಿವಾನಂದ ಹಾಲಗಟ್ಟಿ ಹಾಗೂ ಬಸಪ್ಪ ಅಂಗಡಿ ಎಂಬುವವರ ದನದ ಮನೆಗಳು ಬಿದ್ದು ಹೋಗಿದ್ದು, ಬಸಪ್ಪ ಅಂಗಡಿ ಎಂಬುವರಿಗೆ ಸೇರಿದ ಆಕಳು ಕರು ಮೃತಪಟ್ಟಿದೆ. ಉಳಿದಂತೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಪರಿಹಾರಕ್ಕೆ ಆಗ್ರಹ: ಮಂಗಳವಾರ ಸಂಜೆಯಿಂದ ಆರಂಭವಾದ ವಿಪರೀತ ಮಳೆ-ಗಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಏಕಾಏಕಿ ಬೀಸಿದ ಗಾಳಿಯಿಂದ ಎದುರು ಮನೆಯವರ ಔಆವಣಿ ಹಾರಿ ಬಂದು ನಮ್ಮ ಮನೆ ಮೇಲೆ ಬಿದ್ದಿದೆ. ಮನೆಯ ಹಂಚುಗಳು ಒಡೆದುಹೋಗಿದ್ದು, ಮನೆಯ ಸದಸ್ಯರಿಗೆ ಗಾಯಗಳಾಗಿವೆ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಸೂಕ್ತ ಪರಿಹಾರ ನೀಡುವ ಜತೆಗೆ ಮನೆಗಳ ದುರಸ್ಥಿಗೆ ಸಹಾಯ ಮಾಡಬೇಕು ಎಂದು ಮನಗುಂಡಿಯ ನಿವಾಸಿ ಸಾವಕ್ಕ ಸೇರಿದಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದರು. ಅದೇ ರೀತಿ ಬೆಳ್ಳಿಗಟ್ಟಿ ಗ್ರಾಮದಲ್ಲಿಯೂ ಮಳೆಗಾಳಿಗೆ ಮನೆ ಹೆಂಚುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ.

ಮನೇ ಮೇಲೆ ಉರುಳಿದ ಮರ: ಮಂಗಳವಾರ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಶ್ರೀರಾಮ ನಗರ ನಿವಾಸಿ ಯಲ್ಲಮ್ಮಾ ಭಜಂತ್ರಿ ಅವರ ಮನೆ ಮೇಲೆ ಮರವೊಂದು ಉರುಳಿ ಬಿದ್ದಿದೆ. ಗೃಹ ಉಪಯೋಗಿ ವಸ್ತುಗಳ ಸೇರಿದಂತೆ ಸುಮಾರು 80 ಸಾವಿರ ರು ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಬೀಳುವ ಸ್ಥಿತಿಯಲ್ಲಿದ್ದ ಮರವನ್ನು ಕತ್ತರಿಸುವಂತೆ ಪಾಲಿಕೆಗೆ ಹಾಗೂ ಅರಣ್ಯ ಇಲಾಖೆಗೆ ಒಂದು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು, ಯಾವುದೇ ಕ್ರಮ ಕೈಗೊಳ್ಳದೆ ಇದ್ದರಿಂದ ಈ ಅವಘಡ ಸಂಭವಿಸಿದೆ. ಕೂಡಲೇ ಪರಿಹಾರ ಒದಗಿಸಬೇಕು ಎಂದು ಯಲ್ಲಮ್ಮ ಭಜಂತ್ರಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ