ಆ್ಯಪ್ನಗರ

ಸಿದ್ಧಗಂಗಾ ಶ್ರೀಗಳ ಕಾರ್ಯ ಸಾರ್ವಕಾಲಿಕ ಪ್ರೇರಣೆ

ಧಾರವಾಡ : ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಶ್ರೀಗಳು ಕೈಗೊಂಡ ಕಾರ್ಯಗಳು ಸಾರ್ವಕಾಲಿಕ ಪ್ರೇರಣೆಗಳಾಗಿವೆ ಎಂದು ಮುರುಘಾಮಠದ ಪೀಠಾಧಿಪತಿ ಮಲ್ಲಿಕಾಜುನ ಶ್ರೀ ಅಭಿಪ್ರಾಯಪಟ್ಟರು.

Vijaya Karnataka 5 Feb 2019, 5:00 am
ಧಾರವಾಡ : ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಶ್ರೀಗಳು ಕೈಗೊಂಡ ಕಾರ್ಯಗಳು ಸಾರ್ವಕಾಲಿಕ ಪ್ರೇರಣೆಗಳಾಗಿವೆ ಎಂದು ಮುರುಘಾಮಠದ ಪೀಠಾಧಿಪತಿ ಮಲ್ಲಿಕಾಜುನ ಶ್ರೀ ಅಭಿಪ್ರಾಯಪಟ್ಟರು.
Vijaya Karnataka Web siddaganga sris work is all time inspiration
ಸಿದ್ಧಗಂಗಾ ಶ್ರೀಗಳ ಕಾರ್ಯ ಸಾರ್ವಕಾಲಿಕ ಪ್ರೇರಣೆ


ಇಲ್ಲಿನ ಕೆಲಗೇರಿ ರಸ್ತೆಯಲ್ಲಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಕುಸಮ ನಗರದ ನಿವಾಸಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಾಧ್ಯಾಪಕ ಡಾ.ಶಂಭುಲಿಂಗಪ್ಪ ಹೆಗಡಾಳ ಮಾತನಾಡಿ, ಶಿವಕುಮಾರ ಶ್ರೀಗಳು ಭಕ್ತಿ, ಜ್ಞಾನ, ವೈರಾಗ್ಯದ ತ್ರಿವೇಣಿ ಸಂಗಮವಾಗಿದ್ದರು. ಸಾವಿರಕ್ಕೊಬ್ಬ ಸತ್ಯವಂತ, ಲಕ್ಷ ಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಸಾಮಾನ್ಯರಾಗಿ ಜನಿಸಿದ ಶ್ರೀಗಳು, ತಮ್ಮ ಶರಣ ಬದುಕಿನ ಮೂಲಕ ಚಿರಸ್ಥಾಯಿಯಾದರು. ಶಿವಕುಮಾರ ಸ್ವಾಮೀಜಿಯಂಥ ಮಹಾತ್ಮರನ್ನು ನೆನೆಯಲು ಮತ್ತು ಅನುಕರಿಸಲು ಪ್ರಯತ್ನಿಸಬೇಕು. ಆ ಮೂಲಕ ನಮ್ಮ ಬದುಕು ಹಸನು ಮಾಡಿಕೊಳ್ಳಬೇಕು ಎಂದರು.

ಡಾ.ಪಿ.ಎಸ್‌.ಹಳಿಯಾಳ ಉಪನ್ಯಾಸ ನೀಡಿದರು. ಚಂದ್ರಶೇಖರ ವೈದ್ಯಮಠ, ಡಾ.ಮಠ, ಪೂರ್ಣಾ ಪಾಟೀಲ, ಪ್ರೊ.ಬಿ.ಬಿ.ಮಾಶಾಳ, ವಿಜಯಾನಂದ ಶೆಟ್ಟಿ, ಪ್ರೊ.ವಿ.ಎಂ.ದೊಡಮನಿ, ಗಿರೀಶ ಮಂಗೋಣಿ, ಮಹಾಂತೇಶ ಸಾಲೋಟಗಿ, ದೇವರಾಜ ನಾಡಿಗ, ಮಲ್ಲಿಕಾರ್ಜುನ ಮುರಡಿ, ಬಸವರಾಜ ವೈದ್ಯಮಠ, ಕುಸಮ ನಗರ ಹಾಗೂ ಸುತ್ತಲಿನ ಬಡಾವಣೆಗಳ ನಿವಾಸಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ