Please enable javascript.ಉತ್ಸಾಹದ ಕಾರ್ಯ ಬದುಕಿನ ದಿವ್ಯತೆ - the divinity of a life of passion - Vijay Karnataka

ಉತ್ಸಾಹದ ಕಾರ್ಯ ಬದುಕಿನ ದಿವ್ಯತೆ

Vijaya Karnataka 9 Mar 2020, 5:00 am
Subscribe

ಬದುಕು ನಿಸರ್ಗ ಕೊಟ್ಟ ಅಮೂಲ್ಯ ಸಂಪತ್ತು, ಅದ್ಭುತ ಕಾಣಿಕೆ. ವಸ್ತುಗಳಿಗೆ ಬೆಲೆ ಕಟ್ಟಬಹುದು. ಆದರೆ ಬದುಕಿಗೆ ಬೆಲೆ ಕಟ್ಟೋದು ಆಗೋದಿಲ್ಲ. ಸಾಮಾನ್ಯ ಕ್ರಿಮಿ ಇರುವೆ ಚಲನೆ ಎಂಥದು. ಅದಕ್ಕೆ ಜೀವನ ತುಂಬಾ ಏನ್‌ ಉತ್ಸಾಹ. ಅದನ್ನೊಮ್ಮೆ ಕೇಳಿರಿ. ಏನು ನಿನ್ನ ಬದುಕು ಎಂದು. ಅದು ಹೇಳುತ್ತೆ: ಬದುಕೇ ಮಹತ್ವದ್ದು.

siddeshwar shri-new1
ದುಕು ನಿಸರ್ಗ ಕೊಟ್ಟ ಅಮೂಲ್ಯ ಸಂಪತ್ತು, ಅದ್ಭುತ ಕಾಣಿಕೆ. ವಸ್ತುಗಳಿಗೆ ಬೆಲೆ ಕಟ್ಟಬಹುದು. ಆದರೆ ಬದುಕಿಗೆ ಬೆಲೆ ಕಟ್ಟೋದು ಆಗೋದಿಲ್ಲ. ಸಾಮಾನ್ಯ ಕ್ರಿಮಿ ಇರುವೆ ಚಲನೆ ಎಂಥದು. ಅದಕ್ಕೆ ಜೀವನ ತುಂಬಾ ಏನ್‌ ಉತ್ಸಾಹ. ಅದನ್ನೊಮ್ಮೆ ಕೇಳಿರಿ. ಏನು ನಿನ್ನ ಬದುಕು ಎಂದು. ಅದು ಹೇಳುತ್ತೆ: ಬದುಕೇ ಮಹತ್ವದ್ದು. ಮನುಷ್ಯನೇ, ನೀನು ವಸ್ತುಗಳಿಗೆ ಮಹತ್ವ ಕೊಟ್ಟಿಯಲ್ಲಅದಕ್ಕೆ ನೀನು ದುಃಖಿ. ನಾವು ಬದುಕಿಗೆ ಮಹತ್ವ ಕೊಟ್ಟೋರು. ಅದಕ್ಕೆ ನಾವು ಸುಖಿ.

ನಾವೆಲ್ಲಾ ಎಂಥೆಂಥ ಮನೆಗಳಲ್ಲಿಇರತೇವಿ. ಎಷ್ಟೆಲ್ಲಾ ಆಭರಣ ಹಾಕಿಕೊಂಡಿರುತ್ತೇವೆ. ಆದರೆ ಮುಖದಲ್ಲಿಸಂತೋಷ ಇರೋದಿಲ್ಲ. ಪತಂಜಲರು ಹೇಳತಾರ: ಹೇಗೆ ಬದುಕಬೇಕು ಎಂದರೆ ದೀರ್ಘ ಕಾಲದವರೆಗೆ ನಿರಂತರ ಉತ್ಸಾಹದಿಂದ ಬದುಕಲು ಪ್ರಯತ್ನಿಸಬೇಕು. ಆಗ ನೀನು ಏನು ಪಡೆಯಬೇಕೆಂದು ಬಯಸಿದ್ದಿಯೋ ಅದು ಸಾಕಾರವಾಗುತ್ತದೆ. ಉತ್ಸಾಹ ಇಲ್ಲದಿದ್ದರೆ ಜೀವನ ಮರೆಯಾಗುತ್ತದೆ.

ಇರುವೆಗಳು ಓಡತಾವ, ಓಡತಾವ... ಬದುಕಿನಾದ್ಯಂತ ಓಡತಾವ. ಹೀಗೆ ಇರುವೆಯೊಂದು ಓಡುತ್ತಿತ್ತು. ಒಬ್ಬ ನಾಡನೆಲೆಗಾರ (ಬುದ್ಧಿವಂತ ಸಂತ) ನೋಡಿದ. ಇರುವೆಗೆ ಕೇಳಿದ: ಏನೋ ಬಹಳ ಜೋರಾಗಿ ಹೊರಟಿದ್ದಿಯಲ್ಲ, ಎಲ್ಲಿಗೆ? ಎಂದ. ಆಗ ಇರುವೆ ಹೇಳಿತು: ನೋಡಿಲ್ಲಿ. ಅಲ್ಲಿಕಾಣಿಸುವ ಹಿಮಾಲಯ ಪರ್ವತ ಏರಲು ಹೊರಟಿದ್ದೇನೆ ಎಂದಿತು. ನಾಡನೆಲೆಗಾರ ಕೇಳಿದ: ಹೆಂಗ್‌ ಸಾಧ್ಯ ಅದ ನಿನಗ. ನಮ್ಮಂತವರಿಗೇ ಇಂಥ ಕನಸು ಬಿದ್ದಿಲ್ಲ. ನಿನಗ್ಯಾಕೆ ಇದು ಎಂದ. ಆಗ ಇರುವೆ ಹೇಳಿತು: ನಡೆಯುತ್ತ, ನಡೆಯುತ್ತ, ಓಡುತ್ತ, ಓಡುತ್ತ ಹೋದರೆ ಈ ಪರ್ವತ ಅಲ್ಲ, ಸ್ವರ್ಗಕ್ಕೂ ಹೋಗತೀನಿ ಅಂದಿತು.

ಸಹಸ್ರ ಗಾವುದ ಇರಲಿ. ನಡೀತಾ, ಓಡತಾ ಇದ್ದರೆ ಸಾಧನೆ ಮಾಡಿಯೇ ಮಾಡುತ್ತೇವೆ. ಮಲಗಿದ್ದಲ್ಲೇ ಮಲಗಿದರೆ ಸಾಧನೆ ಹೇಗೆ ಸಾಧ್ಯ? ಬದುಕು ಇರುವವರೆಗೂ ಇರುವೆಯಂತೆ ಓಡುತ್ತಲೇ ಇರಬೇಕು. ಇರುವೆ ನೋಡಿ ಕಲಿಯಬೇಕು.

ನಮ್ಮ ಗುರು ಯಾರು ಅಂದರೆ ನಿಸರ್ಗ. ನಿಸರ್ಗದಲ್ಲಿಒಂದು ಪ್ರಾಣಿ ಇನ್ನೊಂದು ಪ್ರಾಣಿಗೆ ಗುರು. ಒಬ್ಬರಿಗೆ ಇನ್ನೊಬ್ಬರು ಗುರು. ನಮಗೆ ಜಗತ್ತೆಲ್ಲಗುರು. ಪಾಶ್ಚಾತ್ಯ ಶ್ರೇಷ್ಠ ಶಿಕ್ಷಣ ತಜ್ಞರೊಬ್ಬರು ಹೇಳತಾರ: ನಮಗೆ ನಿಜವಾದ ಅಧ್ಯಾಪಕ ಈ ನಿಸರ್ಗ ಎಂದು.

ದೇಹದಲ್ಲಿಯೂ ಅದ್ಭುತ ಶಕ್ತಿ ಅದ. ಮನಸ್ಸಲ್ಲಿಯೂ ಅದ್ಭುತ ಶಕ್ತಿ ಅದ. ಇವೆರಡೂ ನಮಗ ದೊರೆತಾವ. ಇಷ್ಟೆಲ್ಲದೊರೆತಾಗ ಏಕೆ ಅಸಾಧ್ಯ?. ವಿಮಾನ ಕಂಡುಹಿಡಿದರು. ಅವರೇನು ಮೊದಲ ದಿನವೇ ಆಕಾಶಕ್ಕೆ ಹಾರಿದರೇನು?. ಬಿದ್ದರು, ಎದ್ದರು. ಇಂದು ಆಕಾಶದಲ್ಲಿಸಾವಿರಾರು ಜನ ತೇಲತಾರ. ಹಾಗೆ ನಮ್ಮ ಜೀವನ ಸುಂದರ ಆಗಬೇಕಿದ್ದರೆ, ಶ್ರೀಮಂತ ಆಗಬೇಕಿದ್ದರೆ, ಆನಂದ ಅನುಭವಿಸಬೇಕಾದರೆ, ದಿವ್ಯತೆ ಅನುಭವಿಸಬೇಕಾದರೆ ನಾವು ತಪಸ್ವಿಗಳಾಗಿರಬೇಕು. ತಪಸ್ವಿ ಅಂದರೆ ಏನು? ಛಲದಿಂದ ಮಾಡೋ ಗುಣ. ಸಾಧಿಸೋವರೆಗೆ ಬಿಡೋದಿಲ್ಲಎನ್ನುವ ಗುಣ. ಮಾಡ್ತಾ ಮಾಡ್ತಾ ಹೋದಂತೆ ಯಾವುದೂ ಅಸಾಧ್ಯ ಅಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ