Please enable javascript.ಕಾಂಚಾಣ ಕರಾಮತ್ತು ! - ಕಾಂಚಾಣ ಕರಾಮತ್ತು ! - Vijay Karnataka

ಕಾಂಚಾಣ ಕರಾಮತ್ತು !

ವಿಕ ಸುದ್ದಿಲೋಕ 20 Apr 2013, 4:24 am
Subscribe

ಗಜೇಂದ್ರಗಡ : ರೋಣ ವಿಧಾಸಭಾ ಮತಕ್ಷೇತ್ರ ಚುನಾವಣೆಯಲ್ಲಿ ಚುನಾವಣಾ ಆಯೋಗದ ಬಿಗಿ ಭದ್ರತೆ ನಡುವೆಯೂ ಯಾರ ಕಣ್ಣಿಗೂ ಕಾಣದಂತೆ ಅಲ್ಲಲ್ಲಿ ಕುರಡು ಕಾಂಚಾಣಾವಂತೂ ಕುಣಿಯುತ್ತಲಿದೆ .

ಕಾಂಚಾಣ ಕರಾಮತ್ತು !
ಗಜೇಂದ್ರಗಡ : ರೋಣ ವಿಧಾಸಭಾ ಮತಕ್ಷೇತ್ರ ಚುನಾವಣೆಯಲ್ಲಿ ಚುನಾವಣಾ ಆಯೋಗದ ಬಿಗಿ ಭದ್ರತೆ ನಡುವೆಯೂ ಯಾರ ಕಣ್ಣಿಗೂ ಕಾಣದಂತೆ ಅಲ್ಲಲ್ಲಿ ಕುರಡು ಕಾಂಚಾಣಾವಂತೂ ಕುಣಿಯುತ್ತಲಿದೆ .

ಹೌದು, ಸರಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ರೋಣ ಕ್ಷೇತ್ರದಲ್ಲಿ ಕುಡಿಯಲು ನೀರಿನ ಹಾಹಾಕಾರ ತೀವ್ರಗೊಂಡಿದೆ. ಉದ್ಯೋಗವಿಲ್ಲದೆ ನಾಗರಿಕರು ವಲಸೆ ಹೋಗಿದ್ದಾರೆ. ಇಂತಹ ಸಂದರ್ಬದಲ್ಲಿ ಬಂದಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಹಲವು ರೀತಿಯ ಆಸೆ, ಆಮಿಷಗಳನ್ನು ಒಡ್ಡುತ್ತಿದ್ದಾರೆ. ಪರಿಣಾಮ ಕುರುಡು ಕಾಂಚಾಣ ಸದ್ದಿಲ್ಲದೇ ತನ್ನ ಕರಾಮತ್ತು ತೋರಿಸುತ್ತಿದೆ.

ಹದ್ದಿನ ಕಣ್ಣು ತಪ್ಪಿಸಿ ಅಕ್ರಮ ಚಟುವಟಿಕೆ ಚುನಾವಣೆ ಎಂದ ಮೇಲೆ ಹಣ, ಮದ್ಯ ಸರಬರಾಜ ಮಾಡಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಕ್ರಿಯೆ ಸಾಮಾನ್ಯ. ಆದರೆ ಈ ಬಾರಿ ಚುನಾವಣೆ ಆಯೋಗ ಇದಕ್ಕೆ ತಡೆ ಒಡ್ಡಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಡೆ ಬಿಗಿ ಭದ್ರತೆ ಒದಗಿಸಿ ಹದ್ದಿನ ಕಣ್ಣಿರಿಸಿದೆ. ಆದರೆ ಈ ಎಲ್ಲ ಕಣ್ಣುಗಳಿಂದಲೂ ತಪ್ಪಿಸಿಕೊಂಡು ಕೆಲ ಅಭ್ಯರ್ಥಿಗಳು ವ್ಯಾಪಕವಾಗಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಯುವಕರಿಗೆ ಬೆಳಗ್ಗೆ ಒಂದು ಪಕ್ಷ, ಮಧ್ಯಾಹ್ನ ಇನ್ನೊಂದು ಪಕ್ಷ. ಸ್ತ್ರೀ ಶಕ್ತಿ ಸಂಘಗಳಿಗೆ ಅಭ್ಯರ್ಥಿಗಳಿಂದ ಹಣದ ಆಮಿಷಎಲ್ಲಾ ಕಡೆ ಪ್ರಚಾರವನ್ನು ತೀವ್ರ ಗೊಳಿಸಿರುವ ವಿವಿಧ ಪಕ್ಷಗಳ ಮುಖಂಡರು ಮತದಾರರ ಮನೆ, ಮನೆಗೆ ಬೇಟಿಕೊಡುವದು, ರೋಡ್ ಶೋ, ಹೀಗೆ ವಿವಿಧ ರೀತಿಯಲ್ಲಿ ತಮ್ಮ ಪ್ರಚಾರ ಚುರಕುಗೊಳಿಸಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಅಂಗನವಾಡಿ ಕಾರ‌್ಯಕರ್ತೆಯರನ್ನು ತಮ್ಮತ್ತ ಸೆಳೆಯಲು ಅವರಿಗೆ ನಗದು ಕೊಡುವದು ಕ್ಷೇತ್ರದಲ್ಲಿ ನಡೆಯುತ್ತಿದೆ ಎಂಬುದು ಸಾಮೂಹಿಕ ಆರೋಪ ಕೇಳಿ ಬರುತ್ತಿದೆ.

ಮದ್ಯ ಸರಬರಾಜ ಮಾಡುವದು ಈಗಿನ ಚುನಾವಣಾ ಭದ್ರತೆಯಲ್ಲಿ ಕಷ್ಟ ವಾಗಿರುವ ಹಿನ್ನೆಲೆಯಲ್ಲಿ ಆ ರೀತಿಯ ಆಮಿಷ ಒಡ್ಡಲು ತಮ್ಮ ಸಂಬಂದಿಕರು, ಸ್ನೇಹಿತರು, ಪಕ್ಷ ನಿಷ್ಠಾವಂತ ಕಾರ‌್ಯಕರ್ತರ ಮೂಲಕ ಯಾರಿಗೂ ಗೊತ್ತಾ ಗದ ಹಾಗೆ ಮಧ್ಯ ಹಂಚಿಕೆ ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಚುನಾವಣಾಧಿಕಾರಿಗಳು ಪಾಲಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರ ಎಲ್ಲ ಭಾಗದಲ್ಲಿ ಚೆಕ್‌ಪೋಸ್ಟ ತೆರೆದಿದ್ದಾರೆ. ಈ ವೇಳೆಯಲ್ಲಿ ಯಾವುದೇ ದಾಖಲೆಗಳಿಲ್ಲದೇ ವಾಹನದಲ್ಲಿ ಹಣ ಸರಬರಾಜ ಆಗುತ್ತಿರುವದು ಪತ್ತೆ ಮಾಡಿ ಲಕ್ಷಾಂತರ ರೂಪಾಯಿ ವಶ ಪಡಿಸಿಕೊಳ್ಳುತ್ತಲೆ ಇದ್ದಾರೆ. ಟೋಲ್ ಬಳಿ ನಿಯೋಜಿಸಿರುವ ಸಿಬ್ಬಂದಿ, ಪಟ್ಟಣ ಪ್ರವೇಶಿಸುವ ಎಲ್ಲ ವಾಹನಗಳ ತಪಾಸಣಾ ಕಾರ್ಯ ನಡೆ ಸುತ್ತಿದ್ದಾರೆ.

ಬಿಗಿ ಭದ್ರತೆ ಒದಗಿಸಿರುವ ಆಯೋಗ ಚುನಾವಣಾ ಆಯೋಗ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಸಿದ್ಧತೆ ಮಾಡಿಕೊಂಡಿದೆ. ಕೆಲ ಸಂಘ, ಸಂಸೆಗಳು ಇದನ್ನೆ ಬಂಡವಾಳ ಮಾಡಿಕೊಂಡಿವೆ. ಬೆಳಗ್ಗೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡರೆ ಮಧ್ಯಹ್ನ ಇನ್ನೊಂದು ಪಕ್ಷದಲ್ಲಿ, ರಾತ್ರಿ ಮತ್ತೊಂದು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮತದಾರರಲ್ಲಿ ಯಾರು, ಯಾವ ಪಕ್ಷದವರು ಎಂಬುದು ಗೊಂದಲ ಸಷ್ಠಿಸಿದೆ.ಯುವಕರು ಪಡೆಯಂತೂ ಇಂತಹ ಕ್ರಿಯೆಯಲ್ಲಿ ಹೆಚ್ಚು ತೊಡಗಿರುವದು ಕಂಡು ಬರುತ್ತಿದೆ. ಪಕ್ಷಾಂತರ ವ್ಯಾಪಕವಾಗಿದೆ. ಮತದಾರರಿಗೆ ನೇರವಾಗಿ ಗುಂಡು, ತುಂಡು ನೀಡಲಾಗದೇ ಕೆಲವರು ಡಾಬಾಗಳಲ್ಲಿ, ಸಾವಜಿ ಖಾನಾವಳಿಯಲ್ಲಿ ಪಾರ್ಟಿ ವ್ಯವಸ್ಥೆ ನಡೆಯುತ್ತಿದೆ. ಇದೂ ಕೂಡಾ ಗುಂಪು ಗುಂಪಾಗಿ ಹೋಗದೇ ಗ್ರಾಹಕರಾಗಿ ಹೋಗಿ ಊಟ ಮಾಡಿಕೊಂಡು ಬರುವ ವ್ಯವಸ್ಥೆ ಮಾಡಿದ್ದಾರೆ.

ಕೂಲಿಗೆ ಚೆಕ್ಕರ್ ಚುನಾವಣೆಗೆ ಹಾಜರ್ ಪಟ್ಟಣದಲ್ಲಿ ಕೂಲಿಕಾರರಿಗೆ ಬರಗಾ ಬಂದಿದೆ. ಉಪಹಾರ ಮಂದಿರ, ಬಾರು, ಬೇಕರಿ, ಪೆಟ್ರೋಲ್ ಬಂಕ್, ಹಾಗೂ ಗುತ್ತಿಗೆದಾರರು ಕೂಲಿ ಕಾರ್ಮಿಕರು ಸಿಗದೇ ಹೈರಾಣಾಗಿದ್ದಾರೆ. ಪುರಸಭೆ ಚುನಾವಣೆ ಪ್ರಚಾರಕ್ಕೆ ರಾಜಕೀಯ ನೇತಾರರು ಇವರನ್ನು ಬಳಸಿಕೊಂಡಿದ್ದರಿಂದ ಇಷ್ಟಕ್ಕೆಲ್ಲಾ ಕಾರಣವಾಗಿದೆ.ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬಂದಿಸಿದ ಮತ್ತಿತ್ತರ ಕಾರ್ಯಗಳಿಗಾಗಿ ರಾಜಕೀಯ ಪಕ್ಷಗಳು ಇವರನ್ನು ಬಳಸಿಕೊಂಡಿರುವುದೇ ಇದಕ್ಕೆಲ್ಲಾ ಕಾರಣ. ರಾಜಕೀಯ ಪಕ್ಷವೊಂದರ ಚುನಾವಣೆ ಪ್ರಚಾರಕ್ಕಾಗಿ ಹೋದರೆ ದಿನ ಒಂದಕ್ಕೆ 200 ರೂ.ಗಳಿಂದ 300 ರೂಗಳ ಕೂಲಿ ಸಿಗುತ್ತದೆ. ಜೋತೆಗೆ ಎರಡು ಹೊತ್ತಿನ ಮಜಬೂತಾದ ಊಟ ಉಪಚಾರಗಳಿಗೆ ಚಿಂತೆ ಇಲ್ಲ. ಹಾಗಾಗಿ ಕಾರ್ಮಿಕರು ಕೂಲಿಗೆ ಚಕ್ಕರ್ ಹೊಡೆದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತಾರೆ.

ಚುನಾವಣೆಗೆ ಧುಮುಕುವ ಪ್ರಕ್ರಿಯೆಗಳು ಮುಗಿದು ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಹೀಗಾಗಿ ದಿನೇ ದಿನೇ ಪ್ರಚಾರ ಕಾವು ಪಡೆದುಕೊಳ್ಳತ್ತ ಸಾಗಿದೆ. ಪ್ರಚಾರದ ಅಬ್ಬರ ಜೋರಾಗಿದೆ. ಚುನಾವಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ