Please enable javascript.ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ - ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ - Vijay Karnataka

ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ

ವಿಕ ಸುದ್ದಿಲೋಕ 20 Dec 2012, 5:00 am
Subscribe

ರೋಣ:ರಾಜ್ಯ ಸರಕಾರ ರೈತ ಸಮುದಾಯಕ್ಕಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ.

ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ
ರೋಣ:ರಾಜ್ಯ ಸರಕಾರ ರೈತ ಸಮುದಾಯಕ್ಕಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಯೋಜನೆ ಪ್ರಯೋಜನ ಪಡೆದು ಆಧುನಿಕ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡಬೇಕು. ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲಾ ಬಿಕ್ಕುವುದು ಎಂದು ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಹೇಳಿದರು.
ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ತಾಪಂ, ಕಷಿ ಮತ್ತು ಕಷಿ ಸಂಬಂತ ಇಲಾಖೆಗಳು, ಕಷಿ ವಿಶ್ವ ವಿದ್ಯಾಲಯ ಧಾರವಾಡ ಇವರ ಆಶ್ರಯದಲ್ಲಿ ನಡೆದ ಕಷಿ ಮಾಹಿತಿ ಆಂದೋಲನ 2012 ರ ಅಡಿ ಹಮ್ಮಿಕೊಂಡಿದ್ದ ತಾಲೂಕು ಕಷಿ ಮಾಹಿತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಕಷಿಯಲ್ಲಿ ತೊಡಗಿಕೊಳ್ಳದಿದ್ದರೆ ಮುಂದೊಂದು ದಿನ ಅನ್ನಕ್ಕಾಗಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಭೂಮಿ ತಾಯಿಯ ಮಕ್ಕಳಾದ ನಾವು ರಾಸಾಯನಿಕ ಔಷಧ ಗೊಬ್ಬರಗಳ ಮೂಲಕ ಭೂಮಿ ತಾಯಿಗೆ ವಿಷ ಉಣಿಸುತ್ತಿದ್ದೇವೆ. ನಾವು ಕೂಡಾ ಅದನ್ನು ಸೇವಿಸುತ್ತಿದ್ದೇವೆ. ಇದರಿಂದ ದೇಹದ ಮೇಲೆ ದುಷ್ಪರಿಣಾಮ ಉಂಟಾಗಿವೆ. ಇದೇ ರೀತಿ ನಾವು ರಾಸಾಯನಿಕ ಬಳಸುವುದರಿಂದ ಭೂಮಿಯು ಬರಡಾಗುವ ಹಂತ ತಲುಪಿದೆ. ಮುಂಬರುವ ದಿನಗಳಲ್ಲಿ ಬರುವ ಆಪತ್ತುನ್ನು ತಡೆಗಟ್ಟಬೇಕಾದರೆ ರೈತರು ಸಾವಯವ ಕಷಿಯ ಬಗ್ಗೆ ಮನಸ್ಸು ಮಾಡಬೇಕು ಎಂದು ವಿಷಾದ ವ್ಯಕ್ತಪಡಿಸಿದರು.
ಅಶೋಕ ನವಲಗುಂದ ಮಾತನಾಡಿ ರೈತರು ಕಷಿಯೊಂದಿಗೆ ಉಪಕಸುಬಗಳನ್ನು ಮಾಡಬೇಕು. ಇಂದು ಕಷಿ ಕ್ಷೇತ್ರದ ಬಗ್ಗೆ ಯಾರೂ ಆಸಕ್ತಿವಹಿಸುತ್ತಿಲ್ಲ. ಕೇಂದ್ರ ಸರಕಾರವು ಉದ್ದಿಮೆದಾರರಿಗೆ ಒಂದೂವರೆ ಲಕ್ಷ ಕೋಟಿ ಹಣ ಸಹಾಯಧನ ನೀಡುತ್ತಿದೆ. ಅದೇ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಇದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯ. ಸರಕಾರಗಳ ಕಷಿ ನೀತಿಯು ಉದ್ದಿಮೆದಾರರ ಕೈಗೊಂಬೆಯಾಗಿದೆ ಎಂದರು.
ಲಲಿತಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಪರ್ವತಗೌಡ ಪೊಲೀಸಪಾಟೀಲ, ಡಾ.ಎಸ್.ಪಿ.ಹಲಗಲಿಮಠ, ಶಿವಣ್ಣ ಅರಹುಣಸಿ, ಶಂಕರ ಕಳಿಗೊಣ್ಣವರ, ಜಂಟಿ ನಿರ್ದೇಶಕ ಕಷ್ಣಮೂರ್ತಿ, ಎಪಿಎಂಸಿ ಸದಸ್ಯ ಮಲ್ಲನಗೌಡ ಪಾಟೀಲ, ತಾಪಂ ಸದಸ್ಯ ಶಿವಕುಮಾರ ನೀಲಗುಂದ, ಶಿವಕುಮಾರ ಸಾಲಮನಿ, ರೇಣುಕಾ ಹಟ್ಟಿಮನಿ ವಿವಿಧ ಇಲಾಖೆಗಳ ಅಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ಎಸ್.ಎ.ಸೂಡಿಶೆಟ್ಟರ ಸ್ವಾಗತಸಿದರು. ಸಿದ್ದೇಶ ಕೊಡಿಹಳ್ಳಿ ನಿರೂಪಿಸಿದರು. ಆರ್.ಎಸ್.ಕೆ.ಭಾವಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ