ಆ್ಯಪ್ನಗರ

ಬೀಚಿ ಸಾಹಿತ್ಯದಲ್ಲಿ ಹಾಸ್ಯದ ಮೂಲಕ ಸಾಮಾಜಿಕ ಸಂದೇಶ

ಗದಗ :ಬೀಚಿ ಅವರು ಹಾಸ್ಯ ಸಾಹಿತ್ಯದ ಮೂಲಕ ಕನ್ನಡಕ್ಕೆ ಹೊಸತನ ತಂದುಕೊಟ್ಟ ಅಪ್ರತಿಮ ಲೇಖಕರು. ಮನೆ ಮಾತು ತೆಲಗು ಭಾಷೆಯಾಗಿದ್ದರೂ ಕನ್ನಡದ ಪ್ರಾದೇಶಿಕ ಸೊಗಡನ್ನು ತಮ್ಮ ಕೃತಿಗಳಲ್ಲಿ ನೀಡಿದ್ದಾರೆ ಎಂದು ಸಾಹಿತಿ ಅರುಣ ಕುಲಕರ್ಣಿ ಹೇಳಿದರು.

Vijaya Karnataka 20 Jun 2018, 5:00 am
ಗದಗ :ಬೀಚಿ ಅವರು ಹಾಸ್ಯ ಸಾಹಿತ್ಯದ ಮೂಲಕ ಕನ್ನಡಕ್ಕೆ ಹೊಸತನ ತಂದುಕೊಟ್ಟ ಅಪ್ರತಿಮ ಲೇಖಕರು. ಮನೆ ಮಾತು ತೆಲಗು ಭಾಷೆಯಾಗಿದ್ದರೂ ಕನ್ನಡದ ಪ್ರಾದೇಶಿಕ ಸೊಗಡನ್ನು ತಮ್ಮ ಕೃತಿಗಳಲ್ಲಿ ನೀಡಿದ್ದಾರೆ ಎಂದು ಸಾಹಿತಿ ಅರುಣ ಕುಲಕರ್ಣಿ ಹೇಳಿದರು.
Vijaya Karnataka Web social message through comedy in beechi literature
ಬೀಚಿ ಸಾಹಿತ್ಯದಲ್ಲಿ ಹಾಸ್ಯದ ಮೂಲಕ ಸಾಮಾಜಿಕ ಸಂದೇಶ


ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಒಂದು ವರ್ಷ ನೂರು ಕಾರ್ಯಕ್ರಮದ ಅಂಗವಾಗಿ ನಡೆದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಬೀಚಿ ಮತ್ತು ಸಾಹಿತ್ಯ ವಿಷಯವಾಗಿ ಮಾತನಾಡಿದರು.

ನಗುವಿನ ಜತೆಗೆ ಸಮಾಜಕ್ಕೆ ಸೂಕ್ತ ಸಂದೇಶ ಕೊಡುವ ಉದ್ದೇಶ ಬೀಚಿಯವರದಾಗಿತ್ತು. ಕಂದಾಚಾರ, ಮೂಢನಂಬಿಕೆ ವಿರೋಧಿಯಾಗಿದ್ದ ಬೀಚಿಯವರು ಸಮಾಜದ ಓರೆಕೋರೆಗಳನ್ನು ಹಾಸ್ಯದ ಮೂಲಕ ಜನರ ಮುಂದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಬಾಲ್ಯದಿಂದಲೇ ಹಾಸ್ಯಪ್ರಜ್ಞೆ ಬೆಳೆಸಿಕೊಂಡು ಬಂದ ಬೀಚಿಯವರು ಕನ್ನಡ ಸಾಹಿತ್ಯಕ್ಕೆ 63 ಕೃತಿಗಳನ್ನು ನೀಡಿದ್ದಾರೆ. ಕಾದಂಬರಿ, ರೇಡಿಯೋ ನಾಟಕ, ಹರಟೆ ಮೂಲಕ ಓದುಗರನ್ನು ಸೆಳೆದಿದ್ದಾರೆ ಎಂದು ತಿಳಿಸಿದರು.

ಗೌರವ ಕಾರ್ಯದರ್ಶಿ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಹಾಸ್ಯ ಜೀವನದಲ್ಲಿ ಅಗತ್ಯ. ಒತ್ತಡದ ಬದುಕಿಗೆ ಒಂದಿಷ್ಟು ನೆಮ್ಮದಿ ಕೊಟ್ಟು ಮತ್ತೆ ಕ್ರಿಯಾಶೀಲನನ್ನಾಗಿ ಮಾಡುವ ಶಕ್ತಿ ಹಾಸ್ಯಕ್ಕಿದೆ. ಬೀಚಿಯವರು ಬದುಕಿನ ಸರಳ ಪ್ರಸಂಗಗಳನ್ನು ಹಾಸ್ಯಪ್ರಜ್ಞೆಯ ಹಿನ್ನೆಲೆಯಲ್ಲಿ ನೋಡಿ, ತಿದ್ದುವ ಪ್ರಯತ್ನವನ್ನು ಅವರ ಬರಹದ ಮೂಲಕ ಮಾಡಿದ್ದಾರೆ. ಬದುಕುವ ಬಗೆಯನ್ನು ಕಲಿಸಿದ್ದಾರೆ ಎಂದು ಹೇಳಿದರು.

ಅಂದಾನೆಪ್ಪ ವಿಭೂತಿ, ಎಚ್‌.ಬಿ.ರಡ್ಡೇರ, ಜಯಶ್ರೀ ಶ್ರೀಗಿರಿ, ರತ್ನಕ್ಕ ಪಾಟೀಲ, ಮರುಳಸಿದ್ಧಪ್ಪ ದೊಡಮನಿ, ಸಿ.ಕೆ. ಕೇಸರಿ, ಜೆ.ಎ.ಪಾಟೀಲ, ಸಂತೋಷ ಕುರಿ, ಶಂಕ್ರಣ್ಣ ಅಂಗಡಿ, ಮಹಮ್ಮದ ಹಣಗಿ, ಮಹಾಂತೇಶ ಎಂ. ಇದ್ದರು.

ಮಂಜುಳಾ ಅಕ್ಕಿ ಅವರ ಗೀತಗಾಯನ. ಗುರುಪ್ರಸಾದ ಕುಲಕರ್ಣಿ ಕವಿತೆ ವಾಚಿಸಿದರು. ಪ್ರೊ ಬಾಹುಬಲಿ ಜೈನರ್‌ ನಿರೂಪಿಸಿದರು. ಸಂಚಾಲಕ ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಎಸ್‌.ಬಿ.ದೊಡ್ಡಣ್ಣವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ