ಆ್ಯಪ್ನಗರ

ಅಹಂಕಾರದಿಂದ ಸದ್ಗುಣ ನಾಶ :ಶಿವಬಸವ ಶ್ರೀ

ನರಗುಂದ : ಸರಳತೆ ಮತ್ತು ಸಹಜತೆ ಈ ಎರಡು ಸ್ವಾಮಿಗಳ ಸಂಪತ್ತು ಎಂದು ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು. ಇಲ್ಲಿನ ವಿರಕ್ತಮಠದ ಕರ್ತೃ ಚನ್ನಬಸವ ಶಿವಯೋಗಿಗಳ 150ನೇ ಸ್ಮರಣೋತ್ಸವದ 8ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಮರಣ ಯಾರಿಗೂ

Vijaya Karnataka 4 May 2019, 5:00 am
ನರಗುಂದ : ಸರಳತೆ ಮತ್ತು ಸಹಜತೆ ಈ ಎರಡು ಸ್ವಾಮಿಗಳ ಸಂಪತ್ತು ಎಂದು ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.
Vijaya Karnataka Web GDG-2NRD2
ನರಗುಂದ ವಿರಕ್ತಮಠದ ಶ್ರೀಗಳ ಸ್ಮರಣೋತ್ಸದಲ್ಲಿ ಹುಕ್ಕೇರಿಯ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿದರು.

ಇಲ್ಲಿನ ವಿರಕ್ತಮಠದ ಕರ್ತೃ ಚನ್ನಬಸವ ಶಿವಯೋಗಿಗಳ 150ನೇ ಸ್ಮರಣೋತ್ಸವದ 8ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಮರಣ ಯಾರಿಗೂ ತಪ್ಪಿದ್ದಲ್ಲ. ಜನನ ಮರಣದ ಮಧ್ಯ ಉಪಕಾರ ಮಾಡಬೇಕು. ದಾನ ಮಾಡಬೇಕು. ದಾನ ಮಾಡಿದ್ದನ್ನು ಮರೆತು ನಡೆದಾಗ ಶಾಂತಿ ಸಿಗುತ್ತದೆ. ಇದರಲ್ಲೆ ಜಗತ್ತಿನ ಧರ್ಮಗಳ ಸಾರ ಅಡಗಿದೆ ಎಂದರು.

ನಾನು, ನನ್ನದು ಎಂಬ ಅಹಂಕಾರ ಬಂದರೆ ಅಲ್ಲಿ ಸದ್ಗುಣಗಳು ಹಾಳಾಗುತ್ತವೆ. ಮಾಡಬೇಕು, ಮಾಡದಂತಿರಬೇಕು, ಮಾಡುವುರೊಂದಿಗೆ ನಿಲ್ಲಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ದೇವರು ಕೊಟ್ಟಿದ್ದನ್ನು ದಾನ ರೂಪದಲ್ಲಿ ಕೊಟ್ಟಿದ್ದೇವೆ ಎಂದುಕೊಂಡರೆ ಧನ್ಯತಾಭಾವ ಬರುತ್ತದೆ. ಕೂಲಿ ಮಾಡುವವನಿಂದ ಪ್ರಧಾನಿವರೆಗೂ, ದೇವರಿಗೂ ಸಮಸ್ಯೆ ತಪ್ಪಿದ್ದಲ್ಲ. ಸಮಸ್ಯೆಗಳ ಮಧ್ಯ ಇಂಥ ಪ್ರವಚನಗಳಲ್ಲಿ ಪಾಲ್ಗೊಂಡು ಪೂಜ್ಯರ ನುಡಿಗಳನ್ನು ಕೇಳಿ ಶಾಂತಿ ನೆಮ್ಮದಿ ತಂದುಕೊಂಡರೆ ಆಯುಷ್ಯ, ಆರೋಗ್ಯ ನಿಮ್ಮದಾಗುತ್ತದೆ ಎಂದರು.

ಜೀ ಕನ್ನಡದ ಸರಿಗಮಪ ವಿಜೇತ ವಿಶ್ವ ಪ್ರಸಾದ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಮಾತನಾಡಿದರು. ಸಾಧಕರನ್ನು ಸನ್ಮಾನಿಸಲಾಯಿತು. ಮಡಿವಾಳ ಶಾಸ್ತ್ರಿಗಳಿಂದ ಚನ್ನಬಸವ ಶಿವಯೋಗಿಗಳ ಪ್ರವಚನ ಜರುಗಿತು. ಮೃತ್ಯುಂಜಯ ದೇವರು, ಗುರುದೇವ ದೇವರು, ಶಿವಾನಂದ ದೇವರು ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ