ಆ್ಯಪ್ನಗರ

ಸುಳ್ಳು ಭರವಸೆ ಕೊಟ್ಟ ಸಿಎಂ ಮಾಡಿದ್ದೇನು?

ಗದಗ: ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಸುಳ್ಳು ಭರವಸೆ ಕೊಟ್ಟು 37 ಸೀಟು ಗೆದ್ದಿರುವ ಕುಮಾರಸ್ವಾಮಿ ಮಾಡಿದ್ದೇನು? ಒಂಭತ್ತು ತಿಂಗಳಾದರೂ ರೈತರ ಸಾಲ ಮನ್ನಾ ಆಗಿಲ್ಲ. ಇನ್ನೊಂದೆಡೆ ಹೊಸ ಸಾಲ ಸಿಗುತ್ತಿಲ್ಲ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬಡ್ಡಿ ಬೆಳೆಯುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಪ್ರಶ್ನಿಸಿದರು.

Vijaya Karnataka 8 Mar 2019, 5:00 am
ಗದಗ: ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಸುಳ್ಳು ಭರವಸೆ ಕೊಟ್ಟು 37 ಸೀಟು ಗೆದ್ದಿರುವ ಕುಮಾರಸ್ವಾಮಿ ಮಾಡಿದ್ದೇನು? ಒಂಭತ್ತು ತಿಂಗಳಾದರೂ ರೈತರ ಸಾಲ ಮನ್ನಾ ಆಗಿಲ್ಲ. ಇನ್ನೊಂದೆಡೆ ಹೊಸ ಸಾಲ ಸಿಗುತ್ತಿಲ್ಲ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬಡ್ಡಿ ಬೆಳೆಯುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಪ್ರಶ್ನಿಸಿದರು.
Vijaya Karnataka Web what is the false promise made by the cm
ಸುಳ್ಳು ಭರವಸೆ ಕೊಟ್ಟ ಸಿಎಂ ಮಾಡಿದ್ದೇನು?


ಗುರುವಾರ ನಗರದ ಮಾಡೆಲ್‌ ಹೈಸ್ಕೂಲ್‌ ಮೈದಾನದಲ್ಲಿ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸುಳ್ಳು ಭರವಸೆ ನೀಡುವ ಮೂಲಕ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ. ರೈತರ ಖಜಾನೆ ಲೂಟಿ ಮಾಡುತ್ತಿದ್ದಾರೆ. ರಾಜ್ಯದ 177 ತಾಲೂಕುಗಳಲ್ಲಿ ಬರ, ಕುಡಿಯುವ ನೀರಿನ ಹಾಹಾಕಾರ ಇದ್ದರೂ ಮಂತ್ರಿಗಳು, ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಪಕ್ಷ, ಒಂದು ಕಾಲದಲ್ಲಿ ಲೋಕಸಭೆಯಲ್ಲಿ 400 ಸದಸ್ಯರನ್ನು ಹೊಂದಿದ್ದ ಪಕ್ಷ ಈಗ ಅಧಿಕೃತ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಲು ಅಗತ್ಯವಿರುವ ಸಂಖ್ಯೆಯನ್ನೂ ಹೊಂದಿಲ್ಲ. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ವಿಸರ್ಜಿಸಿ ಎಂದು ಮಹಾತ್ಮಾ ಗಾಂಧಿ ಸಲಹೆ ನೀಡಿದ್ದರು. ಆದರೆ, ಅಂದಿನ ನಾಯಕರು ಗಾಂಧಿ ಸಲಹೆ ಕಡೆಗಣಿಸಿದರೆ. ಆದರೆ, 2014ರಲ್ಲಿ ಜನರೇ ಕಾಂಗ್ರೆಸ್ಸನ್ನು ವಿಸರ್ಜಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆ ರಾಜಕೀಯ ಚುನಾವಣೆ ಅಲ್ಲ. ಇದು ದೇಶ, ಹಿಂದುಗಳ ಮತ್ತು ಭ್ರಷ್ಟ ಪಕ್ಷಗಳ ನಡುವಿನ ಮಹಾ ಸಮರವಾಗಿದೆ. ಸ್ವಾತಂತ್ರ್ಯ ನಂತರ ಎಲ್ಲ ಭ್ರಷ್ಟ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್‌ ಅಧಿಕಾರ ನಡೆಸಿದೆ. ಆದರೆ, ಈ ಕಾಂಗ್ರೆಸ್‌ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದೆ. ಈ ಬಾರಿ ನಡೆಯುವ ಚುನಾವಣೆ ದೇಶ ಮತ್ತು ಭ್ರಷ್ಟ ವ್ಯವಸ್ಥೆ ನಡುವಿನ ಕದನವಾಗಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ , ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಸರಕಾರ ನಿಷ್ಕ್ರೀಯವಾಗಿದೆ. ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಪಕ್ಷ ಈಗ ಬೆರಳೆಣಿಕೆಯ ಶಾಸಕರು ಇರುವ ಪಕ್ಷದ ಎದುರು ಮಂಡಿಯೂರಿರುವುದು ಕಾಂಗ್ರೆಸ್ಸಿನ ದಯನೀಯ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ರಾಜ್ಯದಲ್ಲಿ 13 ಲಕ್ಷ ಉಜ್ವಲಾ ಯೋಜನೆ ಫಲಾನುಭವಿಗಳ ಪೈಕಿ 1.3 ಲಕ್ಷ ಹಾವೇರಿ ಮತ್ತು 1 ಲಕ್ಷ ಫÜಲಾನುಭವಿಗಳು ಗದಗ ಜಿಲ್ಲೆಯಲ್ಲಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ 300 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಮೃತ ಯೋಜನೆಯಡಿ ಗದಗ-ಬೆಟಗೇರಿ ನಗರಕ್ಕೆ 198 ಕೋಟಿ ರೂ. ಹಾಗೂ ರಾಣೆಬೆನ್ನೂರಿಗೆ 119 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಹಾವೇರಿ ಕ್ಷೇತ್ರದ 1.65 ಲಕ್ಷ ರೈತರು ಕಿಸಾನ್‌ ಸಮ್ಮಾನ ಯೋಜನೆಯ ಲಾಭ ಪಡೆಯಲಿದ್ದಾರೆ. ಒಟ್ಟು ಎರಡು ಅವಧಿಯಲ್ಲಿ 250 ಕೋಟಿ ರೂ. ಫಸಲ್‌ ವಿಮೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸ್ಮೃತಿ ಇರಾನಿ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ, ರಾಜು ಕುರುಡಗಿ, ಎಂ.ಎಸ್‌. ಕರಿಗೌಡರ, ರವಿ ದಂಡಿನ, ಪ್ರಕಾಶ ಬಾಕಳೆ, ಜಗನ್ನಾಥಸಾ ಭಾಂಡಗೆ ಉಪಸ್ಥಿತರಿದ್ದರು.

ಎಚ್ಕೆ ವಿರುದ್ಧ ಹರಿಹಾಯ್ದ ಬಂಡಿ : ಗದಗ ನಗರದ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ಕೆ.ಎಚ್‌. ಪಾಟೀಲ ಪ್ರತಿಮೆ ನಿಲ್ಲಿಸಲಾಗಿದೆ. ಕ್ರೀಡಾಂಗಣ, ಕಲ್ಯಾಣ ಮಂಟಪಕ್ಕೂ ಕೆ.ಎಚ್‌. ಪಾಟೀಲ ಹೆಸರಿಡಲಾಗಿದೆ. ಕೃಷಿ ವಿಜ್ಞಾನ ಕೇಂದ್ರಕ್ಕೂ ಕೆ.ಎಚ್‌. ಪಾಟೀಲ ಹೆಸರಿಡಲಾಗಿದೆ. ಈಗ ಗಂಗಿಮಡಿಯ ಆಶ್ರಯ ಕಾಲೊನಿಗೂ ಕೆ.ಎಚ್‌. ಪಾಟೀಲ ಹೆಸರಿಡಲು ಹುನ್ನಾರ ನಡೆಸಿದ್ದಾರೆ. ಹೀಗೆ ಆದರೆ ಮುಂದೊಂದು ದಿನ ಗದಗ ನಗರಕ್ಕೂ ಕೆ.ಎಚ್‌. ಪಾಟೀಲ ಎಂದು ನಾಮಕರಣ ಮಾಡುವ ಕಾಲ ದೂರವಿಲ್ಲ ಎಂದು ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಗದಗ ಕ್ಷೇತ್ರದ ಶಾಸಕ ಎಚ್‌.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು. ಗದಗ ಜಿಲ್ಲಾ ಕೇಂದ್ರ ಮಾಡಿದ್ದು ಜೆ.ಎಚ್‌. ಪಟೇಲರು. ಆದರೂ ಗದಗ ಜಿಲ್ಲೆಯಾಗಬೇಕು ಎಂದು ಕನಸು ಕಂಡಿದ್ದವರು ಕೆ.ಎಚ್‌. ಪಾಟೀಲ. ಮೆಡಿಕಲ್‌ ಕಾಲೇಜ್‌ ಸ್ಥಾಪನೆ ಮಾಡಿದ್ದು ಬಿಜೆಪಿ ಸರಕಾರ. ಆದರೆ ಅದರ ಕನಸು ಕಂಡಿದ್ದು ಕಾಂಗ್ರೆಸ್‌. ಹೀಗೆ ಕಾಂಗ್ರೆಸ್‌ ಮುಖಂಡರು ಕಂಡಿದ್ದ ಕನಸುಗಳನ್ನು ಬಿಜೆಪಿ ನನಸು ಮಾಡಿದೆ ಎಂದು ಲೇವಡಿ ಮಾಡಿದರು.

ಕೈ ಕೊಟ್ಟ ಜನರೇಟರ್‌ : ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡುತ್ತಿದ್ದ ವೇಳೆ ಜನರೇಟರ್‌ನಲ್ಲಿ ಕಾಣಿಸಿಕೊಂಡ ಭಾರೀ ಪ್ರಮಾಣದ ಹೊಗೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಇದರಿಂದ 10 ನಿಮಿಷಕ್ಕೂ ಹೆಚ್ಚಾ ಕಾಲ ಕಾರ್ಯಕ್ರಮ ಸ್ಥಗಿತಗೊಂಡಿತು. ತಾಂತ್ರಿಕ ಸಮಸ್ಯೆ ಪರಿಹಾರವಾದ ನಂತರ ಗದ್ದಿಗೌಡರ ತಮ್ಮ ಮಾತು ಮುಂದುವರಿಸಿದರು.

ಸೆಲ್ಫಿಗೆ ಮುಗಿಬಿದ್ದ ಜನ: ಕೇಂದ್ರ ಸಚಿವ ಸ್ಮೃತಿ ಇರಾನಿ ವೇದಿಕೆಗೆ ಆಗಮಿಸುತ್ತಿದ್ದಂತೆ ಲಂಬಾಣಿ ಸಮುದಾಯದ ಮಹಿಳೆಯರು ವೇದಿಕೆ ಮುಂಭಾಗದಲ್ಲಿ ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ ಕೋರಿದರು. ಸ್ಮೃತಿ ಇರಾನಿ ವೇದಿಕೆ ಏರುತ್ತಿದ್ದಂತೆ ಅನೇಕ ಕಾರ್ಯಕರ್ತರು, ಮಹಿಳೆಯರು ವೇದಿಕೆ ಮೇಲೆ ತೆರಳಿ, ಹೂಗುಚ್ಛ, ಮನವಿ ನೀಡಿ ಸೆಲ್ಫಿ ತೆಗೆಸಿಕೊಂಡರು. ಸಂಘಟಕರು ಪದೇ ಪದೇ ವಿನಂತಿಸಿದರೂ ಸೆಲ್ಫಿ ಸಂಭ್ರಮ ಕೆಲಕಾಲ ಮುಂದುವರಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ