ಆ್ಯಪ್ನಗರ

ಜೈನ ಕ್ಷೇತ್ರ ಪರಿಚಯಕ್ಕೆ ಶೀಘ್ರವೇ ವೆಬ್‌ಸೈಟ್

ದೇಶಾದ್ಯಂತ ಇರುವ ಜೈನ ತೀರ್ಥ ಕ್ಷೇತ್ರಗಳನ್ನು ಎಲ್ಲರಿಗೂ ಪರಿಚಯಿಸಲು ಹೊಸದಾಗಿ ವೆಬ್‌ಸೈಟ್ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಅಖಿಲ ಭಾರತವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷೆ ಸರಿತಾ ಮಹೇಂದ್ರಕುಮಾರ್ ಜೈನ್ ಹೇಳಿದರು.

ವಿಕ ಸುದ್ದಿಲೋಕ 27 Mar 2016, 2:32 pm
ಚನ್ನರಾಯಪಟ್ಟಣ : ದೇಶಾದ್ಯಂತ ಇರುವ ಜೈನ ತೀರ್ಥ ಕ್ಷೇತ್ರಗಳನ್ನು ಎಲ್ಲರಿಗೂ ಪರಿಚಯಿಸಲು ಹೊಸದಾಗಿ ವೆಬ್‌ಸೈಟ್ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಅಖಿಲ ಭಾರತವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷೆ ಸರಿತಾ ಮಹೇಂದ್ರಕುಮಾರ್ ಜೈನ್ ಹೇಳಿದರು.
Vijaya Karnataka Web
ಜೈನ ಕ್ಷೇತ್ರ ಪರಿಚಯಕ್ಕೆ ಶೀಘ್ರವೇ ವೆಬ್‌ಸೈಟ್


ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಶನಿವಾರ ಶ್ರವಣಬೆಳಗೊಳಕ್ಕೆ ಆಗಮಿಸಿದ ಅವರಿಗೆ ಶ್ರೀಮಠದ ವತಿಯಿಂದ ಸ್ವಾಗತ ಸಮಾರಂಭ ಹಮ್ಮಿಕೊಳ್ಳ ಲಾಗಿತ್ತು. ನಂತರ ಮಾತನಾಡಿ, ‘‘ದೇಶದಲ್ಲಿರುವ ಎಲ್ಲ ಜೈನ ತೀರ್ಥಕ್ಷೇತ್ರಗಳ ಸಂರಕ್ಷಣೆಯೇ ಸಮಿತಿಯ ಮೂಲ ಉದ್ದೇಶವಾಗಿದೆ’’ ಎಂದರು. ‘‘ತೀರ್ಥಕ್ಷೇತ್ರದಲ್ಲಿರುವ ಅತಿಥಿ ನಿವಾಸಗಳ ಅಭಿವದ್ಧಿಯೂ ಇದರಲ್ಲಿ ಸೇರಿದ್ದು, ಪ್ರತಿ 100 ಕಿ.ಮೀ. ವ್ಯಾಪ್ತಿಯಲ್ಲಿ ಒಂದೊಂದು ತಂಡಗಳನ್ನು ಮಾಡಿಕೊಂಡು ಅಲ್ಲಿರುವ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು. ಜೈನತತ್ತ್ವಗಳನ್ನು ಅನುಸರಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚಿಸ ಬೇಕು. ಧರ್ಮದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾ ಗಬೇಕು. ತೀರ್ಥಕ್ಷೇತ್ರಗಳ ಬಗ್ಗೆ ಉದಾಸೀನ ಸಲ್ಲದು. ಹಾಳಾಗುತ್ತಿರುವ ಜಿನಾಲಯಗಳತ್ತ ಎಲ್ಲರೂ ಜಾಗತರಾಗಬೇಕು’’ ಎಂದರು.

ಶ್ರೀ ಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಮಾತನಾಡಿ, ‘‘ಮಹಿಳಾ ಶಕ್ತಿ ಮಾತ ಶಕ್ತಿಯಾಗಿ ನಿಂತರೆ ಯಾವ ಕೆಲಸವೂ ನಿಲ್ಲುವುದಿಲ್ಲ. ಸಮಾಜ ಹಾಗೂ ಕ್ಷೇತ್ರಕ್ಕಾಗಿ ಮಾಡುವ ನಿಸ್ವಾರ್ಥ ಸೇವೆಯಿಂದ ಅನಿರೀಕ್ಷಿತ ಫಲಗಳನ್ನು ಪಡೆಯ ಬಹುದಾಗಿದೆ. ಕತತ್ವಶಕ್ತಿ, ನಿಷ್ಠೆ, ಭಕ್ತಿ ಹಾಗೂ ಗೌರವ ಭಾವನೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡುತ್ತದೆ. ಸಮಾಜ ಸೇವೆಯ ಮನೋಭಾವ ಎಲ್ಲರಲ್ಲಿ ಜಾಗತವಾಗಬೇಕು’’ ಎಂದರು.

ಶ್ರೀ ಮಠದ ವತಿಯಿಂದ ಹಾಗೂ ನಾನಾ ಸಂಘಟನೆಗಳಿಂದ ಸರಿತಾ ಜೈನ್ ಅವರನ್ನು ಅಭಿನಂದಿಸ ಲಾಯಿತು. ಸರಿತಾ ಜೈನ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿ ಗೌರವಾರ್ಪಣೆ ಮಾಡಿದರು.

ಸರಿತಾ ಪ್ರಥಮ ಮಹಿಳಾ ಅಧ್ಯಕ್ಷೆ: 117 ವರ್ಷಗಳ ಇತಿಹಾಸ ಹೊಂದಿರುವ ಅಖಿಲಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿರುವ ಚೆನ್ನೈನ ಸರಿತಾ ಮಹೇಂದ್ರ ಕುಮಾರ್ ಜೈನ್ ಮಹಿಳಾರತ್ನ, ಸಮಾಜರತ್ನ, ದಾನಚಿಂತಾಮಣಿ, ಶ್ರಾವಿಕಾರತ್ನ ಸೇರಿದಂತೆ ಹಲವು ಉಪಾಧಿಗಳಿಂದ ಪುರಸ್ಕೃತರಾಗಿದ್ದಾರೆ. ಭಾರತದಲ್ಲಿರುವ ಎಲ್ಲಾ ಪ್ರಾಚೀನ ತೀರ್ಥ ಕ್ಷೇತ್ರಗಳ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಮುಂತಾದ ಅಭಿವದ್ಧಿ ಕಾರ‌್ಯಗಳನ್ನು ಮಾಡಲು ಸಂಕಲ್ಪ ಮಾಡಿದ್ದಾರೆ. ಶ್ರೀಕ್ಷೇತ್ರದಲ್ಲಿ ತಮ್ಮ ಮಾತಶ್ರೀಯವರ ನೆನಪಿನಲ್ಲಿ ಅತಿಥಿ ನಿವಾಸ ನಿರ್ಮಾಣ ಮಾಡಿದ್ದಾರೆ. ತಮಿಳುನಾಡಿನ ಅರಿಹಂತಗಿರಿ, ರಾಜ್ಯದ ಕನಕಗಿರಿ, ಕಂಬದಹಳ್ಳಿ ಇತ್ಯಾದಿ ಕ್ಷೇತ್ರಗಳನ್ನೊಳಗೊಂಡಂತೆ 108 ಜಿನಮಂದಿರದ ಸಂಪೂರ್ಣ ಜೀರ್ಣೋದ್ಧಾರ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಾರ‌್ಯದರ್ಶಿ ಸಂತೋಷ್‌ಜೈನ್, ಅನಿಲ್‌ಸೇರ್, ಮಹಾ ಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಕಾರ‌್ಯಾಧ್ಯಕ್ಷ ಎಸ್.ಜಿತೇಂದ್ರಕುಮಾರ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾಅನಂತರಾಜ್, ಪೂರ್ಣಿಮಾ ಅನಂತ ಪದ್ಮನಾಭ, ನವರತ್ನ ಇಂದುಕುಮಾರ್, ಪುಷ್ಪ ಪಾಟೀಲ್, ವಿನೋದ್ ಬಾಕ್ಲಿವಾಲ್, ವೀರೇಶ್‌ಸೇಠ್, ಡಿ.ಆರ್.ಶಹಾ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ