ಆ್ಯಪ್ನಗರ

ಯುವ ಉದ್ಯಮಿಗಳ ಪ್ರೋತ್ಸಾಹಕ್ಕೆ ಸಂಸ್ಥೆ ಸ್ಥಾಪನೆ

ಅಸಂಘಟಿತರಾಗಿರುವ ತಾಲೂಕಿನ ವರ್ತಕರು, ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡಂತೆ ತಾಲೂಕು ವಾಣಿಜ್ಯ ಕೈಗಾರಿಕಾ ಮತ್ತು ವೃತ್ತಿಪರ ಸಂಸ್ಥೆ(ರಿ) ಆಸ್ತಿತ್ವಕ್ಕೆ ಬಂದಿದ್ದು, ಈ ಸಂಸ್ಥೆಯೂ ತಾಲೂಕಿನ ರೈತರು ಸೇರಿದಂತೆ ವರ್ತಕರು, ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳ ಹಿತಕಾಯಲು ಶ್ರಮಿಸಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಸಿ. ನವಲಗುಂದ ಹೇಳಿದರು.

ವಿಕ ಸುದ್ದಿಲೋಕ 18 Jun 2016, 9:00 am

ಅರಸೀಕೆರೆ: ಅಸಂಘಟಿತರಾಗಿರುವ ತಾಲೂಕಿನ ವರ್ತಕರು, ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡಂತೆ ತಾಲೂಕು ವಾಣಿಜ್ಯ ಕೈಗಾರಿಕಾ ಮತ್ತು ವೃತ್ತಿಪರ ಸಂಸ್ಥೆ(ರಿ) ಆಸ್ತಿತ್ವಕ್ಕೆ ಬಂದಿದ್ದು, ಈ ಸಂಸ್ಥೆಯೂ ತಾಲೂಕಿನ ರೈತರು ಸೇರಿದಂತೆ ವರ್ತಕರು, ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳ ಹಿತಕಾಯಲು ಶ್ರಮಿಸಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಸಿ. ನವಲಗುಂದ ಹೇಳಿದರು.

ಮೈಸೂರು ವಿಭಾಗದಲ್ಲೇ ಅರಸೀಕೆರೆ ಪ್ರಮುಖ ವಾಣಿಜ್ಯ ನಗರ ಎಂದು ಹೆಗ್ಗಳಿಕೆ ಹೊಂದಿದೆ. ಆದರೆ ತೆಂಗು ಬೆಳೆಗಾರರ ಸ್ಥಿತಿ ತಾಲೂಕಿನಲ್ಲಿ ದುಸ್ತರದಿಂದಿದ್ದರೇ, ವರ್ತಕರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇದನ್ನು ಮನಗಂಡು ಸಂಸ್ಥೆಯೂ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆ: ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಬಿ.ಎಸ್‌.ಸೇತುರಾಂ ಮಾತನಾಡಿ, ಸಂಸ್ಥೆಯ ಉದ್ಘಾಟನಾ ಸಮಾರಂಭ ಜೂ. 19ರಂದು ಸಂಜೆ 6 ಕ್ಕೆæ ನಗರದ ಟೌನ್‌ಕ್ಲಬ್‌ ಆವರಣದಲ್ಲಿ ನಡೆಯಲಿದೆ.ಸಾನ್ನಿಧ್ಯವನ್ನು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯಾಧ್ಯಕ್ಷ ರಾದ ತಲ್ಲಂ ಆರ್‌ ದ್ವಾರಕನಾಥ್‌ ಉದ್ಘಾಟಿಸುವರು. ಸಮಾರಂಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಮಾಜಿ ಅಡ್ವಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ, ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ್‌ ಎಂ.ಸಮೀವುಲ್ಲಾ, ಎಸ್‌.ಕೆ.ಸಿ.ಸಿ.ಐ ಸಂಸ್ಥೆಯ ಪ್ರಮುಖರಾದ ಎಂ.ಸಿ.ದಿನೇಶ್‌, ಕೆ.ರವಿ, ಎನ್‌.ಪಾರ್ಥಸಾರಥಿ, ಎಸ್‌.ಎನ್‌.ಸುಧಾಕರ್‌ಶೆಟ್ಟಿ, ಪ್ರಕಾಶ್‌ಮಂಡೋತ್‌ ಸೇರಿದಂತೆ ಖ್ಯಾತ ಉದ್ಯಮಿಗಳು ಭಾಗವಹಿಸುವುದಾಗಿ ಮಾಹಿತಿ ನೀಡಿದರು.

ಕಾರ್ಯದರ್ಶಿ ಕೆ.ಜಿ.ಗಣೇಶ್‌ಮೂರ್ತಿ, ಸಹಕೋಶಾಧ್ಯಕ್ಷ ಸಿ.ರಾಮಚಂದ್ರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ