Please enable javascript.ಹುಣಸೆ ಮರ ಸಾಗಣೆ: ಲಾರಿ, ಟ್ರ್ಯಾಕ್ಟರ್‌ ವಶ - ಹುಣಸೆ ಮರ ಸಾಗಣೆ: ಲಾರಿ, ಟ್ರ್ಯಾಕ್ಟರ್ ವಶ - Vijay Karnataka

ಹುಣಸೆ ಮರ ಸಾಗಣೆ: ಲಾರಿ, ಟ್ರ್ಯಾಕ್ಟರ್‌ ವಶ

ವಿಕ ಸುದ್ದಿಲೋಕ 4 Jun 2017, 9:00 am
Subscribe

ಅನುಮತಿ ಇಲ್ಲದೆ ಸಾಗಿಸುತ್ತಿದ್ದ ಹುಣಸೆ ಮರದ ನಾಟ ತುಂಬಿದ್ದ 1ಲಾರಿ ಮತ್ತು ಟ್ರಾಕ್ಟರ್‌ನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಹುಣಸೆ ಮರ ಸಾಗಣೆ: ಲಾರಿ, ಟ್ರ್ಯಾಕ್ಟರ್‌ ವಶ

ಹೊಳೆನರಸೀಪುರ: ಅನುಮತಿ ಇಲ್ಲದೆ ಸಾಗಿಸುತ್ತಿದ್ದ ಹುಣಸೆ ಮರದ ನಾಟ ತುಂಬಿದ್ದ 1ಲಾರಿ ಮತ್ತು ಟ್ರಾಕ್ಟರ್‌ನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಚಾಲಕ ಪರಾರಿಯಾಗಿದ್ದು, 1 ಲಕ್ಷ ರೂ ಮೌಲ್ಯದ ಮರ ಹಾಗೂ ಲಾರಿ, ಟ್ರಾಕ್ಟರ್‌ಗಳನ್ನು ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಾಸನದ ಕಡೆಯಿಂದ ರಾಗೀಹಳ್ಳಿ ಸುತ್ತಮುತ್ತಲ ಗ್ರಾಮಕ್ಕೆ ಹೊಗೆಸೊಪ್ಪು ಬೇಯಿಸಿ ಸಂಸ್ಕರಿಸಲು ಉರುವಲುವಾಗಿ ಬಳಸಲು ಸಾಗಾಣಿಕೆ ನಡೆಸಲಾಗುತ್ತಿತ್ತು. ರಾತ್ರಿ ಗಸ್ತಿನಲ್ಲಿದ್ದಾಗ ಶುಕ್ರವಾರ ರಾತ್ರಿ ರಾಗೀಹಳ್ಳಿ ಬಳಿ ಸಾಗುತ್ತಿದ್ದ ಲಾರಿ , ಟ್ರಾಕ್ಟರ್‌ ತಡೆದು ಪರಿಶೀಲಿಸಿದಾಗ ಪರವಾನಗಿ ಪಡೆದಿಲ್ಲದ್ದು ಕಂಡುಬಂತು. ಚಾಲಕರಿಬ್ಬರೂ ಪರಾರಿಯಾದರು ಎಂದು ವಲಯ ಅರಣ್ಯಾಧಿಕಾರಿ ಅನಿಲ್‌ಕುಮಾರ್‌ ತಿಳಿಸಿದ್ದಾರೆ. ಸಿಬ್ಬಂದಿಗಳಾದ ರಂಗಸ್ವಾಮಿ, ಪ್ರದೀಪ್‌ ಕಾರ್ಯಾಚರಣೆಯಲ್ಲಿದ್ದರು. ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ