ಆ್ಯಪ್ನಗರ

ಅರಸೀಕೆರೆ: ಸಿಎಂ ಮಠಾಧೀಶರ ಕ್ಷಮೆಯಾಚಿಸಲಿ

ಸಿಎಂ ಮಠಾಧೀಶರ ಕ್ಷಮೆಯಾಚಿಸಲಿ *ಅರಸೀಕೆರೆ ತಾಲೂಕು ಸಾದು ಲಿಂಗಾಯಿತ ಸಮಾಜ ಒತ್ತಾಯ ------------------- ವಿಕ ಸುದ್ದಿಲೋಕ ಅರಸೀಕೆರೆ ಸಮಾಜಕ್ಕೆ ಮಾರ್ಗದರ್ಶನ ಮಾಡುವ ...

Vijaya Karnataka 26 May 2018, 5:00 am
ಅರಸೀಕೆರೆ: ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠಾಧೀಶರ ಬಗ್ಗೆ ಲಗುವಾಗಿ ಮಾತನಾಡುವುದನ್ನು ಬಿಟ್ಟು ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸಿದರೆ ರಾಜ್ಯ ಅಭಿವೃದ್ಧಿಯಾಗುವ ಜೊತೆಗೆ ತಮಗೂ ಉತ್ತಮ ಹೆಸರು ಬರುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರ್‌ಸ್ವಾಮಿ ಅವರಿಗೆ ತಾಲೂಕು ಸಾದು ಲಿಂಗಾಯಿತ ಸಮಾಜದ ಅಧ್ಯಕ್ಷ ರೇವಣ್ಣ ಕಿವಿಮಾತು ಹೇಳಿದರು.
Vijaya Karnataka Web hassan cm hd kumara swamy appology to swamiji
ಅರಸೀಕೆರೆ: ಸಿಎಂ ಮಠಾಧೀಶರ ಕ್ಷಮೆಯಾಚಿಸಲಿ


ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಅವರು ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೇ ನಾಡಿನ ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ತಮ್ಮ ಸಮಯ ಸಾಧನಕತೆಯ ಹೇಳಿಕೆ ನೀಡಿರುವುದು ನಾಡಿನ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಮಠಾಧಿಶರನ್ನು ರಾಜಕೀಯಕ್ಕೆ ಬನ್ನಿ ಎಂಬ ಉದ್ಧಟನತನದ ಹೇಳಿಕೆಯನ್ನು ಹಿಂಪಡೆಯುವ ಮೂಲಕ ನಾಡಿನ ಸಾಧು ಸಂತರ ಕ್ಷ ಮೆಯಾಚಿಸಬೇಕು. ಮುಖ್ಯಮಂತ್ರಿಗಳು ಮಠಾಧೀಶರ ಕ್ಷ ಮೆಯಾಚಿಸದೆ ಹೋದಲ್ಲಿ ಪೀಠಾಭಿಮಾನಿಗಳು ರಾಜ್ಯವಾಪ್ತಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಪಂ ಸದಸ್ಯ ಮಾಡಾಳು ಸ್ವಾಮಿ, ಅಗ್ಗುಂದ ಶೇಖರಣ್ಣ, ಸಮಾಜದ ಮುಖಂಡರಾದ ಎಪಿಎಂಸಿ ಮಾಜಿ ಸದಸ್ಯ ಗಂಗಾಧರ್‌ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರು ಗಂಗಣ್ಣ, ಮಲಿಂಗಪ್ಪ, ದಿವಾಕರ್‌ ಬಾಬು, ಅಣ್ಣನಾಯ್ಕನಹಳ್ಳಿ ವಿಜಯ್‌ ಕುಮಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ