ಆ್ಯಪ್ನಗರ

ಸಿಎಂ ಬದಲಾಗಿದ್ದಾರೆ ಎಂದು ನಂಬಲು ನನಗೆ ಈಗಲೂ ಆಗುತ್ತಿಲ್ಲ - ಪ್ರೀತಂ ಗೌಡ

ಬಿಎಸ್‌ವೈ ಪ್ರಶ್ನಾತೀತ ನಾಯಕರು, ಬಿಜೆಪಿಯ ಹಿರಿಯ ನಾಯಕರು. ಹಾಗಾಗಿ ಬದಲಾಗಲ್ಲ ಎಂದು ನಂಬಿದ್ದೆ ಎಂದಿರುವ ಹಾಸನ ಶಾಸಕ ಪ್ರೀತಂ ಗೌಡ, ಪಕ್ಷ ಏನು ಜವಾಬ್ದಾರಿ ಕೊಡುತ್ತೋ, ಅದನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ​ ಎಂದಿದ್ದಾರೆ.

Vijaya Karnataka Web 29 Jul 2021, 12:00 am

ಹೈಲೈಟ್ಸ್‌:

  • ಸಿಎಂ ಬದಲಾವಣೆ ಆಗಲ್ಲ ಎಂದು ನಾನೊಬ್ಬ ಬಲವಾಗಿ ನಂಬಿದ್ದೆ ಎಂದ ಹಾಸನ ಶಾಸಕ ಪ್ರೀತಂ ಗೌಡ
  • ಈಗಲೂ ಅವರು ಬದಲಾಗಿದ್ದಾರೆ ಎಂದು ನಂಬಲು ನನಗೆ ಆಗುತ್ತಿಲ್ಲ ಎಂದ ಶಾಸಕರು
  • ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದ ಪ್ರೀತಂ ಗೌಡ
  • ನಾನೆಂದೂ ಅದು ಮಾಡಿ, ಇದು ಮಾಡಿ ಎಂದು ಕೇಳಿಲ್ಲ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷೆ ಹೊರಹಾಕಿದ ಶಾಸಕರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Preetam Gowda
ಹಾಸನ: ಸಿಎಂ ಬದಲಾವಣೆ ಆಗಲ್ಲ ಎಂದು ನಾನೊಬ್ಬ ಬಲವಾಗಿ ನಂಬಿದ್ದೆ. ಈಗಲೂ ಅವರು ಬದಲಾಗಿದ್ದಾರೆ ಎಂದು ನಂಬಲು ನನಗೆ ಆಗುತ್ತಿಲ್ಲ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, "224 ಶಾಸಕರಲ್ಲಿ ನಾನೊಬ್ಬ ಬಲವಾಗಿ ವಾದ ಮಾಡುತ್ತಿದ್ದೆ. ಬಿಎಸ್‌ವೈ ಪ್ರಶ್ನಾತೀತ ನಾಯಕರು, ಬಿಜೆಪಿಯ ಹಿರಿಯ ನಾಯಕರು. ಹಾಗಾಗಿ ಬದಲಾಗಲ್ಲ ಎಂದು ನಂಬಿದ್ದೆ," ಎಂದು ತಿಳಿಸಿದ್ದಾರೆ.

ಆದರೂ, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ. ಹೀಗಿದ್ದೂ ಮೋದಿಯವರು, ಅಮಿತ್ ಶಾ ಅವರು ಯಡಿಯೂರಪ್ಪರ ಹೋರಾಟವನ್ನು ಪರಿಗಣಿಸಿ ಅವಕಾಶ ನೀಡಿದ್ದರು. ಯಡಿಯೂರಪ್ಪನವರೇ ಯುವಕರಿಗೆ ಅವಕಾಶ ಕೊಡಬೇಕೆಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನ ಯಾರೂ ಪದಚ್ಯುತಿಗೊಳಿಸಿಲ್ಲ ಎಂದು ಪ್ರೀತಂ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್‌ವೈ ಆಪ್ತ ಸಿಎಂ, ನನಸಾಗಲಿವೆ ಯಡಿಯೂರಪ್ಪರ ಶಿವಮೊಗ್ಗ ಅಭಿವೃದ್ಧಿಯ ಕನಸು
ಇನ್ನು, "ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಯಾವುದೇ ಕೆಲಸ ಕೊಟ್ಟರೂ 24x7 ಕೆಲಸ ಮಾಡೋ ವ್ಯಕ್ತಿ. ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ," ಎಂದು ಪರೋಕ್ಷವಾಗಿ ಸಚಿವನಾಗೋ ಆಸೆ ಹೊರ ಹಾಕಿದ್ದಾರೆ ಪ್ರೀತಂಗೌಡ.

"ನಾನೆಂದೂ ಅದು ಮಾಡಿ, ಇದು ಮಾಡಿ ಎಂದು ಕೇಳಿಲ್ಲ. ಹಿಂದೆಯೂ ಕೇಳಿಲ್ಲ, ಮುಂದೆಯೂ ಕೇಳಲ್ಲ" ಎನ್ನುತ್ತಲೇ ಶಾಸಕರು ಸಚಿವ ಸ್ಥಾನದ ಆಸೆ ಹೊರ ಹಾಕಿದ್ದಾರೆ.

ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ನನ್ನ ಮಂತ್ರಿ ಮಾಡಿ ಎಂದು ಯಾರ ಬಳಿಯು ಕೇಳಲ್ಲ. ಈ ಭಾಗದಲ್ಲಿ ಬಿಜೆಪಿಗೆ ಸಚಿವ ಸ್ಥಾನ ಅಗತ್ಯ ಇದೆ ಎಂದು ಸಿಎಂ ಹಾಗೂ ವರಿಷ್ಠರಿಗೆ ಅನ್ನಿಸಿದರೆ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ